ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ವಾರ್ಡ್ ಇಂಜಿನಿಯರ್‍ಗೆ ಲಕ್ಷ ರೂ. ದಂಡ ಪಾಲಿಕೆ ಉಪ ಆಯುಕ್ತ ಶಿವಾನಂದಮೂರ್ತಿ ಎಚ್ಚರಿಕೆ
ಮೈಸೂರು

ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ವಾರ್ಡ್ ಇಂಜಿನಿಯರ್‍ಗೆ ಲಕ್ಷ ರೂ. ದಂಡ ಪಾಲಿಕೆ ಉಪ ಆಯುಕ್ತ ಶಿವಾನಂದಮೂರ್ತಿ ಎಚ್ಚರಿಕೆ

January 24, 2020

ಮೈಸೂರು,ಜ.23(ವೈಡಿಎಸ್)- ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡುವು ದನ್ನು ತಡೆಯುವುದು ಅಧಿಕಾರಿಗಳ ಕೆಲಸ. ತಡೆಯದಿದ್ದರೆ ಸಂಬಂಧಪಟ್ಟ ವಾರ್ಡ್ ಇಂಜಿನಿಯರ್‍ಗೆ 1 ಲಕ್ಷ ರೂ.ವರೆಗೂ ದಂಡ ವಿಧಿಸಬಹುದಾಗಿದೆ ಎಂದು ನಗರಪಾಲಿಕೆ ಉಪ ಆಯುಕ್ತ ಶಿವಾನಂದಮೂರ್ತಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣ ದಲ್ಲಿ ನರೆಡ್ಕೋ ಮೈಸೂರು ಬುಧವಾರ ಆಯೋ ಜಿಸಿದ್ದ ರೇರಾ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಿದರೆ ನೆಲಸಮಗೊಳಿಸಲಾಗು ವುದು ಹಾಗಾಗಿ ನಕ್ಷೆಯಲ್ಲಿರುವಂತೆಯೇ ಕಟ್ಟಡ ನಿರ್ಮಿಸಬೇಕು ಎಂದು ಹೇಳಿದರು.

ಆದರೆ, ಮನೆಗಳ ಮಧ್ಯೆ ಸ್ವಲ್ಪವೂ ಜಾಗ ವಿಲ್ಲದಂತೆ ಕಟ್ಟಿಕೊಂಡಿರುವುದನ್ನು ಗಮನಿಸಿ ದ್ದೇನೆ. ಮನೆಗಳ ಮಧ್ಯೆ ಜಾಗ ಬಿಟ್ಟು ಕಟ್ಟ ಬೇಕು. ಇದರಿಂದ ಗಾಳಿ-ಬೆಳಕು ಬರುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಅಪಾರ್ಟ್ ಮೆಂಟ್ ನಿರ್ಮಿಸುವ ವೇಳೆ ಮೂಲ ಸೌಲಭ್ಯ ಗಳನ್ನು ನೀಡಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರವು 2016ರಲ್ಲಿ ಗ್ರಾಹಕ ರಿಗೆ ಅನುಕೂಲವಾಗಬೇಕೆಂದು ರೇರಾ ಜಾರಿಗೆ ತಂದಿತು. ಈ ವೇಳೆ ನಾನು ಹೌಸಿಂಗ್ ಬೋರ್ಡ್‍ನಲ್ಲಿ ಪ್ರಧಾನ ವ್ಯವಸ್ಥಾಪಕನಾಗಿ ದ್ದಾಗ 30 ತಿಂಗಳ ಅವಧಿಯಲ್ಲಿ 18 ಸಾವಿ ರಕ್ಕೂ ಹೆಚ್ಚು ನಿವೇಶನ, ಅಪಾರ್ಟ್‍ಮೆಂಟ್ ಗಳನ್ನು ಹಂಚಿಕೆ ಮಾಡಿದ್ದೇನೆ ಎಂದ ಅವರು, ರೇರಾ ಕಾಯ್ದೆ ಬಗ್ಗೆ ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯದಲ್ಲೇ ಮೈಸೂರಿನ ನರೆಡ್ಕೋ ವ್ಯವ ಸ್ಥಿತವಾಗಿ ರಿಯಲ್ ಎಸ್ಟೇಟ್ ನಡೆಸಿಕೊಂಡು ಬರುತ್ತಿದೆ. ಮುಡಾ ಹಂಚಿಕೆ ಮಾಡಿರುವ ನಿವೇಶನಗಳಿಗಿಂತ ಹೆಚ್ಚು ನಿವೇಶನ, ಫ್ಲಾಟ್ ಗಳನ್ನು ಹಂಚಿಕೆ ಮಾಡಿದೆ. ಇದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನರೆಡ್ಕೋ ಮೈಸೂರು ಛೇರ್ಮನ್ ಎನ್. ದಿವ್ಯೇಶ್ ಮಾತನಾಡಿ, 2016ರಲ್ಲಿ 11 ಸದಸ್ಯ ರಿಂದ ಆರಂಭಿಸಿದ ನರೆಡ್ಕೋದಲ್ಲಿ ಇಂದು 59 ಮಂದಿ ಸದಸ್ಯರಿದ್ದಾರೆ. ಇಂದಿನವರೆಗೂ 24 ಕಾರ್ಯಾಗಾರಗಳನ್ನು ಆಯೋಜಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ರಿಯಲ್ ಎಸ್ಟೇಟ್‍ಗೆ ಸಂಬಂಧಿತ ಕಾರ್ಯಕ್ರಮಗಳ ಲ್ಲದೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ನರೆಡ್ಕೋ ಕರ್ನಾಟಕ ಅಧ್ಯಕ್ಷ ಎಂ.ಸತೀಶ್ ಕುಮಾರ್, ಮೈಸೂರು ಅಧ್ಯಕ್ಷ ಟಿ.ಜಿ.ಆದಿ ಶೇಷನ್‍ಗೌಡ, ವಕೀಲ ಧೀರೇಂದ್ರ ಕುಮಾರ್ ಮೆಹ್ತಾ, ಲೆಕ್ಕ ಪರಿಶೋಧಕ ಟಿ.ವಿನಯ್ ಇತರರಿದ್ದರು.

Translate »