ಕುಮಾರಣ್ಣನೇ ಐದು ವರ್ಷ ಮುಖ್ಯಮಂತ್ರಿ- ಸಚಿವ ಸಾರಾ ಮಹೇಶ್
ಮೈಸೂರು

ಕುಮಾರಣ್ಣನೇ ಐದು ವರ್ಷ ಮುಖ್ಯಮಂತ್ರಿ- ಸಚಿವ ಸಾರಾ ಮಹೇಶ್

September 8, 2018

ಕೆ.ಆರ್.ನಗರದಲ್ಲಿ ಶಾಸಕರಿಗೆ ನಾಯಕರ ಸಂಘದಿಂದ ಸನ್ಮಾನ
ಕೆ.ಆರ್.ನಗರ: ನಮ್ಮದು ಸಮ್ಮಿಶ್ರ ಸರ್ಕಾರ ನಮ್ಮಿಬ್ಬರ ಜಗಳ ಕೇವಲ ಗಂಡ-ಹೆಂಡತಿ ಜಗಳವಾಗಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲಾ, ಕುಮಾರಣ್ಣನೆ ಐದು ವರ್ಷ ಮುಖ್ಯ ಮಂತ್ರಿಯಾಗಿರುತ್ತಾರೆ. ಸರ್ಕಾರ ಬಿದ್ದು ಹೋಗುತ್ತಾದೆ ಎಂಬ ಹಗಲು ಗನಸು ಕಾಣುವುದು ಬೇಡ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ.ಮಹೇಶ್ ಹೇಳಿದರು.
ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿಂದು ತಾಲೂಕು ನಾಯಕರ ಸಂಘ ಮತ್ತು ತಾಲೂಕು ನಾಯಕ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಸರ್ಕಾರ ಬೀಳುತ್ತದೆ ಎಂಬ ಅಪಪ್ರಚಾರವನ್ನು ನಿಲ್ಲಿಸಿ ಅಭಿವೃದ್ದಿಗೆ ಸಹಕರಿಸಿ ಎಂದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ನಾಯಕ ಸಮಾಜದ ನಾಯಕರಾಗಿದ್ದ ಚಿಕ್ಕಮಾದುರವರ ಕೊಡುಗೆ ನಾಯಕ ಸಮಾಜಕ್ಕೆ ಅಪಾರವಾಗಿದೆ. ಅವರ ನಂತರ ಮಗ ಅನಿಲ್‍ಚಿಕ್ಕಮಾದು ಶಾಸಕರಾಗಿದ್ದಾರೆ. ಜಿಲ್ಲೆಯ ನಾಯಕ ಸಮಾಜ ಅವರನ್ನು ರಾಜಕೀಯ ನಾಯಕರಾಗಿ ಬೆಳೆಯಲು ಸಹಕಾರ ನೀಡಬೇಕು. ನಾನು ಬೇರೆ ಪಕ್ಷವಾಗಿದ್ದರೂ ಅನಿಲ್ ಬೆವಣಿಗೆಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಸನ್ಮಾನ ಸ್ವೀಕರಿಸಿದ ಎಚ್.ಡಿ.ಕೋಟೆ ಶಾಸಕ ಅನಿಲ್‍ಚಿಕ್ಕಮಾದು ಮಾತನಾಡಿ ನಾನು ಇವತ್ತು ರಾಜಕೀಯವಾಗಿ ಶಾಸಕನಾಗಿ ಇಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣಿಭೂತರು ಸಾ.ರಾ.ಮಹೇಶಣ್ಣ, ಅವತ್ತು ಅವರು ನಮ್ಮ ತಂದೆ ಬಳಿ ಬಂದು ಜಿಲ್ಲಾ ಪಂಚಾಯಿತಿಗೆ ನಿಲ್ಲಿಸುವಂತೆ ಹೇಳದಿದ್ದಲ್ಲಿ ನಾನು ರಾಜಕೀಯಕ್ಕೆ ಬರುತ್ತಿರಲ್ಲಿಲ್ಲ ಎಂದರು.

ಇದಕ್ಕೂ ಮೊದಲು ಸನ್ಮಾನ ಸ್ವೀಕರಿಸಿ, ತುರ್ತು ಕೆಲಸದ ಮೇಲೆ ಬೆಂಗಳೂರಿಗೆ ತೆರಳಿದ ಎಚ್.ವಿಶ್ವನಾಥ್ ಮಾತನಾಡಿ ನಾಯಕ ಸಮುದಾಯ ಭವನ ನಿರ್ಮಾಣಕ್ಕೆ ಚಿಕ್ಕಮಾದು ನಾನು, ಕಾಟ್ನಾಳು ಕೃಷ್ಣಪ್ಪ ಮತ್ತು ಈಗಿನ ಸಚಿವರ ಸಾ.ರಾ.ಮಹೇಶ್‍ರವರ ಕೊಡುಗೆ ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಟಿ.ಎಸ್.ನರಸಿಂಹನಾಯಕ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಸಿದ್ದೇಶ್ವರ ಪ್ರಸಾದ್, ಪುರಸಭಾ ಮಾಜಿ ಅಧ್ಯಕ್ಷ ಪಾರ್ವತಿನಾಗರಾಜು, ತಾ.ಪಂ ಸದಸ್ಯರುಗಳಾದ ಸಿದ್ದಮ್ಮ ದೇವರಾಜು, ಸುನೀತಾದಿನೇಶ್, ಲಲಿತಾಶಿವಣ್ಣನಾಯಕ, ಎ.ಟಿ.ಶಿವಣ್ಣ, ಮಹದೇವ್, ಎಚ್.ಸಿ.ಕುಮಾರ್, ಕುಚೇಲ, ತುಳಿಸಿರಾಮನಾಯಕ, ನವನಗರ ಕಿಟ್ಟಿ, ಮಧುವನಹಳ್ಳಿ ಪ್ರಕಾಶ್, ಚಂದಗಾಲು ಮಹದೇವ, ಕೃಷ್ಣನಾಯಕ, ಡೈರಿ ಸ್ವಾಮಿ ಮುಂತಾದವರು ಪಾಲ್ಗೊಂಡಿದರು.

Translate »