ಅರ್ಥಪೂರ್ಣವಾಗಿ ನಡೆದ ಗಾಂಧೀ ಜಯಂತಿ
ಚಾಮರಾಜನಗರ

ಅರ್ಥಪೂರ್ಣವಾಗಿ ನಡೆದ ಗಾಂಧೀ ಜಯಂತಿ

October 3, 2018

ಚಾಮರಾಜನಗರ: ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪಿತ ಗಾಂಧೀ ಜಿಯವರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಮೊದಲಿಗೆ ಸಭಾಂಗಣದ ಮುಖ್ಯದ್ವಾರದ ಬಳಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಲಾಗಿ ರುವ ಗಾಂಧಿಜೀಯವರ ಜೀವನದ ಸಂಪೂರ್ಣ ಚಿತ್ರಣ ಪ್ರತಿಬಿಂಬಿಸುವ ಅಪ ರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಹಿಂದು ಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು.

ಬಳಿಕ ಛಾಯಾಚಿತ್ರ ಪ್ರದರ್ಶನವನ್ನು ವಿಕ್ಷೀಸಿದ ಉಸ್ತುವಾರಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ತದನಂತರ ಜೆ.ಎಚ್. ಪಟೇಲ್ ಸಭಾಂಗಣದ ಒಳ ಅವರಣ ದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಇದೇ ವೇಳೆ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧಿ ವಿಶೇಷಾಂಕ ವಾಗಿ ಹೊರತಂದಿರುವ ಮಾಸಿಕ ಜನಪದ, ಮಾರ್ಚ್ ಆಫ್ ಕರ್ನಾಟಕ ಸಂಚಿಕೆಗ ಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡು ಗಡೆ ಮಾಡಿದರು. ಪಾಪು ಗಾಂಧಿ, ಗಾಂಧಿ ಬಾಪು ಕಿರುಪುಸ್ತಕವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ ಬಿಡು ಗಡೆ ಮಾಡಿದರು. ಸಮಾರಂಭದ ವೇದಿ ಕೆಯ ಹಿಂಭಾಗಕ್ಕೆ ಅಳವಡಿಸಲಾಗಿದ್ದ ಬೃಹತ್ ಎಲ್.ಇ.ಡಿ. ಪರದೆಯ ಮೂಲಕ ಗಾಂಧಿಜೀಯವರ ಅಪರೂಪದ ಛಾಯಾಚಿತ್ರ ಗಳನ್ನು ವಿಕ್ಷೀಸುವ ಅವಕಾಶವನ್ನು ಕಲ್ಪಿಸ ಲಾಗಿತ್ತು. ಇದೇ ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶಿಸಿದ ಗಾಂಧಿಜೀಯವರ ಜೀವನ ಕುರಿತ ಕಿರುಚಿತ್ರ ಪ್ರದರ್ಶನವನ್ನು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು, ಸಭಿ ಕರು ವೀಕ್ಷಿಸಿ ಪ್ರಶಂಸಿಸಿದರು.

ಸರ್ವಧರ್ಮ ಗುರುಗಳಿಂದ ಸರ್ವಧರ್ಮ ಪ್ರಾರ್ಥನೆ ಸಹ ನಡೆಯಿತು. ಚನ್ನಬಸವ ಸ್ವಾಮೀಜೀ, ಮಹಮದ್ ಜಿಯಾ ಉಲ್ಲಾ, ಫಾದರ್ ಪುಟ್ಟಸ್ವಾಮಿ, ಭೋದಿದತ್ತ ಬಂತೇಜೀ, ಭುವನಕೀರ್ತಿ ಭಟ್ಟಾರಕ ಸ್ವಾಮಿಜೀಯವ ರಿಂದ ಸರ್ವಧರ್ಮಗಳ ಪ್ರಾರ್ಥನೆ ನೆರವೇರಿತು.

ಗಾಂಧಿಜೀಯವರ ಜೀವನ, ಆದರ್ಶ, ತತ್ವ ವಿಚಾರಧಾರೆಗಳನ್ನು ಪಾಲನೆ ಮಾಡ ಬೇಕು. ಗಾಂಧಿಯವರು ಬೋಧಿಸಿದ ಶಾಂತಿ, ಅಹಿಂಸೆ, ಸಾಮರಸ್ಯ ಗುಣಗಳನ್ನು ಮೈಗೂ ಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂಬ ಆಶಯವನ್ನು ಗಣ್ಯರು ವ್ಯಕ್ತಪಡಿಸಿದರು. ಕಾರ್ಯಕ್ರಮದ ಆರಂಭ ದಲ್ಲಿ ಗಾಂಧಿಜೀಯವರಿಗೆ ಪ್ರಿಯವಾದ ಭಜನ್‍ಗಳನ್ನು ಮೈಸೂರಿನ ಹಂಸವಿ ಮತ್ತು ತಂಡದವರು ಪ್ರಸ್ತುತಪಡಿಸಿದರು. ಶಾಲಾ ಮಕ್ಕಳು, ಚಿಣ್ಣರು ಗಾಂಧಿಜೀಯವರ ವೇಷಭೂಷಣಧಾರಿಗಳಾಗಿ ಕಾರ್ಯ ಕ್ರಮದ ವೇದಿಕೆಯನ್ನು ಅಲಂಕರಿಸಿ ಗಮನ ಸೆಳೆದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ವಾರ್ತಾ ಹಾಗೂ ಸಾರ್ವ ಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್, ತಹಶೀಲ್ದಾರ್ ಕೆ. ಪುರಂದರ್ ಇತರರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

Translate »