ಕೊಡವ ಕುಟುಂಬಗಳ ಕುಲ್ಲೇಟಿರ ಕಪ್ ಹಾಕಿ ಉತ್ಸವ
ಕೊಡಗು

ಕೊಡವ ಕುಟುಂಬಗಳ ಕುಲ್ಲೇಟಿರ ಕಪ್ ಹಾಕಿ ಉತ್ಸವ

April 24, 2018

ನಾಪೋಕ್ಲು :  22ನೇ ವರ್ಷದ ಕೊಡವ ಕುಟುಂಬಗಳ ನಡುವೆ ನಾಪೆÇೀಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಮಾಳೇಟಿರ, ಮಲ್ಲಚ್ಚಿರ, ಇಟ್ಟೀರ, ಮಾರ್ಚಂಡ, ಮಾಪಂಗಡ, ಬಿದ್ದಾಟಂಡ, ಕಾಳಿಮಡ, ಬಟ್ಟೀರ, ಮೇಕೇರಿರ, ನಾಯಕಂಡ, ಕಲ್ಲೇಂಗಡ, ಕೊಕ್ಕಂಡ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು.

ಇಂದು ನಡೆದ ಮೊದಲ ಪಂದ್ಯಾಟದಲ್ಲಿ ಮಾಳೇಟಿರ (ಕೆದಮುಳ್ಳೂರ್) ತಂಡವು ಅಜ್ಜೀನಂಡ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು, ಮಾಳೇಟಿರ ಪರ ಧನು, ನಾಚಪ್ಪ, ಮುದ್ದಪ್ಪ ಒಂದೊಂದು ಗೋಲು ಬಾರಿಸಿ ಮಿಂಚಿದರು.
ನಂತರದ ಪಂದ್ಯದಲ್ಲಿ ಮಲ್ಲಚ್ಚಿರ ತಂಡವು ಪಾಂಡಂಡ ತಂಡವನ್ನು 5-0 ಗೋಲಿನಿಂದ ಸುಲಭವಾಗಿ ಮಣ ಸಿತು. ಮಲ್ಲಚ್ಚಿರ ತಂಡದ ಪರ ಬೋಪಯ್ಯ 3 ಗೋಲು ಬಾರಿಸುವುದರ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಹರ್ಷ, ತಶ್ವಿನ್ ಒಂದೊಂದು ಗೋಲು ಬಾರಿಸಿ ಅಂತರ ಹೆಚ್ಚಿಸಿಕೊಂಡರು.

ಇಟ್ಟೀರ ತಂಡವು ಮಾದಂಡ ತಂಡವನ್ನು 1-0 ಗೋಲಿನಿಂದ ಮಣ ಸಿತು. ಮೊದಲಾರ್ಧದಲ್ಲಿ ಇಟ್ಟೀರ ನಾಚಪ್ಪ 4 ನಿಮಿಷದಲ್ಲಿ ಗೋಲು ಹೊಡೆದು ಗೆಲುವಿನ ರೂವಾರಿಯಾದರು. ಬಹಳ ಕುತೂಹಲದಿಂದ ಕೂಡಿದ ಈ ಪಂದ್ಯಾಟದಲ್ಲಿ ಮಾದಂಡ ತಂಡ ಗೋಲಿಗಾಗಿ ಸೆಣಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರದ ಪಂದ್ಯದಲ್ಲಿ ಮಾರ್ಚಂಡ ತಂಡವು ಅಪ್ಪಚ್ಚಂಡ ತಂಡವನ್ನು 4-0 ಗೋಲಿನಿಂದ ನಿರಾಯಾಸವಾಗಿ ಮಣ ಸಿತು. ಮಾರ್ಚಂಡ ತಂಡದ ಜೋಯಪ್ಪ 2 ಗೋಲು ಬಾರಿಸಿದರೆ, ಸೋಮಣ್ಣ ಮತ್ತು ನಾಚ್ಪಪ ಒಂದೊಂದು ಗೋಲು ಬಾರಿಸಿದರು. ಮೇಕೆರಿರ ತಂಡವು ಅಮ್ಮಣ ಚಂಡ ತಂಡವನ್ನು 5-1 ಗೋಲಿನಿಂದ ಮಣ ಸಿತು. ಮೇಕೇರಿರ ಪರ ತಿಮ್ಮಯ್ಯ 3, ಗಣಪತಿ 1 ಗೋಲು ಬಾರಿಸಿದರು.

ನಂತರದ ಪಂದ್ಯದಲ್ಲಿ ಕಲ್ಲೇಂಗಡ ತಂಡವು ಕರವಂಡ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆಯಿತು. ಕಲ್ಲೇಂಗಡ ಪರ ಪವನ್ ಚೆಂಗಪ್ಪ 2 ಗೋಲು ಹೊಡೆದು ಮಿಂಚಿದರು. ಕರವಂಡ ಕಿಶನ್ ಸೋಮಯ್ಯ 1 ಗೋಲು ಹೊಡೆದರು. ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಯಕಂಡ ತಂಡವು 2-0 ಗೋಲುಗಳಿಂದ ಕುಂಚೇಟಿರ ತಂಡವನ್ನು ಪರಾಭವ ಗೊಳಿಸಿತು, ನಾಯಕಂಡ ಪರ ಜೋಯಪ್ಪ, ಜೀವನ್ ಬೋಪಣ್ಣ ಗೋಲು ಗಳಿಸಿದರು.

ನಂತರದ ಪಂದ್ಯಾಟದಲ್ಲಿ ತಡಿಯಂಗಡ ತಂಡವು ಮಾಪಂಗಡ ವಿರುದ್ಧ 3-0 ಗೋಲುಗಳಿಂದ ಸೋಲು ಒಪ್ಪಿಕೊಂಡಿತ್ತು. ಮಾಪಂಗಡ ಅಪ್ಪಣ್ಣ ಹ್ಯಾಟ್ರಿಕ್ ಗೋಲು ಬಾರಿಸುವುದರ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಬಿದ್ದಾಟಂಡ ತಂಡವು ಪರುವಂಗಡ ತಂಡವನ್ನು 2-1 ಗೋಲುಗಳಿಂದ ಮಣ ಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಬಿದ್ದಾಟಂಡ ಗುಣೇಶ್ ಪೊನ್ನಣ್ಣ 2 ಗೋಲು ಹೊಡೆದರೆ ಪರುವಂಗಡ ಕೀರ್ತನ್ ಪೊನ್ನಪ್ಪ ಒಂದು ಗೋಲು ಬಾರಿಸಿ ಅಂತರವನ್ನು ತಗ್ಗಿಸಿಕೊಂಡರು.

ನಂತರದ ಪಂದ್ಯದಲ್ಲಿ ಕಾಳಿಮಾಡ ತಂಡವು ಮೊಣ್ಣಂಡ ತಂಡವನ್ನು 4-0 ಗೋಲುಗಳಿಂಡ ಭರ್ಜರಿಯಾಗಿ ಮಣ ಸಿತು, ಏಕಪಕ್ಷೀಯವಾಗಿದ್ದ ಆಟದಲ್ಲಿ ಕಾಳಿಮಾಡ ತಂಡದ ದನಿ 2 ಗೋಲು, ಕಿರಣ್, ಕುಶಾಲಪ್ಪ ಗೋಲು ಬಾರಿಸಿ ತಂಡದ ವಿಜಯಕ್ಕೆ ಕಾರಣರಾದರು. ನಂತರದ ಪಂದ್ಯದಲ್ಲಿ ಬಟ್ಟೀರ ತಂಡವು ಬೊಳ್ಳಚೇಟ್ಟಿರ ತಂಡವನ್ನು 4-0 ಗೋಲುಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದು ಕೊಂಡಿತು, ಬಟ್ಟೀರ ಪರ ಮಧು ಮಾಚಯ್ಯ 2, ತೀರ್ಥನ್ 2 ಗೋಲು ಬಾರಿಸಿ ಮಿಂಚಿದರು. ಪಾಲಂದಿರ ಮತ್ತು ಕೊಕ್ಕಂಡ ನಡುವೆ ನಡೆದ ಪಂದ್ಯಾಟದಲ್ಲಿ ಯಾವುದೇ ಗೋಲು ಬಾರದೇ ಇದ್ದಿದ್ದರಿಂದ ಟೈ ಬ್ರೇಕರ್ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಟೈ ಬ್ರೇಕರ್‍ನಲ್ಲಿ ಕೊಕ್ಕಂಡ ತಂಡವು 4-3 ಗೋಲಿನಿಂದ ಜಯ ಸಾಧಿಸಿತು.

ಬಾಕ್ಸ್
ಇಂದಿನ ಪಂದ್ಯಾಟ
ಮೈದಾನ 1 ರಲ್ಲಿ
ಬೆ. 9 ಕ್ಕೆ ಮೂವೇರ – ಪಾಳೆಯಂಡ
ಬೆ.10 ಕ್ಕೆ ಮದ್ರೀರ – ಬಡ್ಡೀರ
ಬೆ.11ಕ್ಕೆ ಪೊರ್ಕೊವಂಡ- ಚಂದೀರ
ಮ.12 ಕ್ಕೆ ಮುರುವಂಡ – ಮುಂಡಚಾಡಿರ
ಮ.1 ಕ್ಕೆ ಮಂದೇಯಂಡ – ಕೂತೆಯಂಡ
ಮ.2 ಕ್ಕೆ ಚೇಮೆರ – ನಾಗಂಡ
ಮೈದಾನ 2
ಬೆ.9 ಕ್ಕೆ ಕಂಬೆಯಂಡ – ನುಚ್ಚುಮಣ ಯಂಡ
ಬೆ.10 ಕ್ಕೆ ಪುಚ್ಚಿಮಂಡ – ಚಂಗೇಟಿರ
ಬೆ.11 ಕ್ಕೆ ಪಾಡೆಯಂಡ – ಮಂಡಂಗಡ
ಮ.12 ಕ್ಕೆ ಮಣವಟ್ಟೀರ – ಬಯವಂಡ
ಮ.1 ಕ್ಕೆ ಅಪ್ಪಚಟ್ಟೋಳಂಡ – ಪಟ್ರಪಂಡ
ಮ.2 ಕ್ಕೆ ಕುಂಡ್ಯೋಳಂಡ – ಕೋಳೇರ

Translate »