ಮೈಸೂರು, ಜೂ. 22- ಮೈಸೂರು ನಗರಪಾಲಿಕೆ ಇದೇ ಮೊದಲನೇ ಬಾರಿಗೆ ಸಾರ್ವಜನಿಕರ ಯೋಗಾಭ್ಯಾಸಕ್ಕೆ ಅನು ಕೂಲವಾಗಲೆಂದು ಮೈಸೂರಿನ ರಾಮಾನುಜ ಮುಖ್ಯರಸ್ತೆಯಲ್ಲಿ ಯೋಗಭವನವನ್ನು ನಿರ್ಮಿಸಿ ಅಂತರ್‍ರಾಷ್ಟ್ರೀಯ ಯೋಗ ದಿನದಂದು ಲೋಕಾರ್ಪಣೆಗೊಳಿಸಿದೆ. ನಗರ ಪಾಲಿಕೆಯ ಸಾಮಾನ್ಯ ನಿಧಿಯಲ್ಲಿ 25 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಯೋಗಭವನವನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಈ ಯೋಗಭವನವನ್ನು ಸುತ್ತಮುತ್ತಲಿನ ನಿವಾಸಿಗಳು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್, ಯೋಗ ದಿನದಂದು ಯೋಗ ಗೀತೆಯೊಂದನ್ನು ರಚಿಸಿ, ಇಡೀ ವಿಶ್ವಕ್ಕೆ ಕೊಡುಗೆ ನೀಡಿದವರು ಕರ್ನಾಟಕದವರೇ ಆದ ಗಣೇಶ್ ಮತ್ತು ಇದೇ ವಾರ್ಡ್ ನಂ.51ರ ರಾಮಾನುಜ ರಸ್ತೆಯ ಭಾಗದಲ್ಲಿ ಹುಟ್ಟಿ ಬೆಳೆದ ಡಾ.ಮಂಜುನಾಥ್ ಎಂಬು ವವರು ಸಂಗೀತಾ ಸಂಯೋಜನೆಯನ್ನು ಮಾಡಿರುವುದು ಸಂತೋಷ ವಾಗಿದೆ. ಯೋಗಭವನ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ. ಮೈಸೂರಿನಲ್ಲಿ ಹಲವಾರು ಯೋಗ ಸಂಸ್ಥೆಗಳು ಯೋಗ ತರ ಗತಿಗಳನ್ನು ನಡೆಸುತ್ತಿದ್ದು, ಮೈಸೂರಿನ ಜನತೆಯನ್ನು ರೋಗಮುಕ್ತ ರನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಗ ಗುರುಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ ಎಂದು ಶ್ಲಾಘಿಸಿದರು.
ಆದರೆ ಎಲ್ಲಾ ಯೋಗ ಸಂಸ್ಥೆಗಳು ಒಟ್ಟಾಗಿ ಸೇರಿ ಯೋಗ ಸಂಸ್ಥೆಗಳ ಒಕ್ಕೂಟ ಮಾಡಿಕೊಂಡು ಕಾರ್ಯನಿರ್ವಹಿಸಿದ್ದಲ್ಲಿ ಇನ್ನೂ ಉತ್ತಮವಾದ ಆರೋಗ್ಯ ಮೈಸೂರನ್ನು ನಿರ್ಮಾಣ ಮಾಡ ಬಹುದು ಎಂದು ಹೇಳಿದ ಶಾಸಕರು, ವಾರ್ಡ್ ನಂ -51ರ ನಿವಾಸಿಗಳು ಈ ಯೋಗಭವನದಲ್ಲಿ ನಿರಂತರವಾಗಿ ಯೋಗಾಭ್ಯಾಸ ವನ್ನು ಮಾಡುವುದರ ಮುಖಾಂತರ ಭವನವನ್ನು ಸೂಕ್ತ ರೀತಿ ಯಲ್ಲಿ ಉಪಯೋಗಿಸಿಕೊಂಡು ಆರೋಗ್ಯವಂತರಾಗಿರಬೇ ಕೆಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಕೃಷ್ಣರಾಜ ಕ್ಷೇತ್ರಾದ್ಯಾಂತ ಎಲ್ಲಾ ವಾರ್ಡ್‍ಗಳಲ್ಲೂ ಸರ್ಕಾರಿ ಜಾಗದಲ್ಲಿ ಯೋಗಭವನ ವನ್ನು ನಿರ್ಮಾಣ ಮಾಡುವುದರ ಮೂಲಕ ಯೋಗಾಸಕ್ತರಿಗೆ ಅನೂಕೂಲ ಮಾಡಿಕೊಟ್ಟು ಆರೋಗ್ಯ ಮೈಸೂರನ್ನು ಮಾಡಲು ನಗರೋತ್ಥಾನದ ನಿಧಿಯಲ್ಲಿ ಈಗಾಗಲೇ ಹಣ ಮೀಸಲಿರಿ ಸಲಾಗಿದೆ ಎಂದು ತಿಳಿಸಿದರು.
ಕಾರ್ಪೋರೇಟರ್ ಬಿ.ವಿ. ಮಂಜುನಾಥ್ ಮಾತನಾಡಿದರು. ರಾಷ್ರ್ಟೀಯ ಯೋಗಪಟು ಹಾಗೂ ಯೋಗ ಗುರುಗಳಾದ ಯೋಗ ಪ್ರಕಾಶ್ ಮುಂದಿನ ದಿನಗಳಲ್ಲಿ ಉಚಿತ ಯೋಗ ತರಗತಿಯನ್ನು ಜುಲೈ 1ರಿಂದ ಬೆಳಿಗ್ಗೆ ಮತ್ತು ಸಂಜೆ ನಡೆಸಲಾಗುವುದು ಎಂದರು. ಈ ಸಮಾರಂಭದಲ್ಲಿ ಯೋಗ ಸಂಸ್ಥೆಯ ಅಧ್ಯಕ್ಷರಾದ ರಮೇಶ್, ಯೋಗ ಗುರು ನಂದಕುಮಾರ್, ವಲಯ 1ರ ಸಹಾಯಕ ಆಯುಕ್ತ ರಂಜಿತ್‍ಕುಮಾರ್, ಭರತ್, ಹಿರಿಯರಾದ ಗುರುರಾಘವೇಂದ್ರ, ಕಾನ್ಯ ಶಿವಮೂರ್ತಿ, ದ್ರಾಕ್ಷಾಯಿಣಿ, ಮಹದೇವಪ್ಪ, ವಾರ್ಡ್ ಅಧ್ಯಕ್ಷ ಗುರುರಾಜ್ ಶಣೈ, ರಾಮಪ್ರಸಾದ್, ಹೇಮಂತ್ ಕುಮಾರ್, ಹೆಚ್.ವಿ.ಭಾಸ್ಕರ್, ಕಾವೇರಿ, ಮಮತಾ, ಶಿವಕುಮಾರಿ, ವೆಂಕ ಟೇಶ್, ಓಂಪ್ರಕಾಶ್, ಬಿ.ಸೋಮಶೇಖರ್, ರಾಜ್‍ಕುಮಾರ್, ಆದರ್ಶ್, ಮಹೇಶ್, ಸುಮುಖ್ ಮುಂತಾದವರು ಹಾಜರಿದ್ದರು.
.