ಮೈಸೂರು: ಭಾರತ ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರ ಗಳಲ್ಲಿಯೇ ಅತ್ಯುತ್ತಮವಾದ ಸಂವಿಧಾನ ಹೊಂದಿದೆ. ನಮ್ಮ ಸಂವಿಧಾನವನ್ನು ಕಾನೂನು ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕದಂತೆ ಓದದೆ ದೇಶದ 130 ಕೋಟಿ ಜನತೆಯ ಅಭಿವೃದ್ಧಿ ಬಯಸುವ, ಜೀವ ಪರ ಕಾನೂನು ಎಂದು ಭಾವಿಸಿ ಅಧ್ಯ ಯನ ಮಾಡಬೇಕು ಎಂದು ಸುಪ್ರಿಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಅವರು ಇಂದಿಲ್ಲಿ ಸಲಹೆ ನೀಡಿದ್ದಾರೆ.
ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಶನಿವಾರ ದಿ.ಕೆ.ಪುಟ್ಟ ಸ್ವಾಮಿ ಸ್ಮರಣಾರ್ಥ ನಡೆದ ದತ್ತಿ ಉಪ ನ್ಯಾಸದಲ್ಲಿ `ಭಾರತ ಸಂವಿಧಾನ-ಕ್ರಿಯಾ ಶೀಲತೆ’ ಕುರಿತು ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳು ನಮ್ಮ ಶ್ರೇಷ್ಠ ಸಂವಿಧಾನವನ್ನು ಪಠ್ಯ ಪುಸ್ತಕದ ರೂಪ ದಲ್ಲಿ ಅಭ್ಯಾಸ ಮಾಡುವುದನ್ನು ಕಾಣು ತ್ತೇವೆ. ಇದರಿಂದ ಅದರ ಮಹತ್ವವನ್ನು ಪರಿಣಾಮಕಾರಿಯಾಗಿ ಮನನ ಮಾಡಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಯಲ್ಲಿ ದೇಶದ 130 ಕೋಟಿ ಜನರ ರಕ್ಷಣೆ, ಏಳ್ಗೆಯೊಂದಿಗೆ ಸರ್ವರ ಹಿತ ವನ್ನೂ ಬಯಸುವ ಕಾನೂನು ಎಂದು ಅರಿತುಕೊಂಡು ಅಧ್ಯಯನ ಮಾಡುವು ದರಿಂದ ಮುಂದಿನ ದಿನಗಳಲ್ಲಿ ನಿಮಗೆ ಸಹಕಾರಿಯಾಗಲಿದೆ ಎಂದರು.
ಸಂವಿಧಾನ ತನ್ನದೇ ಆದ ಆಶಯ ಹೊಂದಿದೆ. ಸಮಾಜದಲ್ಲಿ ಶಾಂತಿ ನೆಲೆ ಸುವುದರೊಂದಿಗೆ ಸಮಾನತೆ ಸ್ಥಾಪಿಸು ವುದಕ್ಕೆ ಕಾನೂನು ರೂಪಿಸಿದೆ. ಆದರೂ ಅನಾಚಾರ ನಡೆಯುತ್ತಿವೆ. ಇದು ಸಂವಿ ಧಾನದ ದೌರ್ಬಲ್ಯದಿಂದ ನಡೆಯುತ್ತಿ ರುವ ಘಟನೆಗಳಲ್ಲ. ಅದನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸಲು ಸಾಧ್ಯ ವಾಗದೇ ಇರುವ ನಮ್ಮ ದೌರ್ಬಲ್ಯದಿಂದ ಅನಾಚಾರಕ್ಕೆ ಎಡೆಮಾಡಿಕೊಟ್ಟಂತಾಗಿದೆ. ನಾವು ಅತ್ಯುತ್ತಮ ಸಂವಿಧಾನ ಹೊಂದಿ ದ್ದೇವೆ. ಅದರ ಪೀಠಿಕೆಯಲ್ಲಿ ಜಾತ್ಯತೀತ ಪರಿಕಲ್ಪನೆ ಸೇರಿಸಿದ್ದೇವೆ. ರಾಜ್ಯ ನಿರ್ದೇ ಶಕ ತತ್ವ, ಮೂಲಭೂತ ಹಕ್ಕು, ಕರ್ತವ್ಯ ಗಳ ಬಗ್ಗೆ ಉಲ್ಲೇಖಿಸಲಾಗಿದೆ. ನಾವು ಸಂವಿಧಾನ ಬದ್ಧವಾಗಿ ಹಕ್ಕುಗಳನ್ನು ಪಡೆದು, ಕರ್ತವ್ಯ ಪಾಲಿಸುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ವಿಷಾದಿಸಿದರು.
ದೇಶದಲ್ಲಿ ಜಾತಿ, ಅಪರಾಧ, ಭ್ರಷ್ಟಾ ಚಾರ ಹೆಚ್ಚುತ್ತಿದೆ. ಇವು ಕ್ಯಾನ್ಸರ್ ರೋಗ ವಿದ್ದಂತೆ ವ್ಯಾಪಿಸುತ್ತಿವೆ. ಜನರಿಂದ, ಜನರಿ ಗಾಗಿ, ಜನರಿಗೋಸ್ಕರ ಎಂಬುದು ಪ್ರಜಾ ಪ್ರಭುತ್ವದ ಆಶಯಕ್ಕೆ ಧಕ್ಕೆಯಾಗುತ್ತಿದೆ. ಮತದಾನ ಪ್ರಕ್ರಿಯೆ ಪರಿಶುದ್ಧವಾಗಿ ನಡೆ ದರೆ ಉತ್ತಮ ಜನಪ್ರತಿನಿಧಿಗಳು ಆಯ್ಕೆ ಯಾಗಿ ಸಂವಿಧಾನದ ಆಶಯ ಈಡೇರಿಕೆಗೆ ಸಹಕಾರಿಯಾಗಲಿದೆ. ಹಿಂದೆ `ಯಥಾ ರಾಜಾ ತಥಾ ಪ್ರಜಾ’ ಎನ್ನು ವಂತಿತ್ತು. ಇದೀಗ `ಯಥಾ ಪ್ರಜಾ ತಥಾ ರಾಜ’ ಎಂಬಂತಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಕಾಲೇಜು ಪ್ರಾಂಶುಪಾಲ ಕೆ.ಬಿ.ವಾಸುದೇವ, ಸಂಯೋಜಕಿ ಎಂ.ಜೆ.ಇಂದುಮತಿ ಸೇರಿದಂತೆ ಇನ್ನಿತರರ ಉಪಸ್ಥಿತರಿದ್ದರು.