ದೇಶಕ್ಕೆ ಮಹಾರಾಜರು ಬೇಕಿಲ್ಲ… ಚೌಕಿದಾರರು ಬೇಕಿದೆ
ಮೈಸೂರು

ದೇಶಕ್ಕೆ ಮಹಾರಾಜರು ಬೇಕಿಲ್ಲ… ಚೌಕಿದಾರರು ಬೇಕಿದೆ

April 1, 2019

ನವದೆಹಲಿ: ರಾಜಮನೆತನದ ನಾಯಕರೆಲ್ಲ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಈ ದೇಶಕ್ಕೆ ಮಹಾರಾಜರು ಬೇಕಿಲ್ಲ. ಚೌಕಿದಾರರು ಬೇಕಾಗಿದ್ದಾರೆ. ಇಂದು ನಾವೆಲ್ಲರೂ ಕಾವಲು ಗಾರರಾಗಿ ದೇಶವನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿಯ ಟೌನ್‍ಹಾಲ್‍ನಲ್ಲಿ ಇಂದು `ಮೈ ಭೀ ಚೌಕಿದಾರ್’ ಸಂವಾದ ಕಾರ್ಯಕ್ರಮ ದಲ್ಲಿ ದೇಶದ ಮತದಾರರನ್ನುದ್ದೇಶಿಸಿ ಮಾತನಾ ಡಿದ ಅವರು, ದೇಶದ ಪ್ರತಿಯೊಬ್ಬರೂ ಚೌಕಿದಾರ ರಾಗಬೇಕು. ದೇಶವನ್ನು ಲೂಟಿ ಹೊಡೆಯುತ್ತಿರು ವವರ ವಿರುದ್ಧ ಒಂದಾಗಬೇಕು ಎಂದರು.

ಸೈನಿಕರು, ಕಾರ್ಮಿಕರು ಹಾಗೂ ವಿದ್ಯಾರ್ಥಿ ಗಳು ಎಲ್ಲರೂ ಚೌಕಿದಾರರೇ. ಚೌಕಿದಾರರು ಎಂದೂ ಭ್ರಷ್ಟಾಚಾರವನ್ನು ಸಹಿಸಲ್ಲ. ಇಂದು ದೇಶದ ಅಭಿವೃದ್ಧಿಗಾಗಿ ನಾವೆಲ್ಲಾ ಶಪಥ ಮಾಡೋಣ. ಕಳೆದ 70 ವರ್ಷಗಳ ಅವಧಿಯಲ್ಲಿ ಆಗಿರದ ಅಭಿವೃದ್ಧಿ ಕಳೆದ 5 ವರ್ಷದಲ್ಲಿ ಆಗಿದೆ ಅಂದರೆ ಅದಕ್ಕೆ ಮೋದಿ ಕಾರಣ ಅಲ್ಲ. ದೇಶದ ಜನರಾದ ನೀವು ನೀಡಿರುವ ಪೂರ್ಣ ಬಹು ಮತವೇ ಈ ಅಭಿವೃದ್ಧಿಗೆ ಕಾರಣ ಎಂದರು.

ಕಳೆದ 40 ವರ್ಷಗಳಿಂದ ದೇಶದಲ್ಲಿ ಭಯೋ ತ್ಪಾದನೆ ಸಮಸ್ಯೆ ಇದೆ. ಉಗ್ರ ಸಂಘಟನೆಗಳು ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡು ತ್ತಲೇ ಬಂದಿವೆ. ಜಮ್ಮ-ಕಾಶ್ಮೀರ, ಮುಂಬೈ ಸೇರಿ ದಂತೆ ಅನೇಕ ಭಾಗಗಳಲ್ಲಿ ಭಯೋತ್ಪಾದಕರ ದಾಳಿ ನಡೆದಿದೆ. ನಾವು ಎಷ್ಟು ಅಂತ ಸಹಿಸಿ ಕೊಳ್ಳುವುದು ಇದಕ್ಕೆಲ್ಲಾ ನಾವು ಅಂತ್ಯ ಹಾಡ ಬೇಕಾಗಿದೆ. ಭಯೋತ್ಪಾದನೆಯನ್ನು ನಿಯಂತ್ರಿ ಸುತ್ತಿರುವ ನೆಲಕ್ಕೆ ನುಗ್ಗಿ ಹೊಡೆಯಬೇಕು ಎಂಬ ಉದ್ದೇಶದಿಂದ ಭಾರತೀಯ ವಾಯುಪಡೆಗೆ ಬಾಲಕೋಟ್ ಮೇಲೆ ವೈಮಾನಿಕ ದಾಳಿ ನಡೆ ಸಲು ಸೂಚಿಸಲಾಗಿತ್ತು. ಈ ದಾಳಿಯಿಂದ ಪಾಕ್‍ಗೆ ಬಿಸಿ ಮಟ್ಟಿದೆ. ಚುನಾವಣೆ ಇದೆ ಎನ್ನುವ ಕಾರಣ ಕ್ಕಾಗಿ ಪಾಕ್ ಮೇಲೆ ದಾಳಿ ಮಾಡಿಲ್ಲ. ಆದರೆ ನಮ್ಮ ದೇಶದ ಕೆಲ ಜನರು ಪಾಕಿಸ್ತಾನ ಹೇಳಿಕೆ ಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ಬೇಸರವಾಗಿದೆ ಎಂದು ಅವರು ಹೇಳಿದರು.

ಬಾಲ್‍ಕೋಟ್‍ನಲ್ಲಿ ನಮ್ಮ ಹೆಮ್ಮೆಯ ಸೈನಿಕರು ಉಗ್ರರಿಗೆ ಪಾಠ ಕಲಿಸಿದ್ದಾರೆ. ಆದರೆ ಅದನ್ನು ಪಾಕಿ ಸ್ತಾನ ಒಪ್ಪಿಕೊಳ್ಳುತ್ತಿಲ್ಲ. ಅಲ್ಲದೇ ನಾವು ಯಾವುದೇ ಉಗ್ರರ ಕ್ಯಾಂಪ್‍ಗಳನ್ನು ನಡೆಸುತ್ತಿಲ್ಲ ಎಂದು ಹೇಳುತ್ತಿದೆ. ಆದರೆ ನಾನು ಈಗಲೂ ಹೇಳುತ್ತೇನೆ ಪಾಕಿಸ್ತಾನ ಉಗ್ರರಿಗಾಗಿ ಕ್ಯಾಂಪ್ ನಡೆಸುತ್ತಿದೆ. ನಿಮ್ಮ ಮೋದಿ ಚುನಾವಣೆಯಲ್ಲಿ ಬ್ಯುಸಿ ಇಲ್ಲ. ದೇಶ ಸೇವೆಯಲ್ಲಿ ಬ್ಯುಸಿ ಇದ್ದಾರೆ. ನನಗೆ ಚುನಾ ವಣೆ ಮುಖ್ಯವಲ್ಲ. ದೇಶದ ಅಭಿವೃದ್ಧಿ ಮತ್ತು ಭದ್ರತೆ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದರು.

Translate »