ಸೋಮನಾಥಪುರ ಜಿ.ಪಂ ಕ್ಷೇತ್ರ ಜಾ.ದಳ ಭದ್ರಕೋಟೆ
ಮೈಸೂರು

ಸೋಮನಾಥಪುರ ಜಿ.ಪಂ ಕ್ಷೇತ್ರ ಜಾ.ದಳ ಭದ್ರಕೋಟೆ

October 24, 2018

ತಿ.ನರಸೀಪುರ:  ಸೋಮನಾಥಪುರ ಜಿ.ಪಂ ಕ್ಷೇತ್ರ ಜಾತ್ಯಾತೀತ ಜನತಾದಳದ ಭದ್ರಕೋಟೆ. ಎಲ್ಲಾ ವರ್ಗದ ಜನರ ಬೆಂಬಲದಿಂದ ಉಪ ಚುನಾವಣೆ ಯಲ್ಲಿ ಗೆಲ್ಲುವ ಸಂಪೂರ್ಣ ನಂಬಿಕೆಯಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ವಿ. ಜಯಪಾಲ್ ಭರಣಿ ಹೇಳಿದರು.

ಜಿ.ಪಂ ಉಪ ಚುನಾವಣೆಯ ಹಿನ್ನೆಲೆ ಯಲ್ಲಿ ತಾಲೂಕಿನ ಸೋಮನಾಥಪುರ ಗ್ರಾಮ ದಲ್ಲಿ ಮಂಗಳವಾರ ಸಂಜೆ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಜಿ.ಪಂ ಸದಸ್ಯರಾಗಿ ಆಯ್ಕೆಗೊಂಡ ನಂತರ ಗ್ರಾಮೀಣ ಪ್ರದೇಶ ಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಸ್ವಚ್ಛತೆಗೆ ಆದ್ಯತೆ ಕೊಟ್ಟು ಸಮರ್ಪಕವಾಗಿ ಕುಡಿ ಯುವ ನೀರಿನ ಸೌಲಭ್ಯವನ್ನು ಕಲ್ಪಿಸುವ ಮೂಲಕ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.

ಕ್ಷೇತ್ರದಾದ್ಯಂತ ಸಂಚರಿಸಿ ಎಲ್ಲಾ ಜನರ ಮತವನ್ನು ಕೇಳುತ್ತಿದ್ದೇನೆ. ಚುನಾವಣೆ ಪ್ರಚಾರದಲ್ಲಿ ಶಾಸಕ ಎಂ.ಅಶ್ವಿನ್‍ಕುಮಾರ್ ಕೂಡ ಭಾಗಿಯಾಗಿದ್ದಾರೆ. ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದೆಯಾದರೂ ನಾನು ಸೋಮನಾಥಪುರ ಗ್ರಾಮದ ನಿವಾಸಿ ಯಾಗಿದ್ದೇನೆ. ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿದ್ದುಕೊಂಡು ಜಿ.ಪಂ ಮಾಜಿ ಸದಸ್ಯ ಎಸ್.ಆರ್.ವರದರಾಜು ಅವರ ಮಾರ್ಗ ದರ್ಶನದಲ್ಲಿ ಪಕ್ಷದ ಸಂಘಟನೆಗೆ ದುಡಿಯು ತ್ತೇನೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಜೆಡಿಎಸ್ ಬೆಂಬಲಿಸಬೇಕೆಂದು ಎಸ್.ವಿ. ಜಯಪಾಲ್ ಭರಣಿ ಮನವಿ ಮಾಡಿದರು.

ಗ್ರಾ.ಪಂ. ಅಧ್ಯಕ್ಷ ಮಂಜೇಶ್‍ಗೌಡ, ಚಂಡಿ ಮಾದಪ್ಪ, ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಸದಸ್ಯ ಸುರೇಶ್ ಮುಖಂಡರಾದ ಎಸ್. ರಾಮಾನುಜ, ಶಿವಮಲ್ಲು, ರಂಗಸ್ವಾಮಿ, ಚೌಡಯ್ಯ, ಕಾಂತರಾಜು ಹಾಗೂ ಇನ್ನಿತರರು ಹಾಜರಿದ್ದರು.