ಎನ್‍ಆರ್ ಸಂಚಾರ ಠಾಣೆಗೆ ಹೈವೇ ಗಸ್ತು ವಾಹನ ಸೇವೆ
ಮೈಸೂರು

ಎನ್‍ಆರ್ ಸಂಚಾರ ಠಾಣೆಗೆ ಹೈವೇ ಗಸ್ತು ವಾಹನ ಸೇವೆ

January 18, 2020

ಮೈಸೂರು, ಜ. 17(ಆರ್‍ಕೆ)- ಮೈಸೂ ರಿನ ಎನ್‍ಆರ್ ಸಂಚಾರ ಠಾಣೆಗೆ ಹೊಸ ಇನ್ನೋವಾ ಕ್ರಿಸ್ಟಾ ಹೈವೇ ಗಸ್ತು ವಾಹನ ವನ್ನು ಒದಗಿಸಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಲ್ಲಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಮಹಿಳೆಯರ ನೆರವಿಗೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಅನು ಕೂಲವಾಗುವಂತೆ ಈ ಹೈವೇ ಗಸ್ತು ವಾಹನ ವನ್ನು ಮೈಸೂರು ನಗರ ಪೊಲೀಸ್ ಘಟಕದ ವತಿಯಿಂದ ಒದಗಿಸಲಾಗಿದೆ.

ವಾಹನದಲ್ಲಿ 1 ಕ್ಯಾಮರಾ, 1 ಸ್ಪೀಡ್ ರೀಡರ್, 1 ಸರ್ಕುಲೇಟ್ ಲೈಟ್, ಗಾಯಾಳು ಗಳನ್ನು ಸಾಗಿಸಲು ಸ್ಟ್ರೆಚ್ಚರ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ಸಾಮಗ್ರಿಗಳನ್ನು ಒದಗಿ ಸಲಾಗಿದೆ. ಓರ್ವ ಎಎಸ್‍ಐ, ಇಬ್ಬರು ಸಿಬ್ಬಂದಿ ಹಾಗೂ ಚಾಲಕ ವಾಹನದಲ್ಲಿ ಕರ್ತವ್ಯ ನಿರ್ವಹಿಸಲಿದ್ದು, 3 ಪಾಳಿಯಂತೆ ದಿನದ 24 ಗಂಟೆಯೂ ಹೆದ್ದಾರಿಯಲ್ಲಿ ಗಸ್ತು ತಿರುಗುವರು. ಅಪಘಾತವಷ್ಟೇ ಅಲ್ಲದೆ, ದರೋಡೆ, ಸುಲಿಗೆಯಂತಹ ಅಪರಾಧ ಪ್ರಕರಣಗಳ ಬಗ್ಗೆಯೂ ನಿಗಾ ವಹಿಸುವ ಹೈವೇ ಗಸ್ತು ವಾಹನವು, ಅನುಮಾನಾ ಸ್ಪದ ವಾಹನಗಳನ್ನೂ ಗಮನಿಸಿ ನಗರ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವ ಮೂಲಕ ಸಿಬ್ಬಂದಿ ಅಪರಾಧ ಕೃತ್ಯ ತಡೆಯಲು ಕ್ರಮ ವಹಿಸಬೇಕಾಗಿದೆ. ತುರ್ತು ಸಂದರ್ಭದಲ್ಲಿ ಈ ವಾಹನದ ನೆರವು ಬೇಕಾದಲ್ಲಿ ಟೋಲ್ ಫ್ರೀ ನಂಬರ್ 112ಗೆ ಕರೆ ಮಾಡಬಹು ದಾಗಿದೆ ಎಂದು ಎನ್‍ಆರ್ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ದಿವಾಕರ್‍ಗೌಡ ತಿಳಿಸಿದ್ದಾರೆ.

 

Translate »