ಪ್ರಧಾನಿ ಮೋದಿ ಟರ್ಕಿ ಪ್ರವಾಸ ರದ್ದು
ಮೈಸೂರು

ಪ್ರಧಾನಿ ಮೋದಿ ಟರ್ಕಿ ಪ್ರವಾಸ ರದ್ದು

October 21, 2019

ನವದೆಹಲಿ, ಅ.20- ವಿಶ್ವಸಂಸ್ಥೆ ಸಾಮಾನ್ಯ ಸಭೆ ಯಲ್ಲಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಪಿ ಎರ್ಡೊ ಗನ್ ಪಾಕಿ ಸ್ತಾನಕ್ಕೆ ಬೆಂಬಲ ನೀಡಿದ ವಿಚಾರ ದಲ್ಲಿ ಭಾರತ ತಕ್ಕ ಉತ್ತರ ನೀಡಿದೆ. ತಿಂಗಳಾಂತ್ಯದಲ್ಲಿ ಪ್ರಧಾನಿ ಮೋದಿ ಅವರ ಟರ್ಕಿ ಭೇಟಿಯನ್ನು ಭಾರತ ರದ್ದು ಮಾಡಿದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಭಾರತದ ನಿರ್ಧಾರವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಟೀಕಿಸಿದ್ದ ಎರ್ಡೊಗನ್ ಪಾಕಿಸ್ತಾನ ವನ್ನು ಬೆಂಬಲಿಸಿದ್ದರು. ಅಲ್ಲದೆ, ಪ್ಯಾರಿಸ್‍ನಲ್ಲಿ ನಡೆದ ಸಭೆಯಲ್ಲೂ ಇದೇ ಪುನರಾವರ್ತನೆ ಆಗಿತ್ತು. ಈ ಹಿನ್ನೆಲೆಯಲ್ಲಿ ಟರ್ಕಿ ಪ್ರವಾಸ ರದ್ದು ಮಾಡಲು ನಿರ್ಧರಿಸಲಾಗಿದೆ.

ಅಕ್ಟೋಬರ್ 27 ಮತ್ತು 28ರಂದು ಟರ್ಕಿಯ ಅಂಕಾರದಲ್ಲಿ ಹೂಡಿಕೆ ಸಭೆ ನಡೆಯಬೇಕಿತ್ತು. ಆದರೆ, ಈಗ ಪ್ರವಾಸ ರದ್ದು ಮಾಡಲಾಗಿದೆ ಎನ್ನು ವುದು ಮೂಲಗಳ ಮಾಹಿತಿ. ಆದರೆ, `ಈ ಭೇಟಿ ಅಂತಿಮವೇ ಆಗಿಲ್ಲ. ಹೀಗಾಗಿ ಇದನ್ನು ರದ್ದು ಮಾಡುವ ಮಾತೇ ಇಲ್ಲ’ ಎಂದು ವಿದೇಶಾಂಗ ಇಲಾಖೆಯ ಮೂಲಗಳು ಹೇಳಿವೆ.

Translate »