ಶುಶ್ರೂಷಕರಿಗೆ ಪರಿಣಿತಿ ಜೊತೆಗೆ ಮಾನವೀಯತೆ ಮುಖ್ಯ
ಮೈಸೂರು

ಶುಶ್ರೂಷಕರಿಗೆ ಪರಿಣಿತಿ ಜೊತೆಗೆ ಮಾನವೀಯತೆ ಮುಖ್ಯ

June 11, 2019

ಮೈಸೂರು: ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಯಲ್ಲಿ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯನ್ನು ಆಚರಿಸಲಾಯಿತು. ತುಮಕೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ, ಆರೋಗ್ಯ ಸೇವೆಯಲ್ಲಿ ಶುಶ್ರೂಷಕರ ಸೇವೆ ವೈದ್ಯರ ಸೇವೆಯಷ್ಟೇ ಅತಿಮುಖ್ಯ ಎಂದು ತಿಳಿಸಿ ಶುಶ್ರೂಷಕರಿಗೆ ಪರಿಣಿತಿ ಜೊತೆಗೆ ಮಾನ ವೀಯತೆ, ಅನುಕಂಪ ಇರಬೇಕೆಂದು ತಿಳಿಸಿದರು. ಶುಶ್ರೂಷಕಿಯರು ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವರೆಲ್ಲರು ಈ ಎರಡು ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಕರೆಯಿತ್ತರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ವೈದ್ಯಕೀಯ ಕಾಲೇಜಿನ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ ಮಾತನಾಡಿ, ಶುಶ್ರೂಷಕ ರಿಗೆ ಫ್ಲಾರೆನ್ಸ್ ನೈಟಿಂಗೇಲ್ ಆದರ್ಶ ನೀಯವೆಂದು ತಿಳಿಸಿ, ಅವರ ನೆನಪಿಗಾಗಿ ಶುಶ್ರೂಷಕರ ದಿನಾಚರಣೆಯನ್ನು ಆಚರಿಸ ಲಾಗುತ್ತಿದೆಯೆಂದರು. ಸುಯೋಗ್ ಆಸ್ಪತ್ರೆಯ ಶುಶ್ರೂಷಕರ ಸೇವೆ ಅತ್ಯುತ್ತಮ ಗುಣಮಟ್ಟದ್ದೆಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಪ್ರತಿ ರೋಗಿಯ ಮನಸ್ಥಿತಿ ವಿಭಿನ್ನವಾಗಿದ್ದು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ರೋಗಿಯ ಭಾವನೆಗಳಿಗೆ ಪ್ರಥಮ ಆದ್ಯತೆ ಕೊಡಬೇಕು. ಪ್ರತಿ ರೋಗಿಯನ್ನು ತಮ್ಮ ಕುಟುಂಬದ ಸದಸ್ಯರಲ್ಲೊಬ್ಬರಂತೆ ಪರಿಗಣಿಸಿ ಚಿಕಿತ್ಸೆ ನೀಡಿದಲ್ಲಿ ಅದಕ್ಕಿಂತ ವೈದ್ಯಕೀಯ ನೀತಿ ಸಂಹಿತೆ ಬೇರೊಂದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸುಯೋಗ್ ಆಸ್ಪತ್ರೆ ಡಾ.ರಾಜೇಂದ್ರಪ್ರಸಾದ್, ಡಾ.ಸುಯೋಗ್, ಡಾ.ಸೀಮಾ ಯೋಗಣ್ಣ, ಡಾ.ಯಶಿತ ರಾಜ್, ಅರುಣ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನರ್ಸಿಂಗ್ ವಿಭಾ ಗದ ಮುಖ್ಯಸ್ಥರಾದ ಸಿ.ನೀಲೇಶ್ ಹಾಗೂ ಪಿ.ಪುಷ್ಪ ನಿರ್ವಹಿಸಿದರು. ನಂತರ ಸುಯೋಗ್ ಆಸ್ಪತ್ರೆಯ ಸಿಬ್ಬಂದಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Translate »