ಜನ್ನೂರು ಡೈರಿ ನೂತನ ಕಟ್ಟಡ ಉದ್ಘಾಟನೆ
ಚಾಮರಾಜನಗರ

ಜನ್ನೂರು ಡೈರಿ ನೂತನ ಕಟ್ಟಡ ಉದ್ಘಾಟನೆ

October 3, 2018

ಚಾಮರಾಜನಗರ:  ತಾಲೂಕಿನ ಜನ್ನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆಯನ್ನು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆ.ಆರ್.ಬಸವರಾಜು ಮತ್ತು ರವಿಶಂಕರ್ ನೆರವೇರಿಸಿದರು.

ನಂತರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಎಂ.ಮಾಧು ರಾವ್ ಮಾತನಾಡಿ, ಸಂಘದ ಕಟ್ಟಡವನ್ನು ಎಂಟು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇವೆ. ಈ ಸಾಲಿನಲ್ಲಿ ನಮ್ಮ ಸಂಘವು 90 ಸಾವಿರಕ್ಕೂ ಹೆಚ್ಚು ರೂ. ಲಾಭ ಗಳಿಸಿದೆ. ರೈತರು ಒಳ್ಳೆಯ ಹಾಲನ್ನು ಸಂಘಕ್ಕೆ ಸರಬರಾಜು ಮಾಡಿ ಲಾಭ ಗಳಿಸಬೇಕು ಎಂದು ಮನವಿ ಮಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಯೋಜನಾಧಿಕಾರಿ ಸಿ.ರವಿಕುಮಾರ್, ವ್ಯವಸ್ಥಾಪಕ ಜಿ.ಪ್ರಭು, ಕೆ.ಸಿದ್ದಯ್ಯ, ಸುರೇಶ್, ಉಪಾಧ್ಯಕ್ಷ ಎಂ.ರಾಜಣ್ಣ, ಜಿ.ಕೆ.ರವಿ, ಮಲ್ಲಯ್ಯ, ಶಿವಣ್ಣ, ಪುಟ್ಟಸ್ವಾಮಿ, ಕುಳ್ಳಪ್ಪ, ಆರ್.ಮಲ್ಲಯ್ಯ, ಮಾದೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೊಡ್ಡ ಲಿಂಗಪ್ಪ, ದೇಮಹಳ್ಳಿ ಎಸ್.ಶಿವನಾಗಪ್ಪ, ಹಾಲು ಪರೀಕ್ಷಕ ಬಸವಣ್ಣ, ಜನ್ನೂರು ಗ್ರಾಮಸ್ಥರು ಹಾಜರಿದ್ದರು.

Translate »