ಅಂಗವಿಕಲರಿಗೆ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗುವ ಅಧಿಕಾರಿಗಳಿಗೆ ಜೈಲುಶಿಕ್ಷೆ
ಮೈಸೂರು

ಅಂಗವಿಕಲರಿಗೆ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗುವ ಅಧಿಕಾರಿಗಳಿಗೆ ಜೈಲುಶಿಕ್ಷೆ

August 18, 2019

ಮೈಸೂರು,ಆ.17(ಎಸ್‍ಪಿಎನ್)-ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಅಂಗವಿಕಲ ವ್ಯಕ್ತಿಗಳ ಹಕ್ಕು ಸಂರಕ್ಷಣಾ ಕಾಯಿದೆ-2016’ ಅನ್ನು ಸಮರ್ಪಕವಾಗಿ ಜಾರಿ ಗೊಳಿಸುವಂತೆ ಎಲ್ಲಾ ಇಲಾಖಾ ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದು ಅಂಗವಿಕ ಲರ ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್.ಬಸವರಾಜು ತಿಳಿಸಿದರು.

ಮೈಸೂರು ಜಿಲ್ಲಾ ಪಂಚಾಯಿತ್ ಸಭಾಂ ಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂಗವಿಕಲರಿಗೆ ಸರ್ಕಾ ರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯ ಗಳನ್ನು ಸಮರ್ಪಕವಾಗಿ ವಿತರಿಸುವುದು. ಅವರು ಎಲ್ಲರಂತೆ ಗೌರವಯುತ ಜೀವನ ನಡೆಸುವ ವಾತಾವರಣ ಕಲ್ಪಿಸುವುದು ಈ ಕಾಯಿದೆ ಮುಖ್ಯ ಉದ್ದೇಶ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಯಲ್ಲಿ ಅಂಗವಿಕಲರಿಗೆ ವಿಶೇಷ ಶಿಕ್ಷಣ ನೀಡಲು ತರಬೇತಿ ಹೊಂದಿದ ಶಿಕ್ಷಕರ ಸಂಖ್ಯೆ ಕಡಿಮೆಯಿದ್ದು, ಈ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಜತೆಗೆ ಗ್ರಾಮೀಣ ಭಾಗದ ವಿಕಲಚೇತ ನರು ಶಾಲೆಗಳಿಗೆ ಹೋಗುವುದು ಕಡಿಮೆ. ಇವರನ್ನು ಶಾಲೆಗೆ ಬರುವಂತೆ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.

ನೂತನ ಕಾಯಿದೆ ಜಾರಿಯಾಗಿರುವುದ ರಿಂದ ಮೂಲಭೂತ ಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ಕೃತಕಾಂಗ ಜೋಡಣೆ, ಕಾಲೇಜು ಮತ್ತು ಬಸ್ ನಿಲ್ದಾಣಗಳಲ್ಲಿ ಪ್ರತ್ಯೇಕ ಶೌಚಾಲಯ, ಕ್ರೀಡಾ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಇಲ್ಲವಾ ದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ 2 ವರ್ಷ ಜೈಲು ಶಿಕ್ಷೆ ಅಥವಾ 5 ಲಕ್ಷದ ವರೆಗೆ ದಂಡ ವಿಧಿಸಬಹುದು ಎಂದರು.

ನೂತನ ಕಾಯಿದೆ ಪ್ರಕಾರ ಅಂಗವಿಕ ಲರ ಹಕ್ಕುಗಳನ್ನು ನಿರ್ಲಕ್ಷಿಸುವಂತಿಲ್ಲ. ಪ್ರತಿ ಇಲಾಖೆಯಲ್ಲೂ ಅವರಿಗಾಗಿ ಶೇ.5 ರಷ್ಟು ಅನುದಾನವನ್ನು ಮೀಸಲಿಟ್ಟು, ಅನು ಷ್ಠಾನಗೊಳಿಸಬೇಕು. ಕೈಗಾರಿಕೆಗೆ ಸಂಬಂ ಧಿಸಿದಂತೆ ಸಿಎಂಇಜಿಪಿ ಹಾಗೂ ಪಿಎಂ ಇಜಿಪಿ ಯೋಜನೆಯಡಿ ವಿಕಲಚೇತನರÀನ್ನು ಗುರುತಿಸಿ ಅನುದಾನ ವಿತರಿಸಬೇಕು. ಜತೆಗೆ ಆಯಾಯ ಕೈಗಾರಿಕೆಗೆ ಸಂಬಂಧಿಸಿದ ತರ ಬೇತಿಗಳನ್ನು ನೀಡಿ ಉದ್ಯೋಗ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದರು. ಅಂಗವಿಕಲರು ಕೃಷಿ ಮತ್ತು ತೋಟಗಾರಿಕೆ ಯಲ್ಲಿ ತೊಡಗಿಸಿಕೊಂಡಿದ್ದರೆ ಅಂತಹ ಫಲಾ ನುಭವಿಗಳಿಗೆ ಎರಡೂ ಇಲಾಖೆಯಲ್ಲಿ ಪ್ರತ್ಯೇಕವಾಗಿ 1.40 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಬಸ್‍ಗಳಲ್ಲಿ ಅಂಗವಿಕಲರಿಗಾಗಿ ಮೀಸಲಿಟ್ಟಿದ್ದ ಆಸನ ಗಳಲ್ಲಿ ಬೇರೆ ಪ್ರಯಾಣಿಕರು ಕುಳಿತಿದ್ದರೆ ದಂಡ ವಿಧಿಸಬೇಕು. ವಿಕಲಚೇತನರಿಗೆ ಶೀಘ್ರವೇ ಬಸ್‍ಪಾಸ್ ನೀಡಲು ಕ್ರಮವಹಿಸು ವಂತೆ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಬೆಂಗಳೂರು ಅಂಗವಿಕಲರ ವ್ಯಕ್ತಿಗಳ ಅಧಿ ನಿಯಮ ರಾಜ್ಯ ಸಹಾಯಕ ಆಯುಕ್ತ ಎಸ್.ಕೆ.ಪದ್ಮ ನಾಭ, ಜಿಪಂ ಸಿಇಓ ಕೆ.ಜ್ಯೋತಿ, ಮುಖ್ಯ ಯೋಜನಾಧಿಕಾರಿ ಪದ್ಮಶೇಖರ್ ಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಪಾಂಡುರಂಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಹನೂರು ಚೆನ್ನಪ್ಪ ಇದ್ದರು.

Translate »