ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದಲ್ಲಿ ಜೀವ ಸಂಕುಲಕ್ಕೆ ಆಪತ್ತು ಕಾದಿದೆ…
ಮೈಸೂರು

ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದಲ್ಲಿ ಜೀವ ಸಂಕುಲಕ್ಕೆ ಆಪತ್ತು ಕಾದಿದೆ…

June 6, 2019

ಮೈಸೂರು: ಗಿಡ-ಮರಗಳನ್ನು ಪೋಷಿಸಿ ಪರಿಸರ ಸಮ ತೋಲನ ಕಾಯ್ದುಕೊಳ್ಳದಿದ್ದರೆ ಮಾನ ವನೂ ಸೇರಿದಂತೆ ಜೀವ ಸಂಕುಲ ನಾನಾ ರೀತಿಯಲ್ಲಿ ಹಾನಿಗೆ ತುತ್ತಾಗಬೇಕಾಗು ತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಎಚ್ಚರಿಸಿದರು.

ಮೈಸೂರಿನ ಬನ್ನಿಮಂಟಪದ ಓಡಿಪಿ (ಆರ್ಗನೈಜೇಷನ್ ಫಾರ್ ದಿ ಡೆವಲಪ್ ಮೆಂಟ್ ಆಫ್ ಪೀಪಲ್) ಸಂಘಟನೆ ಆವರಣದಲ್ಲಿ ಸಂಘಟನೆ ವತಿಯಿಂದ ಬುಧವಾರ `ವಾಯುಮಾಲಿನ್ಯ ತಡೆ ಯೋಣ ಶುದ್ಧ ಗಾಳಿ ಪಡೆಯೋಣ’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ `ವಿಶ್ವ ಪರಿಸರ ದಿನಾಚರಣೆ’ಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿ ಸಮತೋಲನಕ್ಕೆ ಸಸ್ಯ ಸಂಪತ್ತು ಮಹತ್ವದ ಸಾಧನವಾಗಿದ್ದು, ಪರಿಸರ ಸಂರಕ್ಷಣೆ ಮೂಲಕ ವಾತಾವರಣದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ. ಈ ಜಗತ್ತು ನೆಲ, ಜಲ, ಗಾಳಿ, ಅಗ್ನಿ ಹಾಗೂ ಆಕಾಶ ಎಂಬ ಪಂಚಭೂತಗಳಿಂದ ಕೂಡಿದ್ದು, ಅವುಗಳು ಇಂತಿಷ್ಟೇ ಪ್ರಮಾಣದಲ್ಲಿ ಇರಬೇಕೆಂದು ದೇವರು ನಿಯಮ ಹಾಕಿ ದ್ದಾನೆ. ಪ್ರಕೃತಿ ವಿರುದ್ಧ ನಡೆದಾಗ ಅವುಗಳು ಸಮತೋಲನ ಕಳೆದುಕೊಂಡು ಅನಾ ಹುತಗಳು ಜರುಗಲಿವೆ. ಹೀಗಾಗಿ ಇಡೀ ಜಗತ್ತು ಸಸ್ಯ ಕಾಶಿಯಾಗಬೇಕಿದೆ ಎಂದು ತಿಳಿಸಿದರು.

ಕೃತಕ ಆಮ್ಲಜನಕಕ್ಕೆ ಮೊರೆ: ನಮ್ಮ ಪೂರ್ವಿಕರು ಧಾರ್ಮಿಕ ಹಿನ್ನೆಲೆಯಲ್ಲಿ ಗಿಡ-ಮರಗಳನ್ನು ಪೋಷಣೆ ಮಾಡು ತ್ತಿದ್ದರು. ಇದಕ್ಕೆ ಉದಾಹರಣೆಯಾಗಿ ಅರಳೀ ಮರ, ಬಿಲ್ವಪತ್ರೆ ಸೇರಿದಂತೆ ಅನೇಕ ಸಸ್ಯ ಗಳನ್ನು ಕಾಣಬಹುದು. ಅವುಗಳನ್ನು ಕಡಿ ದರೆ ದೇವರು ಕೋಪಗೊಳ್ಳುತ್ತಾನೆ ಎಂಬ ಭಾವನೆಯಲ್ಲಿ ಅವುಗಳನ್ನು ಪೂಜಿಸಿ, ಪೋಷಣೆ ಮಾಡುತ್ತಿದ್ದರು. ಆ ಮೂಲಕ ಆರೋಗ್ಯಕರ ಪರಿಸರ ಕಾಯ್ದು ಕೊಳ್ಳುತ್ತಿದ್ದರು ಎಂದರು.
ಈಗಲೂ ನಮ್ಮ ಹಳ್ಳಿಗಳಲ್ಲಿ ಅರಳೀ ಮರ ಗಳನ್ನು ಕಾಣಬಹುದು. ಒಂದು ಅರಳೀಮರ ಇಡೀ ಊರಿಗೆ ಆಮ್ಲಜನಕ ಒದಗಿಸ ಬಲ್ಲದು. ಇಂತಹ ಪ್ರಾಕೃತಿಕ ಸೌಲಭ್ಯ ಪಡೆದು ಕೊಳ್ಳುವಲ್ಲಿ ಇಂದು ವಿಫಲವಾಗುತ್ತಿರುವ ನಾವು ಆಸ್ಪತ್ರೆ ಸೇರಿ ಕೊಂಡು ಕೃತಕವಾಗಿ ಆಮ್ಲಜನಕ ಪಡೆಯುವಂತಾಗಿದೆ ಎಂದು ಡಿ.ಮಾದೇಗೌಡ ವಿಷಾದಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾ ವಿಕವಾಗಿ ಮಾತನಾಡಿದ ಓಡಿಪಿ ನಿರ್ದೇಶಕ ಫಾದರ್ ಸ್ಟ್ಯಾನಿ ಡಿ’ಅಲ್ಮೇಡಾ, ಓಡಿಪಿ ಸಂಘಟನೆ 3 ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಅನೇಕ ಪರಿಸರ ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದೆ. 205ಕ್ಕೂ ಹೆಚ್ಚು ಗ್ರಾಮಗಳಲ್ಲಿ 56,224 ಎಕರೆ ಜಮೀನಿನಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಕೃಷಿ ಹೊಂಡಾ, ಇಂಗು ಗುಂಡಿ, ನಾಲಾಬದು ಮೊದಲಾದ ಚಟುವಟಿಕೆಗಳನ್ನು ನಡೆಸಲಾಗಿದೆ. 25 ಲಕ್ಷಕ್ಕೂ ಹೆಚ್ಚು ಅರಣ್ಯ ಮತ್ತು ತೋಟಗಾರಿಕೆ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ ಎಂದು ತಿಳಿಸಿದರು.

ಓಡಿಪಿ ಸಂಘಟನೆಯ ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿ ದ್ದರು. ಮುಕ್ತ ವಿವಿ ಸಹಾಯಕ ಪ್ರಾಧ್ಯಾ ಪಕ ಡಾ.ಟಿ.ಎಸ್.ಹರ್ಷ, ನಾಗನಹಳ್ಳಿ ಸಾವ ಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ.ಪ್ರಕಾಶ್, ನಾಗನಹಳ್ಳಿ ಕೃಷಿ ತರಬೇತಿ ಸಂಸ್ಥೆ ಪ್ರಾಂಶುಪಾಲ ಯೋಗೇಶ್, ಬೆಳವಾಡಿಯ ಮಹಾರಾಜ ತಾಂತ್ರಿಕ ವಿದ್ಯಾಲಯದ ಪ್ರಾಧ್ಯಾಪಕ ರಾಮಕೃಷ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಹೆಚ್.ಟಿ.ಕಮಲಮ್ಮ, ಗ್ರಾಮ ವಿಕಾಸ ಸ್ವ ಸಹಾಯ ಸಂಘಗಳ ಮಹಾ ಒಕ್ಕೂಟದ ಅಧ್ಯಕ್ಷ ಬಿ.ಎಂ.ಅನೀಸ್, ಮಹಿಳೋದಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿಜಯಾಂಭ, ಪರಿಸರ ವಾದಿ ವಸಂತಕುಮಾರ್ ಮೈಸೂರ್ ಮಠ್ ಮತ್ತಿತರರು ಹಾಜರಿದ್ದರು.

Translate »