ನಾನು ಅತೃಪ್ತ ಶಾಸಕರನ್ನು ಭೇಟಿ ಮಾಡಿಲ್ಲ, ಮಾತನಾಡಿಲ್ಲ
ಮೈಸೂರು

ನಾನು ಅತೃಪ್ತ ಶಾಸಕರನ್ನು ಭೇಟಿ ಮಾಡಿಲ್ಲ, ಮಾತನಾಡಿಲ್ಲ

July 12, 2019

ಬೆಂಗಳೂರು, ಜು.11- ನಮಗೂ ಅತೃಪ್ತ ಶಾಸಕರ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ, ಯಾವುದೇ ಅತೃಪ್ತ ಶಾಸಕರು ನನ್ನ ಸಂಪರ್ಕ ದಲ್ಲಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂ ರಿನಲ್ಲಿ ಮಾತನಾಡಿದ ಅಶೋಕ್, ಅತೃಪ್ತ ಶಾಸಕರು ಯಾರು ಎಂಬುದು ನನಗೆ ಗೊತ್ತಿಲ್ಲ, ಅವರು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ, ಸದಸ್ಯತ್ವಕ್ಕೆ ಯಾರೂ ರಾಜೀನಾಮೆ ನೀಡಿಲ್ಲ, ಇದಕ್ಕೆ ಬಿಜೆಪಿ ಕಾರಣ ವಲ್ಲ, ಸಿದ್ದರಾಮಯ್ಯ ಅವರೇ ಇದಕ್ಕೆ ಉತ್ತರಿಸಬೇಕು ಎಂದು ಹೇಳಿದ್ದಾರೆ. ಒಂದು ವರ್ಷದಿಂದ ಶಾಸಕರನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು, ನಾನು ಪಕ್ಷೇತರ ಶಾಸಕರನ್ನು ಮಾತ್ರ ಭೇಟಿ ಮಾಡಿದ್ದೇನೆ, ಬಿಜೆಪಿಗೆ ಬೆಂಬಲ ನೀಡು ವಂತೆ ಕೋರಿದ್ದೇನೆ, ಬೇರೆ ಯಾವ ಬೆಂಗಳೂರು ಶಾಸಕ ರನ್ನು ನಾನು ಭೇಟಿ ಮಾಡಿಯೇ ಇಲ್ಲ, ನೋಡಿಯೂ ಇಲ್ಲ, ಮಾತನಾಡಿಯೂ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅತೃಪ್ತ ಶಾಸಕರು ರಾಜೀನಾಮೆಗೆ ಕಾರಣವನ್ನು ಅವರು ನೀಡಿದ್ದಾರೆ, ಯಾರು ನನ್ನ ಮನೆಗೆ ಬಂದಿಲ್ಲ, ನಾನು ಯಾರ ಮನೆ ಬಾಗಿಲಿಗೂ ಹೋಗಿಲ್ಲ ಎಂದು ತಿಳಿಸಿದ್ದಾರೆ.

Translate »