ಮಹಿಳೆಯರು ಸಂಕಷ್ಟದಲ್ಲಿದ್ದರೆ 7 ಸೆಕೆಂಡ್‍ಗಳಲ್ಲಿ ‘ಸುರಕ್ಷಾ’ ಸಹಾಯ
ಮೈಸೂರು

ಮಹಿಳೆಯರು ಸಂಕಷ್ಟದಲ್ಲಿದ್ದರೆ 7 ಸೆಕೆಂಡ್‍ಗಳಲ್ಲಿ ‘ಸುರಕ್ಷಾ’ ಸಹಾಯ

December 3, 2019

ಬೆಂಗಳೂರು, ಡಿ.2: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ವರದಿಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ‘ಸುರಕ್ಷಾ ಆ್ಯಪ್’ ಅನ್ನು ಬೆಂಗಳೂರು ವ್ಯಾಪ್ತಿಯಲ್ಲಿರುವ ಮಹಿಳೆಯರು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕು ಎನ್ನುವ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. 2017ನೇ ಸಾಲಿನ ಏಪ್ರಿಲ್ 10ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರ ಪೆÇಲೀಸ್ ಆಯುಕ್ತ ಪ್ರವೀಣ್‍ಸೂದ್ ಅವರು ಸುರಕ್ಷಾ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದರು. ಇದೀಗ ಗೂಗಲ್ ಫ್ಲೇನಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ಆ್ಯಪ್ ಕಾರ್ಯವೇನು?: ಮಕ್ಕಳು, ಯುವತಿಯರು, ಮಹಿಳೆಯರು ಯಾವುದಾದರು ಸಮಸ್ಯೆಯಲ್ಲಿದ್ದಾಗ ಸುರಕ್ಷಾ ಆ್ಯಪ್‍ನಲ್ಲಿರುವ ಕೆಂಪು ಬಣ್ಣದ ಗುಂಡಿಯನ್ನು ಒತ್ತಿದರೆ ಸಾಕು, ಕೂಡಲೇ ಸ್ಥಳೀಯ ಪೆÇಲೀಸ್ ಠಾಣೆಗೆ ಹಾಗೂ ಇತರ ಕಾಂಟಾಕ್ಟ್‍ಗಳಿಗೆ ಸಂದೇಶ ರವಾನೆಯಾಗು ತ್ತದೆ. ಅಷ್ಟೇ ಅಲ್ಲದೆ, ಸಂತ್ರಸ್ತರು ಇರುವ ಸ್ಥಳವು ಕೂಡಾ ಆ್ಯಪ್ ಮೂಲಕ ಅವರಿಗೆ ತಿಳಿಯುತ್ತದೆ. ಈ ಆಧಾರ ದಲ್ಲಿ ಪೆÇಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗುತ್ತಾರೆ.

7 ಸೆಕೆಂಡ್‍ನಲ್ಲಿ ಸಂದೇಶ: ಹೈದರಾಬಾದ್‍ನಲ್ಲಿ ನಡೆದ ಘಟನೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆ ಹಿನ್ನೆಲೆ ಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ರಕ್ಷಣೆ ಒದಗಿಸುವು ದಕ್ಕೆ ನಾವು ಬದ್ಧರಾಗಿದ್ದೇವೆ. ಸಹಾಯವಾಣಿ 100ಕ್ಕೆ ಕರೆ ಮಾಡಿದರೆ 7 ಸೆಕೆಂಡ್‍ನಲ್ಲಿ ನಿಮಗೆ ಪ್ರತಿಕ್ರಿಯೆ ಬರುತ್ತದೆ. ಅಲ್ಲದೇ ಕರೆ ಮಾಡಿದವರ ಮೊಬೈಲ್‍ಗೆ ಸಂದೇಶ ರವಾನೆಯಾಗುತ್ತದೆ. ಅದರ ಜತೆಗೆ ಶೀಘ್ರವಾಗಿ ಹೊಯ್ಸಳ ವಾಹನ ಪೆÇಲೀಸರು ನಿಮ್ಮ ಬಳಿ ಬರುತ್ತಾರೆ. ಪ್ರತಿ ಠಾಣೆಗೆ 2ರಂತೆ ಹೊಯ್ಸಳ ವಾಹನಗಳಿದ್ದು, ಸಂತ್ರಸ್ತರ ನೆರವಿಗೆ ಧಾವಿಸಲಿವೆ. ಈಗಾಗಲೇ ಕಮಾಂಡ್ ಸೆಂಟರ್‍ನಲ್ಲೂ ಸೂಚನೆ ನೀಡಿದ್ದೇನೆ ಎಂದರು.

 

Translate »