ಸಾಕು ತಂದೆ ಮನೆಯಲ್ಲೇ ಕಳವು ಮಾಡಿದ್ದ ಶಿಕ್ಷಕಿ ಸೆರೆ 3.60 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಕೊಡಗು

ಸಾಕು ತಂದೆ ಮನೆಯಲ್ಲೇ ಕಳವು ಮಾಡಿದ್ದ ಶಿಕ್ಷಕಿ ಸೆರೆ 3.60 ಲಕ್ಷ ಮೌಲ್ಯದ ಚಿನ್ನಾಭರಣ ವಶ

May 27, 2018

ಮಡಿಕೇರಿ:  ಮೂರ್ನಾಡಿನ ಸುಭಾಷ್ ನಗರದಲ್ಲಿ ಕಳೆದ ಐದು ದಿನಗಳ ಹಿಂದೆ ನಡೆದ ಮನೆಕಳವು ಪ್ರಕ ರಣವನ್ನು ಪತ್ತೆ ಹಚ್ಚುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿ ಯಾಗಿದ್ದು, ಮನೆಯೊಡೆಯನ ಸಾಕುಮ ಗಳೇ ಚೋರಿ ಎನ್ನುವುದು ಖಾತ್ರಿಯಾ ಗಿದೆ. ಕೃಪಾಶ್ರೀ(26) ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ.

ಮೂರ್ನಾಡು ಸುಭಾಷ್ ನಗರ ನಿವಾಸಿ ವೆಂಕಟರಮಣ ಭಟ್ ಅವರು ಮೇ 20 ರಂದು ಕಾರ್ಯನಿಮಿತ್ತ ಪರ ಊರಿಗೆ ತೆರ ಳಿದ್ದು, ಮರಳಿ ಮನೆಗೆ ಬರುವಷ್ಟರಲ್ಲಿ ಅವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗಿದ್ದ ಸುಮಾರು 3.64 ಲಕ್ಷ ರೂ. ಮೌಲ್ಯ ಚಿನ್ನಾಭರಣ ಹಾಗೂ ನಗದು ಕಳವಾಗಿತ್ತು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು.

ಈ ಪ್ರಕರಣವನ್ನು ಪತ್ತೆಹಚ್ಚುವ ನಿಟ್ಟಿ ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರು ಹಾಗೂ ಗ್ರಾಮಾಂತರ ಠಾಣಾಧಿಕಾರಿಗೆ ನೀಡಿದ ನಿರ್ದೇ ಶನದ ಮೇರೆಗೆ ಕಾರ್ಯಪ್ರವೃತ್ತ ರಾದ ಸಿಬ್ಬಂದಿ ಮಾಹಿತಿ ಕಲೆ ಹಾಕಿದಾಗ ವೆಂಕಟರಮಣ ಭಟ್ ಅವರ ಸಾಕು ಮಗ ಳಾದ ಕೃಪಾಶ್ರೀ (26) ಎಂಬಾಕೆಯ ಮೇಲೆ ಶಂಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಆಕೆಯನ್ನು ಮೇ 23ರಂದು ವಿಚಾರಣೆಗೆ ಒಳಪಡಿಸಿದಾಗ ಮನೆಯ ಬಗ್ಗೆ ಸಂಪೂರ್ಣ ತಿಳಿದಿದ್ದ ಆಕೆಯ ಮನೆಯ ಹಿಂಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸಿ ಚಿನ್ನಾಭರಣಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕೃಪಾಶ್ರೀ ವೃತ್ತಿಯಲ್ಲಿ ಶಿಕ್ಷಕಿ ಯಾಗಿದ್ದು, ಎಮ್ಮೆಮಾಡು ಶಾಲೆಯಲ್ಲಿ ಕರ್ತವ್ಯದಲ್ಲಿರುವುದಾಗಿ ಹೇಳಲಾಗಿದ್ದು, ಆಕೆಯಿಂದ ಸುಮಾರು 3.60ಲಕ್ಷ ರೂ. ಮೌಲ್ಯದ 114 ಗ್ರಾಂ ಚಿನ್ನದ ಒಡವೆ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್.ಸುಂದರರಾಜ್ ಅವರ ಮಾರ್ಗ ದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ ಹಾಗೂ ಮಡಿ ಕೇರಿ ಗ್ರಾಮಾಂತರ ಠಾಣಾ ಠಾಣಾಧಿ ಕಾರಿ ಯತೀಶ್.ಎನ್ ಐಪಿಎಸ್ (ಪ್ರೊ ಬೆಷನರಿ), ಮತ್ತು ವಿ.ಚೇತನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಸಿಬ್ಬಂದಿಗಳಾದ ಇಬ್ರಾಹಿಂ, ಚಂದ್ರ ಶೇಖರ್, ಇಟ್ನಾಳ್, ಮಂಜುನಾಥ್, ಕಾಳಿಯಪ್ಪ, ವೀಣಾ, ರಾಧಾ, ಚಾಲಕರು ಗಳಾದ ಸುನಿಲ್, ಮನೋಹರ್ ಅವರು ಭಾಗವಹಿಸಿದ್ದರು.
ಈ ಪ್ರಕರಣವನ್ನು ತ್ವರಿತವಾಗಿ ಪತ್ತೆ ಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿ ಯವರ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ನಗದು ಬಹು ಮಾನ ಘೋಷಿಸಿದ್ದಾರೆ.

Translate »