ದಲಿತರು ಯಾರಿಗೆ ಮತ ಹಾಕಬೇಕೆಂದು ಹೇಳಲ್ಲ,ಬಿಜೆಪಿಗೆ ಯಾಕೆ ಹಾಕಬಾರದೆಂದು ಹೇಳುತ್ತೇನೆ…
ಮೈಸೂರು

ದಲಿತರು ಯಾರಿಗೆ ಮತ ಹಾಕಬೇಕೆಂದು ಹೇಳಲ್ಲ,ಬಿಜೆಪಿಗೆ ಯಾಕೆ ಹಾಕಬಾರದೆಂದು ಹೇಳುತ್ತೇನೆ…

May 3, 2018

ಮೈಸೂರು: ದಲಿತ ಸಮುದಾಯ ದವರು ಯಾರಿಗೆ ಮತ ಹಾಕ ಬೇಕೆಂದು ಹೇಳುವು ದಿಲ್ಲ. ಆದರೆ ಬಿಜೆಪಿಗೆ ಏಕೆ ಮತ ಹಾಕ ಬಾರದು ಎಂದು ಜಾಗೃತಿ ಮೂಡಿಸುತ್ತೇನೆ ಎಂದು ಗುಜರಾತ್‍ನ ಶಾಸಕ ಜಿಗ್ನೇಶ್ ಮೇವಾನಿ ತಿಳಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅಭಿಯಾನ ನಡೆಸುತ್ತೇವೆ. ನಮ್ಮ ಅಭಿಯಾನ ಬಿಜೆಪಿ ವಿರುದ್ಧವೇ ಇರಲಿದೆ. ಚುನಾವಣೆಯಲ್ಲಿ ದಲಿತರು ಇಂತಹವರಿಗೇ ಮತಹಾಕ ಬೇಕೆಂದು ಹೇಳುವುದಿಲ್ಲ. ಆದರೆ ಬಿಜೆಪಿಗೆ ಏಕೆ ಮತ ಹಾಕಬಾರದು ಎಂದು ಹೇಳಿ ಜಾಗೃತಿ ಮೂಡಿಸುತ್ತೇನೆ. ಮುಂದಿನ 2019ರ ಲೋಕಸಭಾ ಚುನಾವಣೆಯಲ್ಲೂ `ಇಂಡಿಯಾ ವರ್ಸಸ್ ಬಿಜೆಪಿ’ ನಮ್ಮ ಅಜೆಂಡಾ ಆಗಿರಲಿದೆ ಎಂದು ತಿಳಿಸಿದರು.

ಮೋದಿಗೆ ಸವಾಲ್: ಕರ್ನಾಟಕದ ಬಗ್ಗೆ 15 ನಿಮಿಷ ಮಾತನಾಡಲಿ ಎಂದು ಪ್ರಧಾನಿ ಮೋದಿ ಅವರು ಸವಾಲು ಹಾಕಿರುವ ಸಂಬಂಧ ಮಾತನಾಡಿದ ಜಿಗ್ನೇಶ್, ಮೋದಿ ಅವರು ತಮ್ಮ 4 ವರ್ಷದ ಆಡಳಿತ ಬಗ್ಗೆ ಕೇವಲ ನಾಲ್ಕು ನಿಮಿಷ ಮಾತನಾಡಲಿ. ಬಹಿರಂಗ ಚರ್ಚೆಗೆ ನಾವು ಸಿದ್ದರಿದ್ದೇವೆ ಎಂದು ಸವಾಲೆಸೆದರು. ದೇಶದ ಅಭಿವೃದ್ಧಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನೀಡಿರುವುದು ಶೂನ್ಯ ಕೊಡುಗೆ. ಅಚ್ಛೇ ದಿನ್ ಬರಲಿದೆ ಎಂಬುದು ಮೋದಿ ಅವರ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಅವರ ಬಾಯಲ್ಲಿ ಮಾತ್ರ ಡಾ.ಅಂಬೇಡ್ಕರ್ ಅವರಿದ್ದಾರೆ ಹೊರತು, ಅವರ ಮನಸ್ಸಿನಲ್ಲಿ ಇಲ್ಲ. ಅವರ ಹೃದಯ ದಲ್ಲಿರುವುದು ಮನುವಾದ. ಅಂಬೇಡ್ಕರ್ ಜಯಂತಿ ಮಾಡುವುದಷ್ಟೇ ದೊಡ್ಡತನವಲ್ಲ. ಜೊತೆಗೆ ದಲಿತರು, ಶೋಷಿತರನ್ನು ರಕ್ಷಿ ಸಲು ಮುಂದಾಗಬೇಕು. ಗುಜರಾತ್‍ನಲ್ಲಿ ಸಂಘ ಪರಿವಾರದವರಿಂದ ಕೋಮುವಾದ ಹೆಚ್ಚಾಗಿದೆ. ಮಾತ್ರವಲ್ಲ ಇಡೀ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಕುತ್ತು ತರುವ ರೀತಿ ಯಲ್ಲಿ ವರ್ತಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಮ್ಮಂತೆ ಎಲ್ಲರೂ ಬಿಜೆಪಿ ಹಾಗೂ ಸಂಘ ಪರಿವಾರದ ಅಪಾಯದ ನಡೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ಅವರು ಹೇಳಿದರು.

ಸ್ಪಷ್ಟ ನಿರ್ಧಾರ ಪ್ರಕಟಿಸಿ: ಇತ್ತಿಚೆಗೆ ಪ್ರಧಾನಿ ಮೋದಿ ಅವರು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರನ್ನು ಹೊಗಳಿ ದ್ದಾರೆ. ದೇವೇಗೌಡರು ಸಹ ಮೋದಿಯವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ಸಂದರ್ಭ ದಲ್ಲಿ ಜೆಡಿಎಸ್ ನಾಯಕರು ಬಿಜೆಪಿಯ ಬಗ್ಗೆ ಮೃಧುತ್ವ ಧೋರಣೆ ಅನುಸರಿಸುತ್ತಿ ದ್ದಾರೆ. ಆದರೆ ಜೆಡಿಎಸ್, ಬಿಜೆಪಿಯನ್ನು ಬೆಂಬಲಿಸುವ ಬಗ್ಗೆ ದೇವೇಗೌಡರು ಸ್ಪಷ್ಟ ನಿರ್ಧಾರವನ್ನು ಜನತೆಯ ಮುಂದೆ ಪ್ರಕಟಿಸ ಬೇಕು ಎಂದು ಹೇಳಿದ ಜಿಗ್ನೇಶ್, ಕೆ.ಎಸ್. ಪುಟ್ಟಣ್ಣಯ್ಯ ಅವರು ಸಮಾಜದ ಬಗ್ಗೆ ನಿಜ ವಾದ ಕಾಳಜಿಯುಳ್ಳ ಮಣ ್ಣನ ಮಗನಾಗಿ ದ್ದರು. ಅವರು ಈಗ ನಮ್ಮ ನಡುವೆ ಇಲ್ಲ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಪುಟ್ಟ ಣ್ಣಯ್ಯ ಅವರ ಪುತ್ರ ದರ್ಶನ್ ಅವರನ್ನು ಬೆಂಬಲಿಸುವ ಮೂಲಕ ಕೃಷಿಕರಿಗೆ ಬೆಲೆ ನೀಡಬೇಕು. ವಿಧಾನಸೌಧದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಶಾಸಕನಾಗಿ ನೋಡುವ ಆಸೆ ತಮ್ಮದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. `ಸಂವಿ ಧಾನದ ಉಳಿವಿಗಾಗಿ ಕರ್ನಾಟಕ’ ಅಭಿ ಯಾನದ ರಾಜಕೀಯ ಕ್ರಿಯಾ ಸಮಿತಿ ಸಮ ನ್ವಯಕಾರರಾದ ನೂರ್ ಶ್ರೀಧರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿ ಅವರ ಅಧ್ಯಕ್ಷತೆ, ಎ.ಕೆ.ಸುಬ್ಬಯ್ಯ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಅಭಿಯಾನದಡಿ, 17 ಸಮಾವೇಶಗಳನ್ನು ನಡೆಸ ಲಾಗಿದೆ. ಮೇ8ರಂದು ಮೈಸೂರಿನಲ್ಲಿ ಸಮಾ ರೋಪಗೊಳ್ಳಲಿದೆ ಎಂದರು. ರೈತ ಸಂಘದ ಹೊಸಕೋಟೆ ಬಸವರಾಜು, ಗೋಪಾಲ ಕೃಷ್ಣ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »