ಕೊಳ್ಳೇಗಾಲ ಟಿಎಪಿಸಿಎಂಎಸ್‍ಗೆ ಬೀಗ
ಚಾಮರಾಜನಗರ

ಕೊಳ್ಳೇಗಾಲ ಟಿಎಪಿಸಿಎಂಎಸ್‍ಗೆ ಬೀಗ

September 27, 2018

ಕೊಳ್ಳೇಗಾಲ: ಅಂತೂ ಕೊಳ್ಳೇಗಾಲದ ಟಿಎಪಿಸಿಎಂಎಸ್‍ನಿಂದ ಬಡವರಿಗೆ ವಿತರಿಸಬೇಕಾದ ಅನ್ನಭಾಗ್ಯದ ಅಕ್ಕಿ ವಿತರಣೆಯಲ್ಲಿ ವ್ಯಾಪಕ ಗೋಲ್ ಮಾಲ್ ನಡೆದ ಹಿನ್ನೆಲೆ ಮಂಗಳವಾರ ರಾತ್ರಿ ಆಹಾರ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿ ಕಾವೇರಿ ಅವರ ನಿರ್ದೇಶನದ ಮೇರೆಗೆ ಬೀಗ ಹಾಕಿದ್ದಾರೆ.

2.265 ಕ್ವಿಂಟಾಲ್ ಅಕ್ಕಿ ಹಾಗೂ 236 ಕ್ವಿಂಟಾಲ್ ಬೆಳೆ ವಿತರಿಸದೆ ಗೋಲ್ ಮಾಲ್ ಎಸಗಿರುವುದು ಆಹಾರ ಇಲಾಖೆಯ ಉಪ ನಿರ್ದೇಶಕ ರಾಚಪ್ಪ ಭೇಟಿ ವೇಳೆ ಪತ್ತೆಯಾಗಿದೆ. ಇದೇ ವೇಳೆ 535 ಕ್ವಿಂಟಾಲ್ ಸಕ್ಕರೆ ಸಹ ನಾಪತ್ತೆಯಾಗಿದೆ. ಕಳೆದ 2016 ರಲ್ಲಿ ಸರ್ಕಾರ ನೀಡಿದ್ದ ಸಕ್ಕರೆ ದಾಸ್ತಾನು ಟಿಎಪಿ ಸಿಎಂಎಸ್ ಗೋದಾಮಿನಲ್ಲಿ ಇರಲಿಲ್ಲ.

ಈ ಬಗ್ಗೆ ಅಧಿಕಾರಿಗಳು ವಿಚಾರಿಸಿದರೆ ಸಕ್ಕರೆ ಹಾಳಾಗಿದೆ. ಮಳೆಗೆ ನೆನೆದಿದೆ ಎಂಬ ಸಬೂಬು ಕೇಳಿ ಬಂದಿದೆ. ಈ ಹಿನ್ನೆಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು ವ್ಯಾಪಕ ಅವ್ಯವಹಾರದ ಹಿನ್ನೆಲೆ ಬೀಗ ಮುದ್ರೆ ಹಾಕಿ ನಿರ್ಗಮಿಸಿದ್ದಾರೆ.

ಇತ್ತೀಚೆಗೆ ಉವಿಭಾಗಾಧಿಕಾರಿ ಪೌಜಿಯಾ ತರುನ್ನಮ್ ತಂಡದ ಐದಾರು ಮಂದಿ ಅಧಿಕಾರಿಗಳು ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಲಕ್ಷಾಂತರ ರೂ. ಮೌಲ್ಯದ ತಾಳೆ ಎಣ್ಣೆ. ಹಾಗೂ 535 ಕ್ವಿಂಟಾಲ್ ಸಕ್ಕರೆ ಕಾಣೆಯಾಗಿತ್ತು. ಸಕ್ಕರೆ ಹಾಳಾಗಿದೆ ಎಂದು ಸಬೂಬು ಹೇಳುವ ಸಿಬ್ಬಂದಿಗಳು ಯಾವುದೇ ಪ್ರಕರಣ ದಾಖಲಿಸಿದ ದಾಖಲೆ ನೀಡಿದ ಹಿನ್ನೆಲೆ ತನಿಖಾ ತಂಡ ಇತ್ತೀಚೆಗೆ 15 ಲಕ್ಷಕ್ಕೂ ಹೆಚ್ಚು ಮೌಲ್ಯದ 535 ಟನ್ ಸಕ್ಕರೆ ದುರ್ಬಳಕೆ ಯಾಗಿದೆ. ಇಲ್ಲಿ ಕೋಟ್ಯಾಂತರ ರೂ. ಮೌಲ್ಯದ ಪಡಿತರ ದುರ್ಬಳಕೆಯಾಗಿದೆ. ನ್ಯಾಯ ಬೆಲೆ ಅಂಗಡಿ ಮೂಲಕ ನಾಗರಿಕರಿಗೆ ಪಡಿತರ ತಲುಪಿಲ್ಲ. ಇಲ್ಲಿನ ಗೋದಾಮಿನಲ್ಲಿ ಪದಾರ್ಥಗಳು ದುರ್ಬಳಕೆಯಾಗಿವೆ. ಆದರೆ ಆಗಸ್ಟ್ ತಿಂಗಳ ತನಕ ಆಹಾರ ಪದಾರ್ಥ ವಿತರಣೆಯಾಗಿದ್ದರೂ ಸಹಾ ಮೂರು ಹಾಗೂ ನಾಲ್ಕು ತಿಂಗಳ ಆಹಾರ ಪದಾರ್ಥ ರೇಷನ್ ಕಾರ್ಡ್ ದಾರರಿಗೆ ತಲುಪಿಲ್ಲ ಎಂಬ ವಾಸ್ತವ ವರದಿಯನ್ನು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ ಎಂದು ಇಲಾಖೆ ಮೂಲಗಳು ಖಚಿತ ಪಡಿಸಿವೆ.

Translate »