ಮೋದಿ ಪುನರಾಯ್ಕೆಯಾಗದಿದ್ದರೆ ಭಾರತದ ಅಭಿವೃದ್ಧಿ ಕುಂಠಿತ: ಅಮೆರಿಕದ ಉನ್ನತ ಕೈಗಾರಿಕೋದ್ಯಮಿ ಜಾನ್ ಚೇಂಬರ್ಸ್
ಮೈಸೂರು

ಮೋದಿ ಪುನರಾಯ್ಕೆಯಾಗದಿದ್ದರೆ ಭಾರತದ ಅಭಿವೃದ್ಧಿ ಕುಂಠಿತ: ಅಮೆರಿಕದ ಉನ್ನತ ಕೈಗಾರಿಕೋದ್ಯಮಿ ಜಾನ್ ಚೇಂಬರ್ಸ್

July 19, 2018

ವಾಷಿಂಗ್ಟನ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆಯಾಗದಿದ್ದರೆ `ಪ್ರಭಾವಶಾಲಿ ಅಭಿವೃದ್ಧಿ ಮತ್ತು ಅಂತರ್ಗತ ಬೆಳವಣಿಗೆಯಲ್ಲಿ ಕುಂಠಿತವಾಗಲಿದೆ ಎಂದು ಅಮೆರಿಕಾದ ಉನ್ನತ ಕೈಗಾರಿಕೋದ್ಯಮಿ ಜಾನ್ ಚೇಂಬರ್ಸ್ ತಿಳಿಸಿದ್ದಾರೆ.

ಸಿಐಎಸ್‍ಸಿಓ ಸಿಸ್ಟಮ್ಸ್ ಸಿಇಓ ಹಾಗೂ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಜಾನ್ ಚೇಂಬರ್ಸ್ ಭಾರತೀಯ ಪತ್ರಕರ್ತರ ಸಮೂಹದೊಂದಿಗೆ ಮಾತನಾಡಿ, ವಿಶ್ವದಲ್ಲೇ ಭಾರತ ಅಂತರ್ಗತವಾಗಿ ಪ್ರಬಲವಾಗಿ ಬೆಳೆಯುವ ಅವಕಾಶ ಹೊಂದಿದೆ ಎಂದರು.

“ವಿಶ್ವದಲ್ಲಿ ಭಾರತವು ತನ್ನದೇ ಆದ ಸ್ಥಾನವನ್ನು ಪಡೆಯಲು ಹಲವು ದಶಕಗಳೇ ಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಮಥ್ರ್ಯವಿರುವುದರಿಂದ ಇದನ್ನು ಸಾಧಿಸುತ್ತಾರೆ. ಅವರು ಸರಿ ದಾರಿಯಲ್ಲಿ ದೇಶವನ್ನು ಮುನ್ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದರು.

“ಮೋದಿಯವರ ದೂರದೃಷ್ಟಿಯನ್ನು ಪೂರ್ಣಗೊಳಿಸಲು ಅವರಿಗೆ ಮತ್ತೊಮ್ಮೆ ಅವಕಾಶ ನೀಡದೇ ಹೋದಲ್ಲಿ ಭಾರೀ ತೊಡಕಾಗಲಿದೆ” ಎಂದು ಹೇಳಿದ ಅವರು, ಇತ್ತೀಚೆಗೆ ನಡೆದ ಯುಎಸ್-ಇಂಡಿಯಾ ಸ್ಟ್ರಾಟಜಿಕ್ ಅಂಡ್ ಪಾರ್ಟನರ್‍ಶಿಪ್ ಫೋರಂನ (ಯುಎಸ್‍ಐಎಸ್‍ಪಿಎಫ್) ವಾರ್ಷಿಕ ನಾಯಕತ್ವ ಸಮಿತಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಪುನರಾಯ್ಕೆಯಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಮೋದಿಯವರು ಓರ್ವ ಧೈರ್ಯಶಾಲಿಗಳು. ಅವರು ಪ್ರತಿನಿತ್ಯ ದೇಶದ ಭವಿಷ್ಯದ ಬಗ್ಗೆ ಯೋಚಿಸುತ್ತಲೇ ಎದ್ದೇಳುತ್ತಾರೆ” ಎಂದು ಹೇಳಿದರು.

ಇಂಡಿಯಾ-ಯುಎಸ್ ಸಂಬಂಧ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದ್ವಿಪಕ್ಷೀಯ ಸಂಬಂಧದಲ್ಲಿ ಅಪಾರ ಅವಕಾಶಗಳಿವೆ. ಉಭಯ ದೇಶಗಳು ಅಸಾಮಾನ್ಯ ಸಾಮಥ್ರ್ಯ ಹೊಂದಿದ್ದು, ನಮ್ಮ ಗಮನ ಕೇಂದ್ರೀಕರಿಸುವ ಮಾರ್ಗ ಮಧ್ಯೆಯಲ್ಲಿ ಬರುವ ಸಣ್ಣ ಸಣ್ಣ ಡುಬ್ಬಗಳು ಗಣನೆಗೆ ಬರುವುದಿಲ್ಲ’’ ಎಂದು ಅವರು ಹೇಳಿದರು.

Translate »