ಬೇಲೂರು ತಾಪಂ ಉಪಾಧ್ಯಕ್ಷರಾಗಿ ಜಮುನಾ ಆಯ್ಕೆ
ಹಾಸನ

ಬೇಲೂರು ತಾಪಂ ಉಪಾಧ್ಯಕ್ಷರಾಗಿ ಜಮುನಾ ಆಯ್ಕೆ

March 22, 2019

ಬೇಲೂರು: ಬೇಲೂರು ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ಅರೇಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದ ಜಮುನಾ ಅಣ್ಣಪ್ಪ ಆಯ್ಕೆಯಾದರು.

ಉಪಾಧ್ಯಕ್ಷರಾಗಿದ್ದ ಕಮಲಚಿಕ್ಕಣ್ಣ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಜಮುನಾ ಅಣ್ಣಪ್ಪ ಆಯ್ಕೆಯಾಗಿದ್ದಾರೆ.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸ ಲಾದ ಹಿನೆÀ್ನಲೆಯಲ್ಲಿ ಹೆಚ್ಚಿನ ಸದಸ್ಯರ ಬಲ ಹೊಂದಿರುವ ಜೆಡಿಎಸ್‍ನ ಒಳ ಒಪ್ಪಂದ ದಂತೆ ಮೊದಲ ಅವಧಿಗೆ ಕಮಲಮ್ಮ ದೊರೆ ಸ್ವಾಮಿ ಉಪಾಧ್ಯಕ್ಷರಾಗಿದ್ದು, ಎರಡನೇ ಅವಧಿಯಲ್ಲಿ ಕಮಲಾಚಿಕ್ಕಣ್ಣ ಕೂಡ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪಕ್ಷದ ಮಾತಿನಂತೆ ರಾಜೀನಾಮೆ ನೀಡಿದರು.

ಈ ಸಂಬಂಧ ನಡೆದ ಚುನಾವಣೆ ಯಲ್ಲಿ ಜಮುನಾ ಅಣ್ಣಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾವ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ಅವರನ್ನು ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ಅಧ್ಯಕ್ಷ ಜಿ.ಬಿ.ರಂಗೇಗೌಡ, ಸದಸ್ಯರಾದ ಬಾಣಸವಳ್ಳಿ ಅಶ್ವಥ್, ಹರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹೇಮಾವತಿ ಮಂಜುನಾಥ್, ಬೇಲೂರು ಎಪಿಎಂಸಿ ಮಾಜಿ ಅಧ್ಯಕ್ಷ ವಿಷ್ಣುಕುಮಾರ್ ಇನ್ನಿತ ರರು ನೂತನವಾಗಿ ಅಯ್ಕೆಯಾದ ಉಪಾ ಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾ ಯಿತಿ ಸದಸ್ಯರಾದ ಸುಮಾ ಪರಮೇಶ್, ಕಮಲಾಚಿಕ್ಕಣ್ಣ, ಈರಮ್ಮ, ಸುನೀತಾಪ್ರಭು, ಇಂದಿರಾ ರವಿಕುಮಾರ್, ಸೋಮಯ್ಯ, ಸಂಗೀತಾ, ಕಮಲಮ್ಮ ಹಾಜರಿದ್ದರು.

Translate »