ಡಿ.22ಕ್ಕೆ ಸಚಿವ ಸಂಪುಟ ವಿಸ್ತರಣೆ
ಮೈಸೂರು

ಡಿ.22ಕ್ಕೆ ಸಚಿವ ಸಂಪುಟ ವಿಸ್ತರಣೆ

December 19, 2018

ಬೆಳಗಾವಿ: ಕಾಂಗ್ರೆಸ್-ಜಾ.ದಳ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇದೇ ಡಿ.22ರಂದು ಸಂಜೆ 5ಕ್ಕೆ ನಡೆಯುವುದು ಖಚಿತವಾಗಿದೆ.

ಬೆಳಗಾವಿಯಲ್ಲಿ ಮಂಗಳವಾರ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಂಪುಟ ವಿಸ್ತರಣೆ ವಿಚಾ ರವೂ ಪ್ರಧಾನವಾಗಿ ಪ್ರಸ್ತಾಪವಾಯಿತು. ಈ ಮೊದಲೇ ನಿಗದಿಯಾದಂತೆ ಡಿ.22 ರಂದು ಸಂಪುಟ ವಿಸ್ತರಣೆಗೆ ನಿರ್ಧ ರಿಸಲಾಗಿದೆ. ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ.22ರಂದು ಸಂಪುಟಕ್ಕೆ ಹೊಸಬರ ಸೇರ್ಪಡೆಯಾಗ ಲಿದೆ ಎಂದರು. ಪತ್ರಕರ್ತರ ಮತ್ತೊಂದು ಪ್ರಶ್ನೆಗೆ, ಅಂದು ಸಂಪುಟ ವಿಸ್ತರಣೆಯೇ ನಡೆಯುವುದೋ, ಸಂಪುಟ ಪುನರ್ ರಚನೆಯೇ ಆಗುವುದೋ ಈಗಲೇ ಹೇಳಲು ಬರುವುದಿಲ್ಲ ಎಂದು ಮಾರ್ಮಿಕ ವಾಗಿ ಉತ್ತರಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾ ಗಲು ಕಳೆದ 7 ತಿಂಗಳಿಂದ ಇನ್ನಿಲ್ಲ ದಂತೆ ಕಸರತ್ತು ನಡೆಸಿರುವ ಎರಡೂ ಪಕ್ಷಗಳ ಸಚಿವಾಕಾಂಕ್ಷಿಗಳಿಗೆ ಇದ ರಿಂದ ಹರುಷ ಉಂಟಾಗಿದೆ.

Translate »