ಪಾದಚಾರಿ, ಸವಾರರನ್ನು ಕಾಡುತ್ತಿರುವ ಬೀಡಾಡಿ ದನಗಳು
ಕೊಡಗು

ಪಾದಚಾರಿ, ಸವಾರರನ್ನು ಕಾಡುತ್ತಿರುವ ಬೀಡಾಡಿ ದನಗಳು

December 27, 2018

ಮಡಿಕೇರಿ:  ನಗರದ ಮುಖ್ಯ ರಸ್ತೆ ಮತ್ತು ಬೀದಿಗಳಲ್ಲಿ ಬೀಡಾಡಿ ದನ ಗಳ ಹಾವಳಿ ಮಿತಿ ಮೀರಿದ್ದು, ಯಾವುದೇ ಕ್ರಮ ಕೈಗೊಳ್ಳದ ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿ ದ್ದಾರೆ. ಬೀಡಾಡಿ ದನಗಳಿಂದ ನಗರದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ತೊಡಕಾ ಗಿದ್ದು, ಪಾದಚಾರಿಗಳು, ವಾಹನ ಸವಾ ರರು ಮತ್ತು ಪ್ರವಾಸಿಗರು ದನಗಳಿಗೆ ಹೆದರಿ ಕೊಂಡು ರಸ್ತೆಯಲ್ಲಿ ಸಂಚರಿಸುವಂತಾಗಿದೆ.

ಗೂಳಿಗಳ ಕಾಳಗ: ಎರಡು ಗೂಳಿಗಳ ಕಾಳಗದ ನಡುವೆ ಸಿಲುಕಿದ ವ್ಯಕ್ತಿಯೋ ರ್ವರು ಕೂದಲೆಳೆಯ ಅಂತರದಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ನಗ ರದ ಹೃದಯ ಭಾಗದಲ್ಲಿ ನಡೆದಿದೆ. ಬುಧ ವಾರ ಮಧ್ಯಾಹ್ನ ನಗರದ ತೋಟಗಾರಿಕಾ ಇಲಾಖೆ ಕಚೇರಿ ಮುಂದಿನ ರಾಜ ಮಾರ್ಗ ದಲ್ಲಿ ಮದವೇರಿದ ಬೃಹತ್ ಗಾತ್ರದ ಎರಡು ಗೂಳಿಗಳು ಕಾಳಗದಲ್ಲಿ ತೊಡಗಿ ದ್ದವು. ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ನೂರಾರು ವಾಹನಗಳಿಗೂ ಕ್ಯಾರೇ ಎನ್ನದೇ, ಸಾರ್ವಜನಿಕರ ಬೊಬ್ಬೆಗೂ ಜಗ್ಗದೆ ಕಾಳಗ ದಲ್ಲಿ ತಲ್ಲೀನವಾಗಿದ್ದವು. ಹೀಗಾಗಿ ಪಾದ ಚಾರಿಗಳು ಮತ್ತು ವಾಹನ ಸವಾರರು ಹೆದರಿಕೆಯಿಂದ ರಸ್ತೆ ಬದಿಯಲ್ಲಿ ಸಂಚ ರಿಸಬೇಕಾಯಿತು. ಈ ಸಂದರ್ಭ ಕಾಳಗ ದಲ್ಲಿ ಸೋತ ಗೂಳಿಯೊಂದು ಓಡುವ ರಭಸದಲ್ಲಿ ಎದುರಿಗೆ ಸಿಕ್ಕ ವ್ಯಕ್ತಿಯೊಬ್ಬರಿಗೆ ತಿವಿಯುವುದರಲ್ಲಿತ್ತು. ಇದನ್ನು ಗಮನಿ ಸಿದ ಆ ವ್ಯಕ್ತಿ ತಕ್ಷಣವೇ ಪಕ್ಕಕ್ಕೆ ಸರಿದು ಅಪಾಯದಿಂದ ಪಾರಾದರು. ಹೀಗಾಗಿ ಭಾರಿ ಅನಾಹುತವೊಂದು ಕ್ಷಣಾರ್ಧದಲ್ಲಿ ತಪ್ಪಿದಂತಾಯಿತು.

ಮತ್ತೊಂದು ಪ್ರಕರಣದಲ್ಲಿ ನಗರದ ಐಟಿಐ ಜಂಕ್ಷನ್ ಬಳಿ ಕಾಳಗದಲ್ಲಿ ತೊಡಗಿದ್ದ ದನ ಗಳು ಬೈಕ್‍ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಕೆಲ ದಿನಗಳ ಹಿಂದೆ ಯಷ್ಟೆ ನಡೆದಿದೆ. ಈ ಘಟನೆಯಿಂದ ಬೈಕ್ ಜಖಂಗೊಂಡರೆ, ಸವಾರನ ಮುಖ, ಕಾಲು, ಕೈಗೆ ಬಲವಾದ ಪೆಟ್ಟಾಗಿದೆ. ಚಿಕಿತ್ಸೆ ಪಡೆದುಕೊಂಡ ಯುವಕ ಇದೀಗ ಚೇತರಿ ಸಿಕೊಂಡಿದ್ದಾನೆ. ಇದೇ ರೀತಿಯ ಇನ್ನೊಂದು ಪ್ರಕರಣ ದಲ್ಲಿ ನಗರಸಭೆ ಮುಂಭಾಗ ಕರು ಹಾಕಿದ ಹಸುವೊಂದು ಮಗುವನ್ನು ಎತ್ತಿಕೊಂಡು ಬರುತ್ತಿದ್ದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿತ್ತು. ಕೆಳಗೆ ಬಿದ್ದ ಮಗು ಹಸುವಿನ ಕಾಲಿನ ಕೆಳಗೆ ಸಿಲುಕಿದ್ದನ್ನು ಗಮನಿಸಿದ ಸಾರ್ವಜನಿಕರು ಕ್ಷಣಾರ್ಧದಲ್ಲೆ ಮಗುವನ್ನು ರಕ್ಷಿಸಿದ್ದರು. ಬಳಿಕ ಸಾರ್ವಜನಿ ಕರು ಹಸು ಮತ್ತು ಕರುವನ್ನು ಹರ ಸಾಹಸ ದಿಂದ ಕೋಟೆ ಆವರಣಕ್ಕೆ ಓಡಿಸಿದ್ದರು.

Translate »