ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಘೋಷಣೆ
ಮಂಡ್ಯ

ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಘೋಷಣೆ

March 30, 2019

ಮಂಡ್ಯ: ಚುನಾವಣೆಯಲ್ಲಿ ಸೋತು ಮನೆ ಸೇರಿದ್ದ ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಇಂದಿಲ್ಲಿ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರರಂಗದಿಂದ ರಾಜಕೀಯಕ್ಕೆ ಬಂದ ಅಂಬರೀಶ್ ಅವರನ್ನು ಚುನಾವಣೆ ಯಲ್ಲಿ ರಾಮನಗರ ಜನ ಸೋಲಿಸಿದ್ದರು. ಆಗ ನಾನು ನನ್ನ ಸ್ವಂತ ಹಣದಲ್ಲಿ ರಾಜ್ಯೋತ್ಸವ ಮಾಡಿ ಅಂಬರೀಶ್ ಅವರನ್ನು ಜಿಲ್ಲೆಯಾ ದ್ಯಂತ ಸುತ್ತಿಸಿ ಲೋಕಸಭಾ ಚುನಾವಣೆ ಯಲ್ಲಿ ಗೆಲ್ಲಿಸುವ ಮೂಲಕ ಅವರಿಗೆ ರಾಜ ಕೀಯ ಪುನರ್ಜನ್ಮ ನೀಡಿದೆ ಎಂದರು.

ಮಂಡ್ಯ ಚುನಾವಣೆಯಲ್ಲಿ ಗೆದ್ದ ನಂತರ ನನ್ನನ್ನು ಕರೆಸಿಕೊಂಡ ಅಂಬ ರೀಶ್, ‘ನೀನು ನಿಯತ್ತಿನ ಮನುಷ್ಯ ಕಣೋ ಲೇ’ ಎಂದು ಬೆನ್ನು ತಟ್ಟಿದ್ದರು. ನನ್ನಿಂದ ಅಂಬರೀಶ್ ಅವರಿಗೆ ಎಷ್ಟು ಸಹಾಯ ಆಗಿದೆ ಎಂಬುದನ್ನು ಸುಮಲತಾ ಅವರು ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಲು ಹೋದಾಗ ಕಣ್ಮುಚ್ಚಿ ಕೇಳಲಿ ಎಂದರು.

ಐಟಿ ದಾಳಿಯಲ್ಲಿ ರಜನಿ ಕೈವಾಡ: ಸುಮಲತಾ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೂಲಕ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಹೇಳಿ ನಮ್ಮ ಸಂಬಂ ಧಿಕರ ಮೇಲೆ ಐಟಿ ದಾಳಿ ನಡೆಸಿದ್ದಾರೆ ಎಂದು ಟಿವಿಗಳಲ್ಲಿ ಪ್ರಸಾರವಾಗುತ್ತಿದೆ ಎಂದ ಅವರು, ಐಟಿ ದಾಳಿ ನಡೆಯುವ ಹಿಂದಿನ ದಿನ ಕೆ.ಆರ್.ಪೇಟೆಯ ಮಾವಿನಕೆರೆ ಯಲ್ಲಿ ಮಾತನಾಡಿರುವ ಸುಮಲತಾ, ಸಾವಿರಾರು ಎಕರೆ ಭೂಮಿ ಕಬಳಿಸಿರುವ ವರು ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ದಿಂದ ಲೂಟಿ ಮಾಡಿರುವವ ಹೇಗೆ ಸಿಕ್ಕಿಹಾಕಿ ಕೊಳ್ಳುತ್ತಾರೆ ನೋಡಿ ಎಂದು ಹೇಳಿರುವ ವೀಡಿಯೋ ನಮ್ಮ ಬಳಿ ಇದೆ ಎಂದು ಹೇಳುವ ಮೂಲಕ ಪುಟ್ಟರಾಜು ಅವರು, ಐಟಿ ದಾಳಿಯಲ್ಲಿ ಸುಮಲತಾ ಪಾತ್ರ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಬಿಜೆಪಿ ಕಟ್ಟಿ ಬೆಳೆಸಿದ ಅನಂತಕುಮಾರ್ ಕುಟುಂಬವನ್ನು ಮುಗಿಸಿದ ಆ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಗಳಿಗೆ ಮಂಡ್ಯದ ಪಕ್ಷೇತರ ಅಭ್ಯರ್ಥಿ ಮೇಲೆ ಅದೆಂತಹ ಪ್ರೀತಿ ಎಂಬುದು ಅರ್ಥವಾಗು ತ್ತಿಲ್ಲ. ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಗ್ಯತೆ ಇಲ್ಲದ, ಬಿಜೆಪಿಯವರು, ಯಾರದೋ ಹೆಸರನ್ನು ಮುಂದಿಟ್ಟುಕೊಂಡು ಮಂಡ್ಯ ದಲ್ಲಿ ರಾಜಕೀಯ ಮಾಡಲು ಬಂದಿದ್ದಾರೆ. ಇದರ ಮೂಲಕ ಹೆಚ್.ಡಿ.ದೇವೇಗೌಡರು ಮತ್ತು ಜೆಡಿಎಸ್ ಅನ್ನು ಸಂಪೂರ್ಣವಾಗಿ ಮುಗಿಸಬಹುದು ಎಂಬುದು ಅವರ ಭ್ರಮೆ ಅಷ್ಟೇ ಎಂದು ಅವರು ಹೇಳಿದರು.

Translate »