ಮೈಸೂರು, ಸೆ.26- ಮಹಿಷ ದಸರಾ ಆಚರಿಸು ವುದು ನಮ್ಮ ಹಕ್ಕು ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಧಾರ್ಮಿಕ ನಾಯಕರ ಆರಾಧಿ ಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವು ಸಂವಿಧಾನಾತ್ಮಕವಾಗಿ 7 ವರ್ಷ ದಿಂದ ಆಚರಿಸಿಕೊಂಡು ಬರುತ್ತಿ ದ್ದೇವೆ. ಆದರೆ ಈ ಬಾರಿ ಸಂಸದ ಪ್ರತಾಪ ಸಿಂಹ ಅವರು ವಿರೋಧಿಸಿದ್ದಾರೆ. ವಿರೋಧಿಸುವುದು ಅವರ ಹಕ್ಕು. ಹಾಗೆಯೇ ಮಹಿಷ ದಸರಾ ಆಚರಿಸುವುದು ನಮ್ಮ ಹಕ್ಕು. ಪೊಲೀಸರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮೌಖಿಕ ಅನುಮತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕ್ಕೆ ಪುರಭವನದಿಂದ ಆರೇಳು ಸಾವಿರ ಜನ ಮೆರವಣಿಗೆ ಮೂಲಕ ತೆರಳಿ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಬಿಗಿ ಭದ್ರತೆ: ಮಹಿಷ ದಸರಾ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯಿಂದಲೇ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ. ನಾಲ್ಕು ರಿಸರ್ವ್ ವಾಹನಗಳು ಸೇರಿದಂತೆ 100ಕ್ಕೂ ಹೆಚ್ಚು ಪೊಲೀ ಸರನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿಪಿ ಮುತ್ತುರಾಜ್, ನಮ್ಮ ಇಲಾಖೆ ಯಿಂದ ಅನುಮತಿ ನೀಡಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.