ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ
ಮೈಸೂರು

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ

June 14, 2019

ಮೈಸೂರು: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ (KRS-PMFBY) ಅನು ಷ್ಠಾನಗೊಳಿಸಲಾಗುತ್ತಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಮೈಸೂರು ತಾಲೂಕು ಜಯಪುರ ಹೋಬಳಿಗೆ ಟೊಮ್ಯಾಟೋ ಹಾಗೂ ಎಲೆಕೋಸು, ವರುಣ ಮತ್ತು ಇಲವಾಲ ಹೋಬಳಿಗೆ ಟೊಮ್ಯಾಟೋ ಬೆಳೆ ನಿಗದಿ ಪಡಿಸಲಾಗಿದೆ. ಕೃಷ್ಣರಾಜನಗರ ತಾಲೂಕು ಹೆಬ್ಬಾಳು ಹೋಬಳಿ ಹಾಗೂ ತಿ.ನರಸೀಪುರ ತಾಲೂಕು ಬನ್ನೂರು ಹಾಗೂ ಸೋಸಲೆ ಹೋಬಳಿಗೆ ಟೊಮ್ಯಾಟೋ ಬೆಳೆ ನಿಗದಿಪಡಿಸಲಾಗಿದೆ. ನಂಜನಗೂಡು ತಾಲೂಕಿನ ಕಸಬಾ, ದೊಡ್ಡಕೌಲಂದೆ, ಬಿಳಿಗೆರೆ ಹಾಗೂ ಹುಲ್ಲ ಹಳ್ಳಿ ಹೋಬಳಿಗೆ ಟೊಮ್ಯಾಟೋ ಹಾಗೂ ಅರಿಶಿನ, ಚಿಕ್ಕಯ್ಯನಛತ್ರ ಹೋಬಳಿಗೆ ಟೊಮ್ಯಾಟೋ ಬೆಳೆ ನಿಗದಿಪಡಿಸಲಾಗಿದೆ. ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಹೋಬಳಿಗೆ ಆಲೂಗಡ್ಡೆ (ಮಳೆಯಾಶ್ರಿತ) ಬೆಳೆ ನಿಗದಿಪಡಿಸಿದ್ದು, ಹುಣಸೂರು ತಾಲೂಕು ಕಸಬಾ ಹಾಗೂ ಹನಗೋಡು ಹೋಬಳಿಗೆ ಅರಿಶಿಣ ಮತ್ತು ಬಿಳಿಕೆರೆ ಹೋಬಳಿಗೆ ಟೊಮ್ಯಾಟೋ ಮತ್ತು ಅರಿಶಿಣ ಬೆಳೆ ನಿಗದಿಪಡಿಸಲಾಗಿದೆ ಎಂದರು.

ಹೆಗ್ಗಡದೇವನಕೋಟೆ ತಾಲೂಕು ಅಂತರಸಂತೆ, ಕಂದಲಿಕೆ ಹಾಗೂ ಸರಗೂರು ಹೋಬಳಿಗೆ ಅರಿಶಿಣ ಹಾಗೂ ಕಸಬಾ ಮತ್ತು ಹಂಪಾಪುರ ಹೋಬಳಿಗೆ ಅರಿಶಿಣ ಮತ್ತು ಟೊಮ್ಯಾಟೋ ಬೆಳೆ ನಿಗದಿಪಡಿಸ ಲಾಗಿದೆ. ಭಾರ್ತಿ ಎಕ್ಸಾ ಜಿಐಸಿ ಲಿಮಿಟೆಡ್, 1ನೇ ಮಹಡಿ, ನಂ. 2951/ಂ, ಆ29/1, ಟೆಂಪಲ್ ರಸ್ತೆ, ವಾಣಿ ವಿಲಾಸ ಮೊಹಲ್ಲಾ ಮೈಸೂರು -570002 ದೂ. 0821-4261600 ಇ-ಮೇಲ್: PMFBY. kar@ bhartiaxa.com ವಿಮಾ ಸಂಸ್ಥೆಯಾಗಿದೆ. ಟೊಮ್ಯಾಟೋ- ರೂ.2360 ಹಾಗೂ ಆಲೂಗಡ್ಡೆ (ಮಳೆ ಆಶ್ರಿತ)- ರೂ 1400, ಎಲೆಕೋಸು- ರೂ.1260, ಪ್ರತಿ ಹೆಕ್ಟೇರಿಗೆ ರೈತರು ಪಾವತಿಸಬೇಕಾದ ವಿಮಾ ಮೊತ್ತ ವಾಗಿದ್ದು, ವಿಮಾ ಪ್ರಸ್ತಾವನೆ ಸಲ್ಲಿಸಲು ಜೂ.16 ರೊಳಗೆ ವಿಮಾ ಪ್ರಸ್ತಾವನೆ ಸಲ್ಲಿಸಬೇಕು. ಅರಿಶಿಣ ಬೆಳೆ- ರೂ. 2660, ಪ್ರತಿ ಹೆಕ್ಟೇರಿಗೆ ರೈತರು ಪಾವತಿಸಬೇಕಾದ ವಿಮಾ ಮೊತ್ತವಾಗಿದ್ದು, ವಿಮಾ ಪ್ರಸ್ತಾವನೆ ಸಲ್ಲಿಸಲು ಜೂ.31ರೊಳಗೆ ಸಲ್ಲಿಸಬೇಕು. ಈ ಯೋಜನೆಯಡಿ ರೈತರು ಬೆಳೆವಾರು ವಿಮೆಗಳನ್ನು online portal :samrakshane.nic.in ಮೂಲಕ ನೋಂದಾ ಯಿಸಬಹುದು. ವಿಮೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ರೈತರು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಹಾಗೂ ಆಯ್ಕೆಯಾಗಿರುವ ವಿಮಾ ಸಂಸ್ಥೆಗಳು, ಸ್ಥಳೀಯ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದು.

Translate »