ತತ್ವಶಾಸ್ತ್ರದ ಅರಿವಿಲ್ಲದಿದ್ದರೆ ಆಳವಾದ ಸಾಹಿತ್ಯ ರಚನೆ ಅಸಾಧ್ಯ ಮಾನಸ ಪ್ರಶಸ್ತಿ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯ
ಚಾಮರಾಜನಗರ

ತತ್ವಶಾಸ್ತ್ರದ ಅರಿವಿಲ್ಲದಿದ್ದರೆ ಆಳವಾದ ಸಾಹಿತ್ಯ ರಚನೆ ಅಸಾಧ್ಯ ಮಾನಸ ಪ್ರಶಸ್ತಿ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯ

December 22, 2018

ಕೊಳ್ಳೇಗಾಲ: ‘ವಿದ್ವ ತ್ತನ್ನೇ ಸಂಪಾದಿಸಬೇಕೆಂದು, ನಾನು ಪಣ ತೊಟ್ಟೆ. ನಾನು ಯಾರಿಂದಲೋ ಸಹಾಯ ಪಡೆದು ಲೇಖನ ರಚಿಸಲು ಹೊರಟಿದ್ದರೆ ನಾನು ಸೃಜನಶೀಲ ಲೇಖನಗಳನ್ನು ರಚಿ ಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಮಾನಸ ಪ್ರಶಸ್ತಿ ಪುರಸ್ಕøತ ಡಾ.ಎಸ್. ಎಲ್.ಭೈರಪ್ಪ ಹೇಳಿದರು.

ನಗರದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರ ವಾರ ನಡೆದ ಮಾನಸೋತ್ಸವ ಕಾರ್ಯ ಕ್ರಮದಲ್ಲಿ ಮಾನಸ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಒಬ್ಬ ಸೃಜನಶೀಲ ಲೇಖ ಕನು ಯಾವ ವಿಷಯ, ಯಾವ ರೀತಿ ಸಿಗು ತ್ತದೆ ಎಂಬುದನ್ನು ತಿಳಿದಿರಬೇಕು. ನವೋ ದಯ ಸಾಹಿತ್ಯ ರಚಿಸುವ ಸಾಹಿತಿಗಳಿಗೆ ತಕ್ಕ ಮಟ್ಟಿಗಿನ ವಿದ್ವತ್ತಿತ್ತು. ಆ ಕಾಲಘಟ್ಟ ದಲ್ಲಿ ಗಟ್ಟಿ ಸಾಹಿತ್ಯ ಸೃಷ್ಟಿಯಾಗಿತ್ತು. ನಂತ ರದ ಕಾಲದ ಸೃಜನಶೀಲ ಲೇಖಕರಿಂದ ಗಟ್ಟಿ ಸಾಹಿತ್ಯ ಸೃಷ್ಟಿಯಾಗಲಿಲ್ಲ ಎಂದು ವಿಷಾದಿಸಿದರು. ತತ್ವಶಾಸ್ತ್ರವಿಲ್ಲದೇ ಆಳವಾದ ಸಾಹಿತ್ಯ ರಚಿಸಲು ಸಾಧ್ಯವಿಲ್ಲ. ನಮ್ಮ ಸಮಾ ಜದಲ್ಲಿ ನಡೆಯುತ್ತಿರುವ ಎಲ್ಲಾ ಅನಾಹು ತಗಳು ಸಮಸ್ಯೆಗಳು ಪ್ರಸ್ತುತ ರಾಜಕೀಯ ಸಮಸ್ಯೆಯಾಗಿದೆ ಎಂದರು.

ನಾನು ಕಥೆಗಾರ: ನಾನು ಹೇಳಿ ಕೇಳಿ ಕಥೆ ಗಾರ. ನನಗೆ ಭಾಷಣ ಮಾಡುವುದು ಬಹಳ ಕಷ್ಟಕರವಾದ ಕೆಲಸ. ಆದರೂ, ಇದು ನನಗೆ ಬಿಡಲಾಗದ ಕಲಾಪ. ನಾನು ಅದೃಷ್ಟಶಾಲಿ, ನನ್ನ 14ನೇ ವಯಸ್ಸಿನಲ್ಲಿ ಸತ್ತ ನನ್ನ ತಮ್ಮ ನನ್ನು ಹೆಗಲಮೇಲೆ ಹೊತ್ತುಕೊಂಡು ಮಣ್ಣು ಮಾಡಿದೆ. ಚಿಕ್ಕಂದಿನಲ್ಲೆ ನನ್ನ ತಾಯಿ ಕಳೆ ದುಕೊಂಡೆ. ಹಲವು ಬಾರಿ ತಾಯಿಯನ್ನು ಕನ ಸಿನಲ್ಲಿ ಕಾಣುತ್ತೇನೆ. ಪ್ಲೇಗ್ ರೋಗದಿಂದ ನಾನು ಉಳಿದುಕೊಂಡೆ. ಆ ದಿನವೇ ಅಕ್ಕ-ತಮ್ಮ ನನ್ನು ಕಳೆದುಕೊಂಡೆ ಎಂದು ತಮ್ಮ ನೆನ ಪಿನ ಬುತ್ತಿಯನ್ನು ಬಿಚ್ಚಿಟ್ಟರು.
ಫಿಲಾಸಫಿ ಅಧ್ಯನ ಮಾಡಿದರೆ ನೌಕರಿ ದೊರೆಯುದಿಲ್ಲ ಎಂಬ ಮಾತಿದೆ. ಇದು ವಾಸ್ತವ ಸತ್ಯ. ಆದರೂ ನಾನು ಫಿಲಾಸಫಿ ಅಧ್ಯಯನ ಮಾಡಿ ಫಿಲಾಸಫಿ ಮೂಲ ಕವೇ ಸಾಹಿತಿಯಾದೆ ಎಂದರು.

ಸಾಹಿತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಭೈರಪ್ಪ ಅವರಿಗೆ ಮಾನಸ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು, ಭೈರಪ್ಪ ಅವರನ್ನು ಜನಪ್ರಿಯ ಸಾಹಿತಿ ಎಂದು ಸಂಬೋ ಧಿಸಲಾಗುತ್ತದೆ. ಅವರು ಜನಪ್ರಿಯರಲ್ಲ, ಅತ್ಯಂತ ಸರ್ವಶ್ರೇಷ್ಠ ಕಾದಂಬರಿಕಾರರು. ಕಿರಿಯನಾದ ನನ್ನಿಂದ ಅವರಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ನನ್ನ ಜೀವ ನದ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಬಾವುಕರಾದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಪ್ರದಾನ್ ಗುರುದÀತ್, ಪೆÇ್ರ.ಶಿವ ರಾಜಪ್ಪ, ಯುವ ವಿಜ್ಞಾನಿ ಪ್ರತಾಪ್, ಸಂಸ್ಥೆಯ ಡಾ.ದತ್ತೇಶ್‍ಕುಮಾರ್, ನಾಗರಾಜು ಇನ್ನಿತರರು ಇದ್ದರು.

Translate »