ಕುವೆಂಪು ಅವರಿಗೆ ಭಾರತರತ್ನ ಲಭಿಸಲಿ: ಸಿ.ಕೆ.ರಾಮೇಗೌಡ
ಮೈಸೂರು

ಕುವೆಂಪು ಅವರಿಗೆ ಭಾರತರತ್ನ ಲಭಿಸಲಿ: ಸಿ.ಕೆ.ರಾಮೇಗೌಡ

January 20, 2020

ಮೈಸೂರು,ಜ.19(ಎಸ್‍ಪಿಎನ್)-ಕುವೆಂಪು ಜೀವಿತಾವಧಿಯಲ್ಲಿ ಕೆಲವರು ಅವರ ಏಳಿಗೆಯನ್ನು ಸಹಿಸಲಿಲ್ಲ. ಇನ್ನು ಕೆಲ ವರು, ಅವರನ್ನು ಕವಿ, ಸಾಹಿತಿಯೇ ಅಲ್ಲ ಎಂದು ಜರಿದರು. ಎಲ್ಲಾ ಟೀಕೆ, ಅಸೂಯೆ ಮನಸುಗಳ ನಡುವೆ ಕುವೆಂಪು ವಿಶ್ವ ಚೇತನ ವಾಗಿ ಬೆಳೆದಿದ್ದಾರೆ. ಆದ್ದರಿಂದ ಅವರಿಗೆ ಮರಣೋತ್ತರ `ಭಾರತರತ್ನ’ ಲಭಿಸಬೇಕು ಎಂದು ಬೆಂಗಳೂರು ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಆಗ್ರಹಿಸಿದರು.

ಮೈಸೂರು ವಿಜಯನಗರ 1ನೇ ಹಂತ ದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ಮಂಡ್ಯದ ಹಸಿರು ಭೂಮಿ ಟ್ರಸ್ಟ್, ಮೈಸೂರಿನ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಮಂಡ್ಯ ಒಕ್ಕೂಟ ಸಹಯೋಗ ದೊಂದಿಗೆ ಆಯೋಜಿಸಿದ್ದ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಕರ್ನಾಟಕ ರತ್ನ ಕುವೆಂಪು ಸಂಸ್ಮರಣೆ ಕಾರ್ಯಕ್ರಮದಲ್ಲಿ ನುಡಿ ಮತ್ತು ಗೀತ ನಮನ ಹಾಗೂ ಸಾಧಕರಿಗೆ ಸನ್ಮಾನಿಸುವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

1950ರ ದಶಕದಲ್ಲಿ ಕುವೆಂಪು ಅವರ ಸಾಹಿತ್ಯವನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿದ್ದರೆ, ಅವರ ಸಾಹಿತ್ಯ ಇಂದಿಗೆ ವಿಶ್ವ ವ್ಯಾಪ್ತಿಯಾಗುತ್ತಿತ್ತು. ಅವರ ಗೌರವ ಮತ್ತಷ್ಟು ಇಮ್ಮಡಿಯಾಗುತ್ತಿತ್ತು. ಆದರೆ, ಕೆಲವು ಸಾಹಿತಿ ಗಳು ಅವರ ಏಳಿಗೆÉಯನ್ನು ಸಹಿಸದೇ ಅವರ ಸಾಹಿತ್ಯವನ್ನು ತರ್ಜುಮೆ ಮಾಡ ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕುವೆಂಪು ಜೀವಿತಾವಧಿಯಲ್ಲಿ ವ್ಯಕ್ತಿಗತ ಟೀಕೆ ಮಾಡಿದವರೆಲ್ಲಾ ಅಳಿದು ಹೋಗಿ ದ್ದಾರೆ. ಇಂದು ಅವರ ವಿಶ್ವರೂಪ ಸಾಧನೆ ಮತ್ತು ವ್ಯಕ್ತಿತ್ವ ಮಾತ್ರ ಇಂದಿನ ಪೀಳಿಗೆಗೆ ಉಳಿದುಕೊಂಡಿದೆ. ದೇಶದ ಮೂಲೆಮೂಲೆ ಯಲ್ಲಿ ಕುವೆಂಪು ಕುರಿತಾದ ಸಾಹಿತ್ಯ ಚರ್ಚೆ ಪ್ರತಿದಿನ ನಡೆಯುತ್ತಿರುತ್ತವೆ. ಇದು ಕುವೆಂಪು ವ್ಯಕ್ತಿತ್ವದ ಒಂದು ಮಜಲು ಎಂದರು.

ಹಿರಿಯ ಜಾನಪದ ವಿದ್ವಾಂಸ ಡಾ. ಪಿ.ಕೆ.ರಾಜಶೇಖರ ಮಾತನಾಡಿ, ವಿವೇಕ ವಿಲ್ಲದ ವಿದ್ಯೆ, ರಾಮನಿಲ್ಲದ ಅಯೋಧ್ಯೆ ಎರಡು ಒಂದೇ. ಇಂದಿನ ಸಭೆ-ಸಮಾ ರಂಭಗಳು ನನಗೆ ಅಷ್ಟಾಗಿ ಒಗ್ಗುತ್ತಿಲ್ಲ. ಆದರೆ, ಕುವೆಂಪು ಮತ್ತು ಡಾ.ಬಾಲಗಂಗಾಧರ ಸ್ವಾಮೀಜಿ ಕುರಿತು ಎಷ್ಟೋ ಮಾತನಾಡಿ ದರೂ ಮುಗಿಯದ ವಿಚಾರಧಾರೆ, ಅಂತಹ ವಿಶ್ವಚೇತನಗಳು ನಮ್ಮ-ನಿಮ್ಮೆಲ್ಲರ ನಡುವೆ ಬದುಕಿದ್ದರು ಎಂಬುದೇ ದೊಡ್ಡ ಮಾತು ಎಂದರು. ಈ ವೇಳೆ ಹಿರಿಯ ರಂಗ ಕರ್ಮಿ ಹೆಚ್.ಜನಾರ್ಧನ್(ಜನ್ನಿ) ಅವರಿಗೆ ಕುವೆಂಪು ಸಮಾಜಮುಖಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಡಾ. ಸಿ.ಪಿ.ಕೃಷ್ಣಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಗೋವಿಂದಹಳ್ಳಿ ಕೃಷ್ಣೇ ಗೌಡ, ಡಿ.ರವಿಕುಮಾರ್, ಕೆ.ಹರಿಪ್ರಸಾದ್, ಸಿ.ಎನ್.ಕೃಷ್ಣ, ಯುವ ಬರಹಗಾರ ಸತೀಶ್ ಜವರೇಗೌಡ ಉಪಸ್ಥಿತರಿದ್ದರು.

Translate »