ನಂಜನಗೂಡಿನಲ್ಲಿಂದು ಅದ್ಧೂರಿ ವಾಲ್ಮೀಕಿ ಜಯಂತಿ
ಮೈಸೂರು

ನಂಜನಗೂಡಿನಲ್ಲಿಂದು ಅದ್ಧೂರಿ ವಾಲ್ಮೀಕಿ ಜಯಂತಿ

October 24, 2018

ನಂಜನಗೂಡು: ತಾಲೂಕು ನಾಯಕರ ಸಂಘ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಾಳೆ(ಅ.24) ಬುಧವಾರ ನಗರದಲ್ಲಿ ಅದ್ಧೂರಿ ಮತ್ತು ವೈಶಿಷ್ಟ್ಯ ಪೂರ್ಣವಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ಸರ್ವ ಸಿದ್ದತೆಗಳಾಗಿವೆ ಎಂದು ತಾಲೂಕು ನಾಯಕರ ಸಂಘದ ಗೌರವಾಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಸಿ.ಚಿಕ್ಕರಂಗ ನಾಯಕ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡುತ್ತಾ, ಬೆಳಿಗ್ಗೆ 9 ಗಂಟೆಗೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಿಂದ ಶ್ರೀಕಂಠೇಶ್ವರಸ್ವಾಮಿ ದೇಗುಲದವರೆಗೂ ಮೆರವಣಿಗೆ ನಡೆ ಯಲಿದೆ. ನಂತರ ಪಕ್ಕದ ಕಲಾಮಂದಿರ ದಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಚಿವ ಜಿ.ಟಿ.ದೇವೇಗೌಡ, ಸಂಸದ ಧ್ರುವ ನಾರಾಯಣ್, ಶಾಸಕರಾದ ಬಿ.ಹರ್ಷ ವರ್ಧನ್, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿ ಸಲಿದ್ದಾರೆ ಎಂದರು.

ಜನಾಂಗದ ಮುಖಂಡ ಸುಬ್ಬಣ್ಣ ಮಾತನಾಡಿ, ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಸಮುದಾಯದ ಮುಖಂಡರು ಹಾಗೂ ಯಜಮಾನರು ತೀಮಾನಿಸಿದ್ದಾರೆ. ಜಾನ ಪದ ಕಲಾ ತಂಡಗಳೊಡನೆ ಮೆರವಣಿಗೆ ನಡೆಯಲಿದೆ. 4000 ಮಂದಿ ಭಾಗವಹಿಸಲಿದ್ದು, ಗೌರಿಘಟ್ಟ ಬೀದಿಯಲ್ಲಿ ರುವ ನಾಯಕರ ಭವನ ಮತ್ತು ದೇಗುಲದ ದಾಸೋಹ ಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು. ಸಂಘದ ಅಧ್ಯಕ್ಷ ಹೆಚ್.ಆರ್.ಬಂಗಾರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಜೆ.ನಾಗೇಂದ್ರ, ಖಜಾಂಚಿ ರಂಗಸ್ವಾಮಿ, ಹೆಡತಲೆ ದೊರೆ ಸ್ವಾಮಿ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.

Translate »