ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ಮರ ವಶ
ಕೊಡಗು

ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ಮರ ವಶ

May 27, 2018

ಕುಶಾಲನಗರ:  ಸಮೀಪದ ಗುಡ್ಡೆಹೊಸೂರು ಬಳಿ ಅಕ್ರಮ ಬೀಟಿ ನಾಟ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕುಶಾಲನಗರ ಅರಣ್ಯ ಸಿಬ್ಬಂದಿಗಳು ಮಾಲು ಸಮೇತ ಕಾರು ವಶಪಡಿಸಿಕೊಂಡಿದ್ದಾರೆ.

ಸಮೀಪದ ಬಸವನಹಳ್ಳಿ ಬಳಿ ಅರಣ್ಯ ಸಿಬ್ಬಂದಿ ಬೆಳಿಗ್ಗೆ 5 ಗಂಟೆ ವೇಳೆಯಲ್ಲಿ ಗಸ್ತಿನಲ್ಲಿ ಇದ್ದ ಸಂದರ್ಭ ಕಾರ್ಯಾಚರಣೆ ನಡೆಸಿ ಬೆಲೆಬಾಳುವ ಬೀಟಿ ಸಾಗಾಟ ಮಾಡುತ್ತಿದ್ದ ರೂ.1.50 ಲಕ್ಷ ಮೌಲ್ಯದ ನಾಲ್ಕು ಬೀಟೆ ನಾಟ ಸೇರಿದಂತೆ ಮಾರುತಿ ಕಾರನ್ನು ವಶಪಡಿಸಿಕೊಂಡರು. ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸರಂಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್, ಉಪ ವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್, ಅರಣ್ಯ ವೀಕ್ಷಕರಾದ ದಿನೇಶ್, ಚಾಲಕ ಸತೀಶ್, ಸಿಬ್ಬಂದಿ ನವೀನ್, ಗಿರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರು.

Translate »