ಬೇಲೂರಿನಲ್ಲಿ ವೈಭವದ ಹನುಮ ಜಯಂತಿ
ಹಾಸನ

ಬೇಲೂರಿನಲ್ಲಿ ವೈಭವದ ಹನುಮ ಜಯಂತಿ

December 27, 2018

ಬೇಲೂರು: ಶಿಲ್ಪಕಲಾ ನಗರಿ ಬೇಲೂರಿನ ಹೃದಯಭಾಗದಲ್ಲಿ ನೆಲೆಸಿರುವ ಶ್ರೀ ವೀರಾಂಜನೇಯ ಸ್ವಾಮಿಯ ಹನುಮ ಜಯಂತಿ ಮಹೋತ್ಸವದ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಿತು.

ಬುಧವಾರ ಬೆಳಿಗ್ಗೆ ಪಾಪನಾಶಕ ಮಾರುತಿಗೆ ವಿಶೇಷ ಪೂಜೆ ಮುನ್ನ ಗಣಪತಿ ಪೂಜೆ, ಪುಣ್ಯಾಹ ವಾಚನ ಸಂಕಲ್ಪ ಪೂರ್ವಕ ಶ್ರೀಯವರಿಗೆ ಫಲ ಪಂಚಾಮೃತ, ಅಭಿಷೇಕ ಪವಮಾನ ಪಂಚಸೂಕ್ತ ಅಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ರಾಮ ತಾರಕ ಹೋಮ, ಆಂಜನೇಯ ಮೂಲ ಮಂತ್ರ ಹೋಮ, ಪೂರ್ಣಾಹುತಿ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಈ ಎಲ್ಲಾ ಪೂಜಾ ಕೈಂಕರ್ಯಗಳನ್ನು ಬೇಲೂರಿನ ವೇ.ಬ್ರ.ಪ್ರಶಾಂತ ಭಟ್ಟರು ಪ್ರಧಾನ ಅರ್ಚಕರು ಹಾಗೂ ವೇ.ಬ್ರ.ಪ್ರಸನ್ನ ಭಟ್ಟರು, ವೇ.ಬ್ರ.ಆರ್.ಕೆ.ಮಂಜುನಾಥ್ ಹಾಗೂ ಪುರೋಹಿತ ವೃಂದದವರು ಅತ್ಯಂತ ಭಕ್ತಿ ಭಾವದಿಂದ ನಡೆಸಿದರು.

ಈ ಸಂದರ್ಭದಲ್ಲಿ ದೇಗುಲಕ್ಕೆ ಆಗಮಿಸಿದ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರಿಗೆ ದೇಗುಲ ಸಮಿತಿ ವಿಶೇಷ ಪಾದಪೂಜೆ ನಡೆಸಿದರು. ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಮನುಷ್ಯ ಆಧುನಿಕತೆಯ ಬರದಲ್ಲಿ ದೇವರು ಮತ್ತು ಧರ್ಮಾರಣೆಯಿಂದ ವಿಮುಖವಾಗಿರುವುದರಿಂ ದಾಗಿಯೇ ಮಾನಸಿಕ ಶಾಂತಿ ಮತ್ತು ನೆಮ್ಮದಿ ಕಳೆದುಕೊಂಡಿದ್ದಾನೆ. ಧರ್ಮ ವನ್ನು ಕೈಬಿಟ್ಟ ಕಾರಣ ಸಮಾಜ ಅಧೋ ಗತಿ ಇಳಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಬಿಂದುಮಾಧವ ಶರ್ಮಾ ಸ್ವಾಮೀಜಿಯವರ ಸಮ್ಮುಖದಲ್ಲಿ ತೇರಾ ಕೋಟಿ ರಾಮನಾಮ ಜಪದ ಸಂಕಲ್ಪವನ್ನು ಹನುಮ ಮಾಲಧಾರಿಗಳು ಪಡೆದರು. ಬಳಿಕ ದೇಗುಲಕ್ಕೆ ಆಗಮಿಸಿದ ಸ್ವಾಮೀಜಿ, ಹನುಮನಿಗೆ ವಿಶೇಷ ಮಹಾ ಮಂಗಳಾರತಿ ನಡೆಸಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಿದರು. ದೇಗುಲದ ಆವರಣದಲ್ಲಿ ಹಮ್ಮಿಕೊಂಡ ಲಕ್ಷ್ಮಿ ನಾರಾಯಣ ಹೃದಯ ಹೋಮ ಹಾಗೂ ಆಂಜನೇಯ ಮೂಲಮಂತ್ರ ಹೋಮಕ್ಕೆ ಪೂಜ್ಯ ಸ್ವಾಮೀಜಿಗಳು ಹಾಗೂ ದೇಗುಲ ಸಮಿತಿ ಸದಸ್ಯರು ಪೂರ್ಣಾಹುತಿ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ದೇಗುಲ ಸಮಿತಿ ಅಧ್ಯಕ್ಷ ಮೋಹನ್‍ಕುಮಾರ್, ಬಿಜೆಪಿ ಮುಖಂಡ ಹುಲ್ಲಹಳ್ಳಿ ಸುರೇಶ್, ಶೃಂಗೇರಿ ಮಠದ ಕಾರ್ಯದರ್ಶಿ ಸುಬ್ರಮಣ್ಯ, ಮಂಜು ನಾಥ್, ವಿಜಯಕೇಶವ, ತೀರ್ಥಂಕರ್, ನಂಜೇಗೌಡ ಮುಂತಾದವರಿದ್ದರು.

Translate »