ನಾನೂ ಕೂಡ `ಆಕ್ಸಿಡೆಂಟಲ್  ಪ್ರೈಮ್ ಮಿನಿಸ್ಟರ್’: ಹೆಚ್‍ಡಿಡಿ
ಮೈಸೂರು

ನಾನೂ ಕೂಡ `ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’: ಹೆಚ್‍ಡಿಡಿ

December 31, 2018

ನವದೆಹಲಿ: ನಾನೂ ಕೂಡ ಆಕ್ಸಿ ಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ಟ್ರೈಲರ್ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಿಜ ಹೇಳಬೇಕೆಂದರೆ 3-4 ತಿಂಗಳ ಹಿಂದೆಯೇ ಈ ವಿವಾದ ಆರಂಭವಾಗಿತ್ತು. ಚಿತ್ರಕ್ಕೇಕೆ ಅನುಮತಿ ನೀಡಿದರು ಎಂಬುದು ನನಗೂ ಗೊತ್ತಿಲ್ಲ. ನಾನೂ ಕೂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್. ಆದರೆ, ನಾನೆಂದೂ ಇಂತಹ ಪರಿಸ್ಥಿತಿಗಳನ್ನು ಎದುರಿಸಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯ ಪಕ್ಷಗಳು ಹಾಗೂ ಕಾಂಗ್ರೆಸ್ ಬೆಂಬಲದಿಂದ 1996ರ ಜೂನ್‍ರಿಂದ 1997 ಏಪ್ರಿಲ್ 21ರವರೆಗೂ ದೇವೇಗೌಡ ಅವರು ದೇಶದ ಪ್ರಧಾನಮಂತ್ರಿಯಾಗಿದ್ದರು. ನಂತರ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಹಿನೆÀ್ನಲೆಯಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾಗಿ ಬಂದಿತ್ತು.

Translate »