ಡಾ.ಸುಧಾಮೂರ್ತಿಗೆ ‘ಕನ್ನಡ ರತ್ನ’ ಪ್ರಶಸ್ತಿ
ಮೈಸೂರು

ಡಾ.ಸುಧಾಮೂರ್ತಿಗೆ ‘ಕನ್ನಡ ರತ್ನ’ ಪ್ರಶಸ್ತಿ

October 21, 2019

ಬೆಂಗಳೂರು, ಅ.20- ದುಬೈನಲ್ಲಿ ವಾಸವಾಗಿರುವ ಅನಿವಾಸಿ ಕನ್ನಡಿ ಗರು ನೀಡುವ ‘ಕನ್ನಡ ರತ್ನ’ ಪ್ರಶಸ್ತಿಗೆ ಈ ವರ್ಷ ಇನ್ಫೋಸಿಸ್ ಫೌಂಡೇ ಶನ್ ಮುಖ್ಯಸ್ಥೆ ಸುಧಾಮೂರ್ತಿ ಆಯ್ಕೆ ಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದುಬೈ ಕನ್ನಡಿಗರ ಮುಖ್ಯ ಸಂಚಾಲಕ ಮಲ್ಲಿಕಾರ್ಜುನಗೌಡ, ಕರ್ನಾಟಕದ ನಾಡಹಬ್ಬ 64ನೇ ‘ಕನ್ನಡ ರಾಜ್ಯೋತ್ಸವ’ ವನ್ನು ದುಬೈನಲ್ಲಿರುವ ಕನ್ನಡಿಗರು ಈ ಬಾರಿ ನವೆಂಬರ್ 8 ರಂದು ಆಚರಿಸುತ್ತಿದ್ದು, ಇದು 16ನೇ ದುಬೈ ಕನ್ನಡ ರಾಜ್ಯೋತ್ಸವವಾಗಿದ್ದು ಈ ಬಾರಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ‘ಕನ್ನಡ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡ ಲಾಗಿದೆ ಎಂದು ಹೇಳಿದರು.

ನವೆಂಬರ್ 8ರಂದು ಸಂಜೆ 4.30 ಗಂಟೆಗೆ ದುಬೈ ಮೇದಾನ್ ನಾದ್ ಅಲ್ ಶೀಬಾದಲ್ಲಿರುವ ಹಾರ್ಟ್ ಲ್ಯಾಂಡ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಕನ್ನಡಿ ಗರು ಒಟ್ಟುಗೂಡಿ ನಾಡಹಬ್ಬ ಆಚರಿ ಸಲಿದ್ದು ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವ ರಿಗೆ 2019ನೇ ಸಾಲಿನ ‘ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.

Translate »