ಯಳಂದೂರಿನಲ್ಲಿ ಪತ್ರಕರ್ತರ ಸಂಘ ಅಸ್ಥಿತ್ವಕ್ಕೆ
ಚಾಮರಾಜನಗರ

ಯಳಂದೂರಿನಲ್ಲಿ ಪತ್ರಕರ್ತರ ಸಂಘ ಅಸ್ಥಿತ್ವಕ್ಕೆ

October 3, 2018

ಯಳಂದೂರು: ಯಳಂದೂರು ತಾಲೂಕು ನೂತನ ಸಂಘವನ್ನು ಜಿಲ್ಲಾಧ್ಯಕ್ಷ ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಹಾಗೂ ನಿಕಟಪೂರ್ವ ಅಧ್ಯಕ್ಷ ಎಸ್.ಎಂ.ನಂದೀಶ್ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪಟ್ಟಣ ಪ್ರವಾಸಿ ಮಂದಿರಲ್ಲಿ ನಡೆದ ಸಭೆÀಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಪಿ.ಶಂಕರ್, ಉಪಾಧ್ಯಕ್ಷರಾಗಿ ಪರ್ತಕರ್ತ ಅಂಬಳೆ ವೀರಭದ್ರ ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ಗೂಳಿಪುರ ನಂದೀಶ್, ಖಜಾಂಚಿಯಾಗಿ ಯರಿಯೂರು ನಾಗೇಂದ್ರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತುಸ.

ಸಂಘದ ಪದಾಧಿಕಾರಿಗಳಾಗಿ ಪರ್ತಕರ್ತರಾದ ಪೈರೋಜ್‍ಖಾನ್, ಡಿ.ಪಿ.ಮಹೇಶ್. ಇರ್ಫಾನ್‍ಸೈಯದ್, ವಿ.ನಾಗರಾಜು. ವೈ.ಎಂ.ಭಾನುಪ್ರಕಾಶ್, ವೈ.ಕೆ.ಮೋಳೆ ನಾಗರಾಜು, ಗೋವಿಂದರಾಜು, ಗುಂಬಳ್ಳಿ ಲೋಕೇಶ್ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಿ.ಪಿ.ಶಂಕರ್ ಮಾತನಾಡಿ, ತುಂಬಾ ವರ್ಷಗಳಿಂದ ತಾಲೂಕು ಸಂಘ ರಚನೆಯಾಗದೆ ವಿಳಂಬವಾಗಿತ್ತು. ಆದರೆ ಗಾಂಧಿ ಜಯಂತಿ ದಿನವೇ ಸಂಘದ ರಚನೆ ಮಾಡುತ್ತಿರುವುದು ಸಂತಸ. ಸಂಘದ ಅಭಿವೃದ್ದಿಗೆ ಸರ್ವ ಸದಸ್ಯರ ಸಹಕಾರದಿಂದ ಶ್ರಮಿಸು ವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಜಿಲ್ಲಾ ಸಂಘ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

Translate »