ಕೇರಳ, ಕರ್ನಾಟಕದಲ್ಲಿ ಸುರಿಯಲಿದೆ ಭಾರೀ ಮಳೆ ಹವಾಮಾನ ಇಲಾಖೆ ಮುನ್ಸೂಚನೆ…
ಮೈಸೂರು

ಕೇರಳ, ಕರ್ನಾಟಕದಲ್ಲಿ ಸುರಿಯಲಿದೆ ಭಾರೀ ಮಳೆ ಹವಾಮಾನ ಇಲಾಖೆ ಮುನ್ಸೂಚನೆ…

October 5, 2018

ನವದೆಹಲಿ:  ಕೇರಳ, ಕರ್ನಾ ಟದಲ್ಲಿ ಹಲವು ಅನಾಹುತಗಳನ್ನು ಉಂಟುಮಾಡಿ, ನರಬಲಿ ಪಡೆದ ವರುಣ ಈಗ ಮತ್ತೆ ದಾಂಗುಡಿ ಇಡ ಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡು, ಪುದುಚೆರಿ ಹಾಗೂ ಕೇರಳ ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗ, ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋ ಬಾರ್‍ಗಳಲ್ಲಿ ಅಕ್ಟೋಬರ್ 4ರಿಂದ 8ರ ನಡುವೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಆಗ್ನೇಯ ಅರಬ್ಬಿ ಸಮುದ್ರ ದಲ್ಲಿ ವಾಯುಭಾರ ಕುಸಿತ ಉಂಟಾಗಿ, ಮುಂದಿನ 48 ಗಂಟೆಗಳಲ್ಲಿ ವಾಯುವ್ಯ ಭಾಗದತ್ತ ಸಾಗಲಿದೆ. ಈ ವೇಳೆ ಸಮುದ್ರ ದಲ್ಲಿ ಭಾರಿ ಬಿರುಗಾಳಿ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸಹ ಸೂಚನೆ ನೀಡಲಾಗಿದೆ.

Translate »