ಹನಿಟ್ರ್ಯಾಪ್ ತನಿಖೆ ಚುರುಕು: ರಾಜ್ಯದ 10ಕ್ಕೂ ಹೆಚ್ಚು ಶಾಸಕರ ರಾಸಲೀಲೆ ವೀಡಿಯೋ ಸೆರೆ: ದೂರು ನೀಡಲು ಹಿಂದೇಟು
ಮೈಸೂರು

ಹನಿಟ್ರ್ಯಾಪ್ ತನಿಖೆ ಚುರುಕು: ರಾಜ್ಯದ 10ಕ್ಕೂ ಹೆಚ್ಚು ಶಾಸಕರ ರಾಸಲೀಲೆ ವೀಡಿಯೋ ಸೆರೆ: ದೂರು ನೀಡಲು ಹಿಂದೇಟು

November 30, 2019

ಬೆಂಗಳೂರು, ನ.29- ಜನಪ್ರತಿನಿಧಿಗಳ ಹನಿ ಟ್ರ್ಯಾಪಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಈ ಜಾಲದಲ್ಲಿ ಇಬ್ಬರು ಅನರ್ಹ ಶಾಸಕರು ಕೂಡ ಸಿಲುಕಿದ್ದಾರೆ ಎಂಬ ವಿಷಯ ಇದೀಗ ಬಯಲಿಗೆ ಬಂದಿದೆ.

ಪಕ್ಷ ಭೇದವಿಲ್ಲದೆ ಎಲ್ಲಾ ಪಕ್ಷದ ಶಾಸಕರೂ ಹನಿ ಟ್ರ್ಯಾಪಿಂಗ್ ಜಾಲದೊಳಗೆ ಸಿಲುಕಿರುವುದು ಪೆÇಲೀಸ್ ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಿರುತೆರೆ ನಟಿಯರನ್ನು ಬಳಸಿ ಕೊಂಡು 10ಕ್ಕೂ ಹೆಚ್ಚು ಶಾಸಕರಿಗೆ ಹನಿಟ್ರ್ಯಾಪ್ ಬಲೆ ಬೀಸಲಾಗಿತ್ತು ಎಂಬುದು ಕೂಡ ಬೆಳಕಿಗೆ ಬಂದಿದ್ದು, ಈ ವಿಷಯ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ.

ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಗದೆ ಅಲೆದಾಡುತ್ತಿದ್ದ ನಟಿಯರನ್ನು ಆರೋಪಿ ರಘು ಗುರಿಯಾಗಿಸಿಕೊಳ್ಳುತ್ತಿದ್ದ. ಅವರಿಗೆ ಹಣದ ಆಮಿಷ ವೊಡ್ಡಿ ಶಾಸಕರನ್ನು ಪರಿಚಯ ಮಾಡುತ್ತಿದ್ದ. ಅವರ ಕೈಗೆ ವ್ಯಾನಿಟಿ ಬ್ಯಾಗ್ ಕೊಟ್ಟು ಅದರಲ್ಲಿ ಕ್ಯಾಮೆರಾ ಇಟ್ಟು ಆ ನಟಿಯರ ಜೊತೆಗೆ ಶಾಸಕರು ನಡೆಸುತ್ತಿದ್ದ ರಾಸಲೀಲೆಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ನಂತರ ಆ ವಿಡಿಯೋಗಳನ್ನು ತೋರಿಸಿ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ತಮ್ಮ ಮಾನ ಉಳಿಸಿಕೊಳ್ಳಲು ರಘು ಗ್ಯಾಂಗ್‍ಗೆ ಕೋಟಿ-ಕೋಟಿ ರೂ. ಹಣ ಕೊಟ್ಟು ಶಾಸಕರು ತೆಪ್ಪಗಾಗುತ್ತಿದ್ದರು ಎಂಬುದು ತಿಳಿದು ಬಂದಿದೆ. ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು, ತನಿಖೆಯನ್ನು ಚುರುಕುಗೊಳಿಸಿ ದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿಡಿಯೋ ಬಿಡು ಗಡೆ ಮಾಡಬಹುದು ಎಂಬ ಆತಂಕ ಕರ್ನಾಟಕದ ಶಾಸಕರಿಗೆ ಎದುರಾಗಿತ್ತು. ಧಾರಾವಾಹಿಗಳಲ್ಲಿ ಮೇಕಪ್ ಮಾಡುತ್ತಿದ್ದ ಯುವತಿಯನ್ನು ಮುಂದಿಟ್ಟುಕೊಂಡು ಆರೋಪಿ ರಘು ಕಿರುತೆರೆ ನಟಿಯರನ್ನು ಹನಿಟ್ರ್ಯಾಪ್ ಮಾಡಲು ಬಳಸಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.

ಹನಿಟ್ರ್ಯಾಪಿಂಗ್‍ನ ವಿಡಿಯೋಗಳನ್ನು ಆರೋಪಿ ಗಳು ಎಲ್ಲಿ ಇಟ್ಟಿದ್ದಾರೆ ಎನ್ನುವ ಬಗ್ಗೆ ಸಿಸಿಬಿಯಿಂದ ತನಿಖೆ ಚುರುಕುಗೊಂಡಿದೆ. ಸಿಸಿಬಿ ಬಳಿಯಿರುವ ಪೆನ್ ಡ್ರೈವ್‍ನಲ್ಲಿ ವಿಡಿಯೋಗಳು ಲಭ್ಯವಾಗಿವೆ. ಆದರೆ, ಆ ವಿಡಿಯೋಗಳ ನಕಲಿ ಪ್ರತಿಗಳನ್ನು ಎಲ್ಲಿ ಇರಿಸ ಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವಾಗ ಬೇಕಿದ್ದರೂ ಆರೋಪಿಗಳು ಆ ವಿಡಿಯೋ ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇರುವು ದರಿಂದ ಸಿಸಿಬಿ ಪೆÇಲೀಸರ ಮೇಲೆ ರಾಜಕಾರಣಿಗಳ ಒತ್ತಡ ಹೆಚ್ಚಾಗುತ್ತಿದೆ. ಆರೋಪಿಗಳು ಇಲ್ಲಿಯವರೆಗೆ 10ಕ್ಕೂ ಹೆಚ್ಚು ಶಾಸಕರನ್ನು ಹನಿಟ್ರ್ಯಾಪ್ ಮಾಡಿರುವ ಸಂಗತಿ ಪತ್ತೆಯಾಗಿದೆ. ಆದರೆ, ಈ ಬಗ್ಗೆ ದೂರು ನೀಡಲು ಓರ್ವ ಶಾಸಕ ಹೊರತುಪಡಿಸಿ ಯಾವೊಬ್ಬ ಶಾಸಕರೂ ಮುಂದೆ ಬರುತ್ತಿಲ್ಲ. ಟ್ರ್ಯಾಪ್‍ಗೆ ಒಳಗಾದ ಎಲ್ಲಾ ಶಾಸಕರು ದೂರು ನೀಡಿದರೆ ತನಿಖೆಗೆ ಅನು ಕೂಲವಾಗುತ್ತದೆ ಎಂದು ಸಿಸಿಬಿ ಪೆÇಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಈ ವಿಚಾರದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿ ಸಿಕೊಂಡು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಕೈಗೊಳ್ಳಲಾಗುತ್ತದೆ. ಆದರೆ, ತಮ್ಮ ವಿಷಯ ಬಹಿರಂಗ ವಾಗುತ್ತದೆ ಎಂಬ ಭಯದಿಂದ ಹನಿಟ್ರ್ಯಾಪಿಂಗ್‍ಗೆ ಒಳಗಾಗಿರುವ ಶಾಸಕರು ದೂರು ನೀಡಲು ಒಪ್ಪುತ್ತಿಲ್ಲ.

ಆರೋಪಿ ರಘು ಅಲಿಯಾಸ್ ರಾಘವೇಂದ್ರನ ಮನೆಯಲ್ಲಿ ಸಿಸಿಬಿ ಪೆÇಲೀಸರು ಹುಡುಕಾಟ ನಡೆಸಿ ದ್ದಾರೆ. ಅಲ್ಲಿ ಪೆನ್‍ಡ್ರೈವ್, ಹಾರ್ಡ್ ಡಿಸ್ಕ್ ಮತ್ತು ಮೊಬೈಲ್‍ಗಳನ್ನು ಜಪ್ತಿ ಮಾಡಲಾಗಿದೆ. 6 ಮೊಬೈಲ್ ಗಳಲ್ಲಿ ಹನಿ ಟ್ರ್ಯಾಪ್‍ಗೆ ಒಳಗಾದ ಶಾಸಕರ ಮಾಹಿತಿ ಪೆÇಲೀಸರಿಗೆ ಲಭ್ಯವಾಗಿದೆ. ಹನಿಟ್ರ್ಯಾಪಿಂಗ್‍ಗೆ ದಾಳ ವಾಗಿದ್ದ ಯುವತಿಯರ ಜೊತೆ ಶಾಸಕರು ಮಾತನಾಡಿದ ಆಡಿಯೋಗಳು ಕೂಡ ಲಭ್ಯವಾಗಿವೆ. 200ಕ್ಕೂ ಹೆಚ್ಚು ಕಿರುತೆರೆ ನಟಿಯರನ್ನು ಬಳಸಿಕೊಂಡು ರಘು ರಾಜಕಾರಣಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು ಹನಿಟ್ರ್ಯಾಪಿಂಗ್ ದಂಧೆಯನ್ನು ನಡೆಸುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಶಾಸಕರು ಧೈರ್ಯವಾಗಿ ಮುಂದೆ ಬಂದು ದೂರು ಕೊಟ್ಟರೆ ಅವರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಸಿಸಿಬಿ ಪೆÇಲೀಸರು ಹನಿಟ್ರ್ಯಾಪಿಂಗ್‍ಗೆ ಒಳಗಾದ ಶಾಸಕರಿಗೆ ಭರವಸೆ ನೀಡಿದ್ದಾರೆ. ಆದರೂ ಯಾರೂ ಬಹಿರಂಗವಾಗಿ ಈ ವಿಚಾರವನ್ನು ಒಪ್ಪಿಕೊಂಡು ದೂರು ನೀಡಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

Translate »