ಸಂಸದರಿಗೆ ಐಫೋನ್, ಬ್ಯಾಗ್ ಗಿಫ್ಟ್!
ಮೈಸೂರು

ಸಂಸದರಿಗೆ ಐಫೋನ್, ಬ್ಯಾಗ್ ಗಿಫ್ಟ್!

July 18, 2018

ಬೆಂಗಳೂರು:  ರೈತರ ಸಾಲ ಮನ್ನಾಗೆ ಹಣ ಹೊಂದಿಸಲು ಪರದಾಡು ತ್ತಿರುವ ಕರ್ನಾಟಕದ ಮೈತ್ರಿ ಸರ್ಕಾರ ರಾಜ್ಯದ ಸಂಸದರಿಗೆ ದುಬಾರಿ ಐಫೋನ್ ಮತ್ತು ಮೂಚಿ ಲೆದರ್ ಬ್ಯಾಗ್‍ನ್ನು ಉಡುಗೊರೆಯನ್ನಾಗಿ ನೀಡಿದೆ.

ಕಾವೇರಿ ಸಮಸ್ಯೆ ಕುರಿತು ಕರೆದಿರುವ ರಾಜ್ಯದ ಸಂಸದರ ಸಭೆಯ ಆಮಂತ್ರಣದ ಜೊತೆಗೆ ದುಬಾರಿ ಬೆಲೆಯ ಐಫೋನ್ ಹಾಗೂ ಲೆದರ್ ಬ್ಯಾಗ್‍ನ್ನು ನೀಡಲಾಗಿರುವುದು ರಾಜೀವ್ ಚಂದ್ರ ಶೇಖರ್ ಅವರ ಪತ್ರದ ಮೂಲಕ ಬಹಿರಂಗಗೊಂಡಿದೆ.

ಈ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಸಂಸದರಿಗೆ ಗಿಫ್ಟ್ ಕೊಟ್ಟಿದ್ದು ನಾನೇ. ಒಳ್ಳೆಯ ಹೃದಯ ಶ್ರೀಮಂತಿಕೆ ಯಿಂದ ವೈಯಕ್ತಿಕವಾಗಿ ಗಿಫ್ಟ್ ನೀಡಿದ್ದೇನೆ, ಆದರೆ ಕಾಮಾಲೆ ಕಣ್ಣಿಗೆ ಎಲ್ಲವೂ ಕೆಟ್ಟದಾಗಿಯೇ ಕಾಣುತ್ತದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಕಾವೇರಿ ಸಮಸ್ಯೆ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬುಧವಾರದಂದು ರಾಜ್ಯದ ಸಂಸದರ ಸಭೆ ಕರೆಯಲಾಗಿದೆ. ಆಮಂತ್ರಣದ ಜೊತೆಗೆ ಈ ದುಬಾರಿ ಗಿಫ್ಟ್‍ಗಳನ್ನೂ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಗಿಫ್ಟ್ ನೀಡಿರುವುದರ ಬಗ್ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದಿದ್ದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪೌರಕಾರ್ಮಿಕರಿಗೆ ವೇತನ ಸರಿಯಾಗಿ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಐಷಾರಾಮಿ ಗಿಫ್ಟ್ ನೀಡಲು ಸಾರ್ವಜನಿಕರ ಹಣ ಪೋಲು ಮಾಡುವುದು ಸರಿಯಲ್ಲ, ಗಿಫ್ಟ್‍ನ್ನು ವಾಪಸ್ ನೀಡುತ್ತೇನೆ ಎಂದು ಹೇಳಿದ್ದರು.

Translate »