ಬಿಜೆಪಿಯಿಂದ ಟಿಕೆಟ್ ನೀಡಲು ಕುಂಚಟಿಗರ ಒತ್ತಾಯ
ಮೈಸೂರು

ಬಿಜೆಪಿಯಿಂದ ಟಿಕೆಟ್ ನೀಡಲು ಕುಂಚಟಿಗರ ಒತ್ತಾಯ

August 19, 2018

ಮೈಸೂರು: ತೀರಾ ಹಿಂದುಳಿದಿರುವ ಕುಂಚಿಟಿಗರ ಸಮಾಜಕ್ಕೆ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಮೈಸೂರು ಕುಂಚಿಟಿಗರ ಸಂಘವು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದೆ.

ಸಂಘದ ಅಧ್ಯಕ್ಷ ಎಂ.ಪಿ.ನಾಗರಾಜ ಅವರು ಶನಿವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಸುಮಾರು 30ರಿಂದ 40 ಸಾವಿರ ಕುಂಚಿಟಿಗರಿದ್ದು, ಸಮಾಜದ ಯಾರೊಬ್ಬರೂ ಪಾಲಿಕೆ ಚುನಾವಣೆಯಲ್ಲಿ ಇದುವರೆಗೆ ಆಯ್ಕೆಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ 51ನೇ ವಾರ್ಡ್ (ಅಗ್ರಹಾರ) ಮತ್ತು 42ನೇ ವಾರ್ಡ್ (ಸರಸ್ವತಿಪುರಂ)ನಿಂದ ಆರ್.ಶಿವಕುಮಾರ್ ಮತ್ತು 23ನೇ ವಾರ್ಡ್ (ಸುಬ್ಬರಾಯನಕೆರೆ)ಯಿಂದ ಲಕ್ಷ್ಮೀ ಅವರಿಗೆ ಟಿಕೆಟ್ ನೀಡಿ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಬಾರಿ ಸಮುದಾಯಕ್ಕೆ ಟಿಕೆಟ್ ನೀಡದೆ ನಿರ್ಲಕ್ಷ್ಯ ವಹಿಸಿದರೆ ಸಮುದಾಯವು ತೆಗೆದುಕೊಳ್ಳುವ ಗಂಭೀರ ತೀರ್ಮಾನದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಸಿ.ಕೆ.ಗಣೇರ್ಶ, ಎಂ.ಆರ್.ಯೋಗೇಶ್, ಟಿಕೆಟ್ ಆಕಾಂಕ್ಷಿಗಳಾದ ಶಿವಕುಮಾರ್, ಲಕ್ಷ್ಮಿ ಇನ್ನಿತರರು ಇದ್ದರು.

Translate »