ಹೆಚ್‍ಎಸ್‍ಎಂ ಸೇವೆ ಅಮೂಲ್ಯ: ಸುತ್ತೂರು ಶ್ರೀ
ಚಾಮರಾಜನಗರ

ಹೆಚ್‍ಎಸ್‍ಎಂ ಸೇವೆ ಅಮೂಲ್ಯ: ಸುತ್ತೂರು ಶ್ರೀ

January 17, 2019

ಗುಂಡ್ಲುಪೇಟೆ: ಕ್ಷೇತ್ರ ಮತ್ತು ರಾಜ್ಯಮಟ್ಟ ದಲ್ಲಿ ಮಾಜಿ ಸಚಿವ ದಿ.ಹೆಚ್.ಎಸ್.ಮಹದೇವಪ್ರಸಾದ್ ಅವರ ಸೇವೆ ಅಮೂಲ್ಯವಾದುದು ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಜೆಎಸ್‍ಎಸ್ ಅನುಭವಮಂಟಪದಲ್ಲಿ ದಿ.ಮಹದೇವ ಪ್ರಸಾದ್ ಅವರ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರ ಎರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಮಾಣಿಕ ಮತ್ತು ಕರ್ತವ್ಯ ನಿಷ್ಠೆಯಿಂದ ಕ್ಷೇತ್ರದ ಹಾಗೂ ರಾಜ್ಯದ ಅಭಿವೃದ್ಧಿಗೆ ತನ್ನದೇಯಾದ ಕೊಡುಗೆಯನ್ನು ಮಹದೇವ ಪ್ರಸಾದ್ ನೀಡಿದ್ದಾರೆ. ಈ ಮೂಲಕ ಜನಮಾನಸದಲ್ಲಿ ಶಾಶ್ವತ ವಾಗಿ ಉಳಿದಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಹೆಚ್‍ಎಸ್‍ಎಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಎಲ್ಲಾ ರೀತಿಯಲ್ಲೂ ಮಾರ್ಗದರ್ಶನ ನೀಡುತ್ತಿದ್ದ ನಮ್ಮ ಕ್ಯಾಪ್ಟನ್ ಮಹದೇವಪ್ರಸಾದ್ ನಿಧನದಿಂದ ಕ್ಯಾಪ್ಟನ್ ಇಲ್ಲದ ತಂಡ ನಮ್ಮದಾಗಿದೆ ಎಂದು ಮನದಾಳದ ನೋವನ್ನು ಹೇಳಿದರು.

ಸಾಹಿತಿ ಪೆÇ್ರೀ.ಮಲೆಯೂರು ಗುರುಸ್ವಾಮಿ ಮಾತನಾಡಿದರು. ಪಡಗೂರು ಅಡವಿ ಮಠಾಧ್ಯಕ್ಷ ಶಿವಲಿಂಗೇಂದ್ರ ಸ್ವಾಮೀಜಿ ಆಶೀ ರ್ವಚನ ನೀಡಿದರು. ವೇದಿಕೆಯಲ್ಲಿ ಹರವೆ ಮಠಾಧ್ಯಕ್ಷ ಸರ್ಪಭೂಷಣ ಸ್ವಾಮೀಜಿ, ಚಿಕ್ಕತುಪ್ಪೂರು ಶಿವಪೂಜಾ ಮಠಾಧ್ಯಕ್ಷ ಚನ್ನವೀರ ಸ್ವಾಮೀಜಿ ಸೇರಿದಂತೆ ತಾಲೂಕಿನ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ, ಮಾಜಿ ಸಂಸದ ಎ.ಸಿದ್ದರಾಜು, ಯುವ ಮುಖಂಡ ಹೆಚ್.ಎಂ.ಗಣೇಶ್ ಪ್ರಸಾದ್, ಹಾಲು ಒಕ್ಕೂಟದ ನಿರ್ದೇಶಕ ಹೆಚ್.ಎಸ್.ನಂಜುಂಡ ಪ್ರಸಾದ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಕಾಡಾ ಮಾಜಿ ಅಧ್ಯಕ್ಷ ಹೆಚ್.ಎಸ್.ನಂಜಪ್ಪ, ತಾಪಂ ಅಧ್ಯಕ್ಷ ಜಗದೀಶ್‍ಮೂರ್ತಿ, ಜಿಪಂ ಸದಸ್ಯರಾದ ಕೆ.ಎಸ್.ಮಹೇಶ್, ಬಿ.ಕೆ. ಬೊಮ್ಮಯ್ಯ, ಪಿ.ಚನ್ನಪ್ಪ, ಅಶ್ವಿನಿ ವಿಶ್ವನಾಥ್, ಮುಖಂಡರಾದ ನಾಜಿ ಮುದ್ದೀನ್, ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ಆಲ ತ್ತೂರು ಜಯರಾಮು, ಮಂಚಳ್ಳಿಲೋಕೇಶ್, ಹಿರಿಕಾಟಿ ಯಶ ವಂತಕುಮಾರ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

Translate »