ಅಕ್ರಮ ಬೀಟೆ ಮರ ವಶ
ಕೊಡಗು

ಅಕ್ರಮ ಬೀಟೆ ಮರ ವಶ

January 8, 2019

ಕುಶಾಲನಗರ: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಗ್ರಾಮದ ರಮೇಶ್ ಎಂಬುವರ ಮನೆ ಮೇಲೆ ದಾಳಿ ಮಾಡಿದ ಅರಣ್ಯ ಸಿಬ್ಬಂದಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ರೂ.1 ಲಕ್ಷ ಮೌಲ್ಯದ ಬೀಟೆ ಹಾಗೂ ಕಾಡುಜಾತಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಬೀಟೆ ನಾಟಾ ಸಾಗಾಟ ಪ್ರಕರಣವೊಂದರಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿ ರುವ ಆರೋಪಿ ಎ.ಆರ್.ರಮೇಶ್ ಎಂಬುವರ ಮನೆಯಲ್ಲಿ ಅಕ್ರಮ ಬೀಟೆ ಮರ ಸಂಗ್ರಹ ಮಾಡಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸೋಮವಾರಪೇಟೆ ವಲಯ ಅರಣ್ಯಾ ಧಿಕಾರಿ ಲಕ್ಷ್ಮೀಕಾಂತ್ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿ ಮಾಲು ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಗೋವಿಂದಶೆಟ್ಟಿ ಎಂಬುವರ ಮಗ ಎ.ಜಿ.ರಮೇಶ್ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಅರಣ್ಯ ಸಿಬ್ಭಂದಿಗಳು ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಬಾಣವಾರ ಉಪ ವಲಯ ಅರಣ್ಯಾಧಿ ಕಾರಿ ಮಹಾದೇವ ನಾಯಕ್, ಡಿಆರ್‍ಎಫ್‍ಒ ಎಸ್.ಬಿ. ಸತೀಶ್ ಕುಮಾರ್, ಅರಣ್ಯ ರಕ್ಷಕ ಎಚ್.ಪಿ.ರಾಜಣ್ಣ, ಅರಣ್ಯ ವೀಕ್ಷಕ ಈರಪ್ಪ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Translate »