ಮಾ.14, 16ರಂದು ಮೆದುಳು ಕುರಿತು ಅಂತರರಾಷ್ಟ್ರೀಯ ಸಮ್ಮೇಳನ
ಮೈಸೂರು

ಮಾ.14, 16ರಂದು ಮೆದುಳು ಕುರಿತು ಅಂತರರಾಷ್ಟ್ರೀಯ ಸಮ್ಮೇಳನ

March 13, 2019

ಮೈಸೂರು: ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮತ್ತು ಸೊಸೈಟಿ ಫಾರ್ ನ್ಯೂರೋಕೆಮಿಸ್ಟ್ರಿ ಇಂಡಿಯಾ (ಎಸ್‍ಎನ್‍ಸಿಐ) ಜಂಟಿ ಆಶ್ರಯದಲ್ಲಿ ಮಾ.14 ಮತ್ತು 16ರಂದು ಆರೋಗ್ಯಕರ ಮಿದುಳಿಗೆ ಸಂಬಂಧಿಸಿ ದಂತೆ ಅಂತಾರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಜೆಎಸ್‍ಎಸ್ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಎಸ್‍ಎಸ್ ಔಷಧ ಮಹಾವಿದ್ಯಾಲಯದ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದ್ದು, ಇದರೊಂದಿಗೆ ಸೊಸೈಟಿ ಫಾರ್ ನ್ಯೂರೋ ಕೆಮಿಸ್ಟ್ರಿ ಇಂಡಿಯಾದ 32ನೇ ವಾರ್ಷಿಕ ಸಭೆಯೂ ನಡೆಯಲಿದೆ ಎಂದರು.

ಮಾ.14ರ ಬೆಳಿಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಬಿ.ಸುರೇಶ್ ಅತಿಥಿ ಗಳಾಗಿ ಪಾಲ್ಗೊಳ್ಳಲಿದ್ದಾರೆ. ಎಸ್‍ಎನ್‍ಸಿಐ ಅಧ್ಯಕ್ಷ ಪ್ರೊ.ಎಂ.ಕೆ.ಠಾಕೂರ್, ಹೈದರಾ ಬಾದ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ.ಪಿ.ಪ್ರಕಾಶ್‍ಬಾಬು, ಆಸ್ಟ್ರೇಲಿಯಾದ ಮ್ಯಾಕ್ವಾರಿ ವಿಶ್ವವಿದ್ಯಾನಿಲಯದ ನರ ವಿಜ್ಞಾನದ ಪ್ರಾಧ್ಯಾಪಕ ಪ್ರೊ.ಗಿಲೀಸ್ ಗಿಲೇಮಿನ್ ಸೇರಿದಂತೆ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಕೇರಳ, ಮಹಾರಾಷ್ಟ್ರ, ನವದೆಹಲಿ, ಹರಿಯಾಣ, ತೆಲಂಗಾಣ, ಆಂದ್ರಪ್ರದೇಶ, ವಾರಣಾಸಿ, ಹೈದರಾಬಾದ್, ಲಕ್ನೋ, ಚಂಡೀಗಢ, ತಮಿಳುನಾಡಿನಿಂದ ತಜ್ಞರು ಹಾಗೂ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಸಿ.ಶರವಣಬಾಬು, ಜೆಎಸ್‍ಎಸ್ ಔಷಧ ಮಹಾವಿದ್ಯಾ ಲಯದ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಸ್.ಎನ್.ಮಂಜುಳಾ, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಲ್.ಕೃಷ್ಣ ಗೋಷ್ಠಿಯಲ್ಲಿದ್ದರು.

Translate »