ಸಮುದ್ರವಳ್ಳಿಯಲ್ಲಿ ಮನೆ ಕುಸಿತ
ಹಾಸನ

ಸಮುದ್ರವಳ್ಳಿಯಲ್ಲಿ ಮನೆ ಕುಸಿತ

June 13, 2018

ಹಾಸನ: ವಾರದಿಂದ ಸತತವಾಗಿ ಸುರಿ ಯುತ್ತಿರುವ ಮಳೆ ಗಾಳಿಗೆ ತಾಲೂಕಿನ ಸಮುದ್ರವಳ್ಳಿಯಲ್ಲಿ ಮನೆ ಕುಸಿದು ಅಪಾರ ನಷ್ಟವಾದ ಘಟಕ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಗ್ರಾಮದ ನಿವಾಸಿ ಕಮಲಮ್ಮ ಎಂಬುವರ ಮನೆ ಗೋಡೆ ಕುಸಿದಿದ್ದು, ಪಕ್ಕದಲ್ಲೇ ಇದ್ದ ಲಕ್ಷ್ಮಮ್ಮ ಅವರ ಮನೆಯೂ ಹಾನಿಯಾಗಿದೆ. ಸೋಮವಾರ ರಾತ್ರಿ ಪೂರ್ಣಗಾಳಿ ಸಹಿತ ಮಳೆ ಸುರಿದ್ದರಿಂದ ಬೆಳಗಿನ ಜಾವದಲ್ಲಿ ಕಮಲಮ್ಮ ಎಂಬುವರ ಮನೆ ಗೋಡೆ ಕುಸಿದಿದೆ. ಅಲ್ಲದೆ ಗೋಡೆ ಬಿದ್ದ ಪರಿಣಾಮ ನೆರೆ ಮನೆಯ ಗೋಡೆ ಕೂಡ ಬಹುತೇಕ ಹಾನಿಯಾಗಿದೆ. ಗೋಡೆ ಬೀಳುವ ಸಮಯದಲ್ಲಿ ಶಬ್ದ ಕೇಳಿ ಮನೆಯಲ್ಲಿದ್ದವರೆಲ್ಲಾ ಹೊರಗೆ ಬಂದಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Translate »