ಮೈಸೂರಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪನೆಗೆ ಒತ್ತಾಯ
ಮೈಸೂರು

ಮೈಸೂರಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪನೆಗೆ ಒತ್ತಾಯ

January 14, 2019

ಮೈಸೂರು: ಮೈಸೂರಿ ನಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪಿಸಲು ಮೈಸೂರು ಮಹಾನಗರ ಪಾಲಿಕೆ ಕ್ರಮ ವಹಿಸಬೇಕೆಂದು ವಿಶ್ವ ಕರ್ಮ ಸಮು ದಾಯದ ಮುಖಂಡರು ಒತ್ತಾಯಿಸಿದರು.

ಮೈಸೂರಿನ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಅಮರಶಿಲ್ಪಿ ವೇದಿಕೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 5ನೇ ವರ್ಷದ ಅಮರಶಿಲ್ಪಿ ಸಂಸ್ಮರಣಾ ದಿನಾಚರಣೆ ಹಾಗೂ ಕ್ಯಾಲೆಂಡರ್ ಬಿಡು ಗಡೆ ಸಮಾರಂಭದಲ್ಲಿ ಮೈಸೂರಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ಸ್ಥಾಪಿಸ ಬೇಕೆಂದು ವಿಶ್ವಕರ್ಮ ಸಮುದಾಯದ ಮುಖಂಡರೂ ಆದ ಮೈಸೂರು ಮಹಾ ನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ (ರಮಣಿ) ಅವರಲ್ಲಿ ಮೌಖಿಕ ಮನವಿ ಮಾಡಿದರು.

ಶ್ರೀವಿಶ್ವಕರ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಸಮುದಾಯ ಮುಖ್ಯ ವಾಹಿನಿಗೆ ಬರಲು ಸಂಘಟನೆ ಅಗತ್ಯವಿದೆ. ವಿಶ್ವಕರ್ಮ ಜನಾಂ ಗವು ಸಾಮಾಜಿಕ ಹಾಗೂ ರಾಜಕೀಯ ವಾಗಿ ಹಿಂದುಳಿದಿದ್ದು, ಶೈಕ್ಷಣಿಕವಾಗಿ ಒಂದಿಷ್ಟು ಸುಧಾರಣೆ ಕಂಡಿದೆ. ಸಮು ದಾಯ ಸಂಘಟನೆ ಮೂಲಕ ಮುಂದು ವರೆಯಬೇಕಿದ್ದು, ಆ ಮೂಲಕ ರಾಜಕೀಯ ಪಕ್ಷಗಳ ಗಮನ ಸೆಳೆಯಬೇಕಿದೆ ಎಂದರು.

ವಿಶ್ವಕರ್ಮರು ತಮ್ಮ ಕಾಯಕದಲ್ಲಿ ಅತ್ಯಂತ ನಿಷ್ಠೆ ಪ್ರದರ್ಶಿಸಿದ್ದು, ಮಾಡಿದ ಕೆಲಸಕ್ಕೆ ಎಂದೂ ತಮ್ಮ ಹೆಸರು ಹಾಕಿ ಕೊಂಡಿಲ್ಲ. ಅಂತೆಯೇ ಜಕಣಾಚಾರಿಗಳು ತಮ್ಮ ವಿಶಿಷ್ಟ ಕಲಾ ಕೌಶಲ್ಯತೆಯಿಂದ ಹಲವು ದೇವಾಲಯಗಳನ್ನು ನಿರ್ಮಿಸಿ ದ್ದರೂ ಅವುಗಳ ನಿರ್ಮಾತೃ ತಾವೆಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಇದೇ ಕಾರಣಕ್ಕೆ ಕೆಲವರು ಜಕಣಾಚಾರಿ ಎಂಬ ವ್ಯಕ್ತಿಯೇ ಇರಲಿಲ್ಲ ಎಂದು ವಾದಿಸಿದ್ದರು. ಈ ರೀತಿಯ ವಾದ ಖಂಡನಾರ್ಹ. ಮೈಸೂರಿನ ಯಾವು ದಾದರೂ ವೃತ್ತದಲ್ಲಿ ಅಮರಶಿಲ್ಪಿ ಜಕಣಾ ಚಾರಿ ಪ್ರತಿಮೆ ಸ್ಥಾಪನೆಗೆ ನಗರ ಪಾಲಿಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಸಮಾರಂಭ ಉದ್ಘಾ ಟಿಸಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಗೊಳಿಸಿ ಮಾತನಾಡಿದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ನಮ್ಮ ಸಮಾಜದವರು ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಿದೆ. ಸಂಘಟನಾತ್ಮಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ನುಡಿದರು.

ಸಮುದಾಯದ ಮುಖಂಡ ಡಾ.ಭದ್ರಾ ಚಾರ್ ದೇಶಾನಿ ಮಾತನಾಡಿ, ಜನಾಂಗ ದಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳು ಸಮು ದಾಯದ ಸಂಘಟನೆಗಳಿಂದ ರೂಪುಗೊಳ್ಳ ಬೇಕು. ಪ್ರತಿಭೆ ಇದ್ದೂ ಅದಕ್ಕೆ ಸರಿಯಾದ ಪ್ರೋತ್ಸಾಹ ನೀಡದಿದ್ದರೆ ಸಮುದಾಯ ಹಿಂದುಳಿಯಲಿದೆ. ಹೀಗಾಗಿ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡಬೇಕು ಎಂದರು. ನಗರಪಾಲಿಕೆ ಸದಸ್ಯೆ ಛಾಯಾದೇವಿ, ವಿಶ್ವಕರ್ಮ ಮಹಾ ಒಕ್ಕೂಟದ ಅಧ್ಯಕ್ಷ ಹುಚ್ಚಪ್ಪಾ ಚಾರ್, ಅಮರ ಶಿಲ್ಪಿ ವೇದಿಕೆ ಅಧ್ಯಕ್ಷ ಎಸ್.ನಾಗರಾಜು, ಗೌರವಾಧ್ಯಕ್ಷ ಪುಟ್ಟ ಸ್ವಾಮಾಚಾರ್ ಮತ್ತಿತರರು ಹಾಜರಿದ್ದರು.

Translate »