ವಿಶ್ವ ಅರಣ್ಯ ದಿನಾಚರಣೆ
ಹಾಸನ

ವಿಶ್ವ ಅರಣ್ಯ ದಿನಾಚರಣೆ

March 22, 2019

ಅರಸೀಕೆರೆ: ನಗರದವ ತಾಲೂಕು ಕಚೇರಿ ಆವರಣದಲ್ಲಿ ವಲಯ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಅರಣ್ಯ ದಿನ ಆಚರಿಸಲಾಯಿತು.

ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಮಾತನಾಡಿ, ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಉತ್ತಮ ಪರಿಸರ ಹಾಗೂ ಮಳೆಗಾಗಿ ನಾವು ಗಿಡ ಮರಗಳನ್ನು ಹೆಚ್ಚು ಬೆಳೆಸಬೇಕು. ಶಾಲಾ ಮಕ್ಕಳಿಗೆ ಈ ಕುರಿತು ಪಠ್ಯಕ್ರಮದಲ್ಲಿ ಹೆಚ್ಚಿನ ಒತ್ತು ನೀಡಿ ಅರಿವು ಮೂಡಿಸ ಬೇಕು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದರೆ ಪ್ರಕೃತ್ತಿಯು ತನ್ಮೂಲಕ ಭಾರೀ ನಷ್ಟವನ್ನು ಮನುಕುಲಕ್ಕೆ ಮತ್ತು ಸಕಲ ಜೀವ ಜಲಚರಗಳಿಗೆ ನೀಡುತ್ತದೆ ಎಂಬುದನ್ನು ಮರೆಯಬಾರದು ಎಂದರು. ಮನುಷ್ಯ ಮಾಡಿದ ತಪ್ಪಿನಿಂದಾಗಿ ಇಂದು ಪ್ರಕೃತಿ ನಾಶವಾಗಿ ಪ್ರಾಣಿ ಪಕ್ಷಿಗಳು ಸೂಕ್ತ ಪರಿಸರ ಇಲ್ಲದೇ ಪರಿತಪಿಸುವಂತೆ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್‍ಕುಮಾರ್, ತಾಪಂ ಇಓ ಕೃಷ್ಣಮೂರ್ತಿ, ನಗರಸಭೆ ಆಯುಕ್ತ ಪರಮೇಶ್, ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Translate »