ನೀರಾವರಿ ಪದ್ಧತಿ, ಅಣೆಕಟ್ಟೆಗಳ ಮಾಹಿತಿ ಸಂಬಂಧ ಸಿದ್ಧಗೊಳ್ಳುತ್ತಿದೆ ವಿಶೇಷ ಮಳಿಗೆ
ಮೈಸೂರು

ನೀರಾವರಿ ಪದ್ಧತಿ, ಅಣೆಕಟ್ಟೆಗಳ ಮಾಹಿತಿ ಸಂಬಂಧ ಸಿದ್ಧಗೊಳ್ಳುತ್ತಿದೆ ವಿಶೇಷ ಮಳಿಗೆ

October 30, 2018

ಮೈಸೂರು:  ಅರೆ ನೀರಾವರಿ ಪದ್ದತಿ ಹಾಗೂ ರಾಜ್ಯದಲ್ಲಿರುವ 18 ಅಣೆಕಟ್ಟುಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡುವ ಮಳಿಗೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧವಾಗುತ್ತಿದೆ.

ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ದಸರಾ ವಸ್ತುಪ್ರದರ್ಶನದಲ್ಲಿ ಕಾವೇರಿ ನೀರಾವರಿ ಅಭಿವೃದ್ಧಿ ನಿಗಮದ ವತಿಯಿಂದ ಅರೇ ನೀರಾವರಿ ಪದ್ಧತಿಯಿಂದ ಬೆಳೆಯುವ ಆಹಾರ ಪದಾರ್ಥಗಳು, ನೀರಿನ ಬಳಕೆಯ ಪ್ರಮಾಣ, ಸೋಲಾರ್ ಪಂಪ್ ಸೇಟ್, ನೀರಿನ ನಿರ್ವಹಣೆ ಹಾಗೂ ಕೆರೆಗಳಿಗೆ ನೀರು ತುಂಬಿ ಸುವಿಕೆ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಸುವ ಬೃಹತ್ ಮಳಿಗೆಯನ್ನು ನಿರ್ಮಿಸಲಾಗುತ್ತಿದೆ.

ಭತ್ತ, ಕಬ್ಬು ಬೆಳೆಯುವುದರಿಂದ ನೀರು ಹೆಚ್ಚು ವ್ಯರ್ಥವಾಗುತ್ತದೆ. ಅದಕ್ಕೆ ಪರ್ಯಾಯವಾಗಿ ಕಡಿಮೆ ನೀರಿನಿಂದ ಬೆಳೆಯುವ ರಾಗಿ, ಜೋಳ, ಸಿರಿಧ್ಯಾನಗಳು, ತರಕಾರಿ ಮತ್ತು ಹೂಗಳನ್ನು ಬೆಳೆಯುವಂತೆ ಉತ್ತೇಜನ ನೀಡುವುದು ಮುಖ್ಯ ಉದ್ದೇಶವಾಗಿದೆ.

90×60 ಅಡಿ ವಿಸ್ತೀರ್ಣ ಹಾಗೂ 36 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ವಾಗಿರುವ ಮಳಿಗೆಯನ್ನು ಕೆಆರ್‌ಎಸ್‌ ಅಣೆ ಕಟ್ಟಿನಂತೆ ವಿನ್ಯಾಸಗೊಳಿಸಲಾಗಿದೆ. ಮುಂಭಾಗ ದಲ್ಲಿ ಕಾವೇರಿಯ 13 ಅಡಿ ಪ್ರತಿಮೆ ಹಾಗೂ 14 ಗೇಟ್‍ಗಳಿಂದ ನೀರು ಹರಿಯುವಂತೆ ಮಾಡಲಾಗಿದೆ.

ಒಳ ಭಾಗದಲ್ಲಿ ಹೇಮಾವತಿ ಹಾಗೂ ಕೆಆರ್‌ಎಸ್‌ ಅಣೆಕಟ್ಟುಗಳ ಪ್ರತಿರೂಪ ನಿರ್ಮಿ ಸಿದ್ದು, ಕೆಆರ್‌ಎಸ್‌ ಅಣೆಕಟ್ಟಿನಿಂದ ನೀರು ವರುಣಾ ಮತ್ತು ವಿಶ್ವೇಶ್ವರಯ್ಯ ನಾಲೆಯಲ್ಲಿ ಹರಿ ಯುತ್ತಿರುವಂತೆ ತೋರಿಸಲಾಗಿದೆ. ಎರಡು ನಾಲೆಗಳನ್ನು ಪ್ರತ್ಯೇಕವಾಗಿ ವಿನ್ಯಾಸ ಮಾಡಿದ್ದು, ವರುಣಾ ನಾಲೆ ಪ್ರದೇಶದಲ್ಲಿ ಬೆಳೆಯುವ ರಾಗಿ, ಜೋಳ, ತರಕಾರಿ, ಹೂ ಗಿಡಗಳು, ಸಿರಿಧಾನ್ಯಗಳು ಹಾಗೂ ವಿಶ್ವೇಶ್ವರಯ್ಯ ನಾಲೆಯಲ್ಲಿ ಬೆಳೆಯುವ ಭತ್ತ, ಕಬ್ಬು ಮತ್ತು ಇತರೆ ಬೆಳೆಗಳ ಮಾದರಿಯನ್ನು ನಿರ್ಮಿಸಲಾಗಿದೆ.

ಸೋಲಾರ್ ಪಂಪ್‍ಸೆಟ್‍ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯ ಬಹುದಾಗಿದೆ. ಜತೆಗೆ ನೀರನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹರಿಸಲು ಕಾಲುವೆಗಳು, ಮೇಲುಗಾಲುವೆ ಮತ್ತು ಪೈಪ್‍ಗಾಲುವೆಯ ಬಳಕೆ ಹಾಗೂ ಮೋಟಾರ್‌ಗಳಿಂದ ಕೆರೆಗಳಿಗೆ ನೀರು ತುಂಬಿಸುವಿಕೆಯನ್ನು ತೋರಿಸಲಾಗಿದೆ. ಮಳಿಗೆಯ ಪ್ರವೇಶ ದ್ವಾರದಲ್ಲಿ ಕಬಿನಿ ಅಣೆಕಟ್ಟಿನ ಮಾದರಿಯನ್ನು ವರ್ಣರಂಜಿತವಾಗಿ ನಿರ್ಮಿಸಲಾಗಿದೆ.

Translate »