ವಿಷ ಪ್ರಸಾದಕ್ಕೂ ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ ಸಾಲೂರು ಮಠಾಧೀಶರಾದ ಶ್ರೀ ಪಟ್ಟದ ಗುರುಸ್ವಾಮಿ ಸ್ಪಷ್ಟನೆ
ಚಾಮರಾಜನಗರ

ವಿಷ ಪ್ರಸಾದಕ್ಕೂ ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ ಸಾಲೂರು ಮಠಾಧೀಶರಾದ ಶ್ರೀ ಪಟ್ಟದ ಗುರುಸ್ವಾಮಿ ಸ್ಪಷ್ಟನೆ

December 22, 2018

ಕೊಳ್ಳೇಗಾಲ: ಸುಳವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದಿ ರುವ ವಿಷ ಪ್ರಸಾದ ಪ್ರಕರಣಕ್ಕೂ, ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾಲೂರು ಮಠಾಧೀಶರಾದ ಶ್ರೀ ಪಟ್ಟದ ಗುರುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿ ರುವ ಅವರು, ಕಿಚ್‍ಗುತ್ ಮಾರಮ್ಮ ದೇವ ಸ್ಥಾನ ಟ್ರಸ್ಟ್‍ಗೂ, ಸಾಲೂರು ಮಠಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇಮ್ಮಡಿ ಮಹದೇವಸ್ವಾಮಿ ಅವರು ವೈಯ ಕ್ತಿಕ ನೆಲೆಗಟ್ಟಿನಲ್ಲಿ ಟ್ರಸ್ಟ್‍ನ ಅಧ್ಯಕ್ಷರಾಗಿದ್ದರು ಎಂದು ಅವರು ಹೇಳಿದ್ದಾರೆ.

ಸಾಲೂರು ಮಠವು 6-7 ಶತಮಾನ ಗಳ ಇತಿಹಾಸ ಹೊಂದಿದ್ದು, 13-14ನೇ ಶತಮಾನದಲ್ಲಿ ಶ್ರೀ ಮಲೆಮಹದೇಶ್ವರರು ತಮ್ಮ ಗುರುಗಳಾದ ಶಾಂತಮಲ್ಲಿ ಕಾರ್ಜುನ ಸ್ವಾಮಿಗಳನ್ನೊಳಗೂಡಿ ಈ ಮಠವನ್ನು ನಿರ್ಮಿಸಿದ್ದರು. ಮಠವು 18 ಮಠಾಧಿಪತಿಗಳನ್ನು ಕಂಡಿದ್ದು, ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಅಕ್ಷರ ದಾಸೋಹ ಮತ್ತು ಭಕ್ತಾದಿಗಳಿಗೆ ತ್ರಿಕಾಲ ಅನ್ನ ದಾಸೋಹ ಮಾಡಿಕೊಂಡು ಬರುತ್ತಿದೆ ಎಂದಿರುವ ಅವರು, ಸಾಲೂರು ಮಠಕ್ಕೆ ತಾವೇ (ಶ್ರೀ ಪಟ್ಟದ ಗುರುಸ್ವಾಮಿ) ಪೀಠಾ ಧಿಪತಿಯಾಗಿದ್ದು, 1994ರಲ್ಲಿ ಕನಕಪುರ ಸ್ವಾಮಿಗಳ ಸಮ್ಮುಖದಲ್ಲಿ ತಾವು ಶ್ರೀಮಠದ ಎಲ್ಲಾ ಸ್ಥಿರಾಸ್ತಿಗಳನ್ನೂ ನೋಡಿಕೊಂಡು ಹೋಗಬೇಕೆಂದೂ, ಇಮ್ಮಡಿ ಮಹದೇವ ಸ್ವಾಮಿಗಳು ಮಠಕ್ಕೆ ಸೇರಿದ ಶಿಕ್ಷಣ ಸಂಸ್ಥೆ ಗಳನ್ನು ನೋಡಿಕೊಳ್ಳಬೇಕೆಂದೂ ಭಕ್ತರ ಅಪೇಕ್ಷೆಯಂತೆ ತೀರ್ಮಾನವಾಗಿ ಅದ ರಂತೆ ನಡೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ.

ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದಿರುವ ದುರ್ಘಟನೆಗೆ ಮಠವು ಶೋಕ ವ್ಯಕ್ತಪಡಿಸಿದ್ದು, ದುರಂತದಲ್ಲಿ ಅನಾರೋ ಗ್ಯಕ್ಕೆ ತುತ್ತಾಗಿ, ಚಿಕಿತ್ಸೆ ಪಡೆಯುತ್ತಿರುವ ಭಕ್ತಾದಿಗಳಿಗೆ ಮಠ ನೆರವು ನೀಡಲಿದೆ. ಈ ದುರಂತದಲ್ಲಿ ಅನಾಥರಾದವರಿಗೆ ಹಾಗೂ ವೃದ್ಧರಿಗೆ ಶ್ರೀ ಮಠವು ಆಶ್ರಯ ಒದಗಿಸುವುದರ ಜೊತೆಗೆ ತೊಂದರೆ ಗೊಳಗಾದ ಎಲ್ಲಾ ಮಕ್ಕಳ ಶಿಕ್ಷಣದ ಉಸ್ತು ವಾರಿಯನ್ನೂ ಶ್ರೀಮಠವೇ ನೋಡಿ ಕೊಳ್ಳಲಿದೆ ಎಂದು ಸಾಲೂರು ಮಠದ ಹಿರಿಯ ಶ್ರೀಗಳು ತಿಳಿಸಿದ್ದಾರೆ.

Translate »