ಹುಣಸೂರಲ್ಲಿ ಬೆಳಿಗ್ಗೆ ಪೂರ್ಣ ಬಂದ್, ಮಧ್ಯಾಹ್ನ ನಂತರ ವಹಿವಾಟು ಮಾಮೂಲು
ಮೈಸೂರು

ಹುಣಸೂರಲ್ಲಿ ಬೆಳಿಗ್ಗೆ ಪೂರ್ಣ ಬಂದ್, ಮಧ್ಯಾಹ್ನ ನಂತರ ವಹಿವಾಟು ಮಾಮೂಲು

September 11, 2018

ಹುಣಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿ ಪಕ್ಷಗಳು ಹಾಗೂ ವಿವಿಧ ಸಂಘ ಟನೆಗಳು ಕರೆ ನೀಡಿದ ಭಾರತ್ ಬಂದ್‍ಗೆ ಹುಣಸೂರಿನಲ್ಲಿ ಬೆಳಿಗ್ಗೆ ಅಂಗಡಿ ಮುಂಗಟ್ಟು ಇನ್ನಿತರೆ ವಾಣಿಜ್ಯ ಕೇಂದ್ರ ಗಳು ಸಂಪೂರ್ಣ ಮುಚ್ಚಿ ಬೆಂಬಲ ವ್ಯಕ್ತಪಡಿಸಿದರೆ, ಮಧ್ಯಾಹ್ನದ ವೇಳೆಗೆ ಕೆಲವು ಅಂಗಡಿ ಮುಂಗಟ್ಟುಗಳು ತೆರೆದು ಎಂದಿನಂತೆ ವಹಿವಾಟು ನಡೆಯಿತು.

ಇಂದಿನ ಬಂದ್‍ನಿಂದ ಅಂಗಡಿ ಮುಂಗಟ್ಟು ಇನ್ನಿತರೆ ವಾಣಿಜ್ಯ ಕೇಂದ್ರಗಳು ಬೆಳಿಗ್ಗೆ ಮುಚ್ಚಿದ್ದವು. ರಾಜ್ಯ ಸಾರಿಗೆ ಬಸ್‍ಗಳ ಸಂಚಾರ ಇಲ್ಲದೆ ಜನ ಪರದಾಡುವಂತಾ ಗಿತ್ತು. ಬ್ಯಾಂಕ್‍ಗಳು ಸ್ವಯಂ ಮುಚ್ಚಿದ್ದವು. ಚಿತ್ರ ಮಂದಿರಗಳು ಸಹ ಬಂದ್ ಆಗಿ ದ್ದವು.

ಆದರೆ ಖಾಸಗಿ ವಾಹನಗಳು, ಆಟೋ, ಟ್ಯಾಕ್ಸಿಗಳು ಎಂದಿನಂತೆ ಸಂಚರಿಸುವ ಮೂಲಕ ದುಪಟ್ಟು ಸಂಪಾದನೆ ಮಾಡಿದವು
ಸಾರಿಗೆ ಬಸ್‍ಗಳಿಲ್ಲದೆ ಹೊಸ ಮತ್ತು ಹಳೆ ಬಸ್ (ಗ್ರಾಮಾಂತರ ಬಸ್ ನಿಲ್ದಾಣ) ನಿಲ್ದಾಣದಲ್ಲಿ ಬಸ್‍ಗಳಿಲ್ಲದೆ ಪ್ರಯಾಣಿಕರೂ ಇಲ್ಲದೆ ಬಿಕೋ ಎನ್ನುತ್ತಿದ್ದು, ಸೋಮಾರಿ ಗಳಿಗೆ ಮಲಗುವ ಮತ್ತು ನಾಯಿಗಳಿಗೆ ವಿಶ್ರಾಂತಿ ತಾಣವಾಗಿತ್ತು. ಆದರೆ ಮೆಡಿಕಲ್ ಸ್ಟೋರ್‍ಗಳು, ಹಾಲಿನ ಕೇಂದ್ರಗಳು, ಸಾರ್ವ ಜನಿಕ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವ ಹಿಸಿದವು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ತೀರ ಕಡಿಮೆ ಇತ್ತು. ಇಡೀ ನಗರವೇ ಇಂದು ಜನಸಂದಣಿ ಇಲ್ಲದೆ ಬಿಕೋ ಎನ್ನುತ್ತಿತ್ತು. ಭಾರತ್ ಬಂದ್‍ಗೆ ಕರೆ ನೀಡಿದ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಜೊತೆಗೆ ವಿವಿಧ ಸಂಘಟನೆಗಳು ಬೆಳಿಗ್ಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸುವ ಮೂಲಕ ಪ್ರತಿಭಟನೆ ನಡೆಸಿದವು. ಕಾಂಗ್ರೆಸ್ ಯುವ ಸಂಘಟಕರು ಬೈಕ್ ಗಳಲ್ಲಿ ನಗರದ ಪಕ್ಷದ ಕಚೇರಿಯಿಂದ ಹೊರಟು, ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ರ್ಯಾಲಿಯಲ್ಲಿ ಬ್ಲಾಕ್ ಅಧ್ಯಕ್ಷ ಬಸವರಾಜೇಗೌಡ, ಯುವ ಅಧ್ಯಕ್ಷ ಬಿಳಿಕೆರೆ ಸ್ವಾಮಿ, ಬಿಳಿಕೆರೆ ಬ್ಲಾಕ್ ಅಧ್ಯಕ್ಷ ಟಿ.ವಿ.ನಾರಾಯಣ್, ನಗರಾಧ್ಯಕ್ಷ ಹೆಚ್.ಎಸ್. ಶಿವಯ್ಯ, ಮುಖಂಡರಾದ ಎಂ.ರವಿಶಂಕರ್, ಕಲ್ಕುಣಿಕೆ ಶ್ರೀನಿವಾಸ್, ಬಿಳಿಕೆರೆ ಬಸವ ರಾಜು, ಅಪೆÇ್ರೀಜ್ ಅಹಮದ್, ಅಸ್ವಾಳ್ ಕೆಂಪೇಗೌಡ, ಹಂದನಹಳ್ಳಿ ಸೋಮ ಶೇಖರ್, ಗುರುಸ್ವಾಮಿ, ಎಸ್.ಜಯ ರಾಮು, ಷಣ್ಮುಖ, ಮಹದೇವ ಭಾಗ ವಹಿಸಿದರು.

ಮತ್ತೊಂದೆಡೆ ಜೆಡಿಎಸ್ ಕಾರ್ಯ ಕರ್ತರು ಮತ್ತು ಮುಖಂಡರುಗಳು ಪಕ್ಷದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿ ದರು ಈ ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಹರಳಲ್ಲಿ ಮಾದೇಗೌಡ, ನಗರಸಭಾ ಸದಸ್ಯರಾದ ಹೆಚ್.ಪಿ.ಸತೀಶ್ ಕುಮಾರ್, ರವಿಕುಮಾರ್, ಸುನಿತಾಜಯ ರಾಮೇಗೌಡ, ಶರವಣ, ಪ್ರೇಮನಂಜಪ್ಪ, ಫಜಲ್‍ಅಹಮದ್, ಹೊನ್ನಯ್ಯ, ಪುಟ್ಟಮ್ಮ, ಅಣ್ಣಯ್ಯ ನಾಯಕ, ಹೆಚ್.ಎಂ. ಫಜಲುಲ್ಲಾ, ಸರ್ದಾರ್, ಹೆಚ್.ಎಂ. ಅಭಿಷೇಕ್ ಅನೇಕ ಮುಖಂಡರು ಭಾಗವಹಿಸಿದ್ದರು.

Translate »