ಖದೀಮನ ಬಂಧನ: ಜಂಬೂ ಸವಾರಿಯಂದು ಕದ್ದ ಚಿನ್ನಾಭರಣ ವಶ
ಮೈಸೂರು

ಖದೀಮನ ಬಂಧನ: ಜಂಬೂ ಸವಾರಿಯಂದು ಕದ್ದ ಚಿನ್ನಾಭರಣ ವಶ

June 11, 2019

ಮೈಸೂರು: 2018ರ ಜಂಬೂ ಸವಾರಿ ದಿನ ಮನೆಯೊಂದ ರಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಓರ್ವ ಖದೀಮನನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು, ಈತನಿಂದ 90 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ಗೌರಿಶಂಕರ ಅಲಿಯಾಸ್ ಶಂಕರ(38) ಬಂಧಿತ ಆರೋಪಿ. ಜೂ.9ರಂದು ಅಶೋಕ ರಸ್ತೆಯ ಅರಳಿ ಮರದ ಬಳಿಯ ಗಿರಿವಿ ಅಂಗಡಿ ಬಳಿ 2 ಚಿನ್ನದ ಬಳೆಯನ್ನು ಮಾರಾಟ ಮಾಡಲು ಆರೋಪಿ ಯತ್ನಿಸುತ್ತಿದ್ದ. ಮಾಹಿತಿ ಆಧರಿಸಿ ಈತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಈತನ ಮಾಹಿತಿ ಮೇರೆಗೆ ಪೊಲೀಸರು 90 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಪತ್ತೆ ಕಾರ್ಯದಲ್ಲಿ ಮಂಡಿ ಠಾಣೆ ಇನ್ಸ್‍ಪೆಕ್ಟರ್ ಎಲ್.ಅರುಣ್, ಎಎಸ್‍ಐ ಕೆ.ಎಸ್.ಗುರುಸ್ವಾಮಿ, ಜಯಪಾಲ, ಎಸ್.ಜಯಕುಮಾರ್, ಎಂ.ಚಂದ್ರಶೇಖರ್, ರವಿಗೌಡ, ಶಂಕರ್, ಹನುಮಂತ ಇದ್ದರು.

 

Translate »