ಡಿ.21ರಂದು ಉದ್ಯೋಗ ಮೇಳ: 2 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ: ಡಿಸಿ
ಮಂಡ್ಯ

ಡಿ.21ರಂದು ಉದ್ಯೋಗ ಮೇಳ: 2 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಗುರಿ: ಡಿಸಿ

December 18, 2019

ಮಂಡ್ಯ, ಡಿ.17- ಈ ಹಿಂದೆ ನಡೆದ 2 ಉದ್ಯೋಗ ಮೇಳ ಗಳು ಯಶಸ್ವಿಯಾಗಿ ನಡೆಯುವ ಮೂಲಕ 700 ಕುಟುಂಬ ಗಳಿಗೆ ದಾರಿ ದೀಪವಾಗಿದೆ. ಅದರಂತೆ ಈ ಬಾರಿ ಆಯೋ ಜಿಸಿರುವ ಉದ್ಯೋಗ ಮೇಳದಲ್ಲಿ ಕನಿಷ್ಠ 2 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ನಗರಸಭೆ ಮಂಡ್ಯ ಇವರ ವತಿಯಿಂದ ಡಿ.21 ರಂದು ನಗರದ ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಮಂಡ್ಯ ಇಲ್ಲಿ ಉದ್ಯೋಗ ಮೇಳ ಆಯೋಜಿಸಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಂಡ್ಯ, ಮೈಸೂರು, ಬಿಡದಿ, ರಾಮನಗರ, ಹಾಸನ, ಶ್ರೀರಂಗಪಟ್ಟಣ ಮತ್ತು ಬೆಂಗಳೂರು ಸೇರಿದಂತೆ ಇನ್ನಿತರ ಪ್ರದೇಶಗಳಿಂದ ಹೆಚ್ಚು ಕಂಪನಿಗಳನ್ನು ಕರೆತರುವ ಮೂಲಕ ಯುವಕರು, ನಿರುದ್ಯೋಗಿಗಳು, ಮಹಿಳೆಯರು ಮತ್ತು ಅಂಗವಿಕಲರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಒಂದು ವೇದಿಕೆ ನಿರ್ಮಿಸೋಣ ಎಂದು ಜಿಲ್ಲಾ ಮಟ್ಟದ ಅಧಿಕಾರಿ ಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಉದ್ಯೋಗ ವಿನಿ ಮಯ ಕಚೇರಿಯ ಉದ್ಯೋಗಾ ಧಿ ಕಾರಿ ಕೆ.ಶಿವಮೂರ್ತಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಉದ್ಯೋಗ ಮೇಳದಲ್ಲಿ ಜೆ.ಕೆ. ಟೈರ್ಸ್, ರಾಣಿ ಮದ್ರಾಸ್, ಗಿಲ್ ವುಡ್, ಗೋಕುಲ್‍ದಾಸ್, ಶಾಹಿ ಗ್ರೂಪ್ಸ್, ಅಕ್ವೇರಲ್ ಪ್ರೈ.ಲಿ, ಗಿರೀಶ್ ಎಕ್ಸ್‍ಪೋರ್ಟ್, ಚೋಳ ಪೀಪಲ್ ಅಂಡ್ ಮಾರ್ಕೆ ಟಿಂಗ್ ಸರ್ವಿಸಸ್, ಇಕ್ವಿಟಾಸ್ ಸ್ಮಾಲ್ ಫೈನಾನ್ಸ್, ಹೆಚ್‍ಡಿಬಿ ಫೈನಾನ್ಸ್, ಲೈಟ್ನಿಂಗ್, ವಿಧಾತ್ರ್ರಿ ಮೋಟರ್ಸ್ ಅರಸ್ ಟಾಟಾ ಮೋಟರ್ಸ್, ಅಪೋಲೋ ಹೋಮ್ ಹೆಲ್ತ್‍ಕೇರ್ ಲಿ., ಉಬರ್, ವುಡ್‍ಲ್ಯಾಂಡ್, ಹಿಂದುಜಾ ಗ್ಲೋಬಲ್ ಸಲ್ಯೂಷನ್ಸ್, ಟ್ರುವಿಷನ್, ದಿಶಾ ಮೆನೆಜ್‍ಮೆಂಟ್, ರುಡ್ ರೆಡ್, ಹೆಚ್‍ಡಿಎಫ್‍ಸಿ, ಜಸ್ಟ್ ಡಯಲ್, ಎಮ್ಸ್, ಎಸ್ ಬಿಐ ಲೈಪ್ ಇನ್‍ಶೂರೆನ್ಸ್, ಜಿ4ಎಸ್, ಯುರೇಖಾ ಫೋಬ್ಸ್, ನವಭಾರತ್ ಫರ್ಟಿಲೈಸರ್ಸ್, ಫ್ರೆಂಡ್ಲಿ ಮೋಟಾರ್ಸ್, ಬಿಎಸ್‍ಎಲ್, ಪಿಎಂಕೆಕೆ, ಜೆಟ್‍ಕಿಂಗ್(ರಾಜಾಜಿನಗರ), ಕುಂಬಿ ಟೆಕ್ನಾಲಜಿ, ಹೆಚ್‍ಜಿಎಸ್, ಸಮರ್ಥನಂ (ವಿಕಲಚೇತನರಿಗಾಗಿ)ಶಬರಿಗ್ರೂಪ್ಸ್, ಸುರಭಿ ಪ್ಲಾನೆಟೆಕ್ಸ್, ಅರಸ್ ಕಾರ್ಸ್ ಸರ್ವೀಸ್ ಸೆಂಟರ್ ಪ್ರೈ ಯಂಗ್ ಇಂಡಿಯಾ ಪ್ರೈ.ಲಿ ಮೈಸೂರು ಲಿ.,ಬಿ.ಬಿ.ಮೋಟರ್ಸ್, ಸಿಪೆಟ್, ಸಾತಿಯ, ಯಂಗ್ ಇಂಡಿಯ, ಬಿ.ಬಿ ಮೋಟರ್ಸ್, ಸಿಪೆಟ್, ಸಾತಿಯ ಹಾಗೂ ಇನ್ನಿತರ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದೆ.

ಕಂಪನಿಯವರು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೊಳ್ಳಲಿದ್ದಾರೆ. ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ಪ್ರಮಾಣ ಪತ್ರಗಳು, ಸ್ವ ವಿವರ ಪತ್ರ, 2 ಭಾವಚಿತ್ರ ಹಾಗೂ ವಿದ್ಯಾರ್ಹತೆ ಪ್ರಮಾಣ ಪತ್ರಗಳ ಜೆರಾಕ್ಸ್ ಮತ್ತು ಆಧಾರ್ ಕಾರ್ಡ್ ಪ್ರತಿ ಜೊತೆಗೆ ಭಾಗವಹಿಸಬಹು ದಾಗಿದೆ. ಕನಿಷ್ಠ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ, ಬಿಎಸ್ಸಿ (ನರ್ಸಿಂಗ್), ಬಿಇ ಮತ್ತು ಚಾಲಕರ ಹುದ್ದೆಗಳಿಗೆ  ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಮಾಹಿತಿಗೆ ದೂ: 08232-220126, 9986263695 ಅನ್ನು ಸಂಪರ್ಕಿಸಿ.

Translate »