ವಿಮಾನ ನಿಲ್ದಾಣಕ್ಕೆ ಭೂಮಿ; ಎಕರೆಗೆ 40 ಲಕ್ಷ ರೂ.!
ಹಾಸನ

ವಿಮಾನ ನಿಲ್ದಾಣಕ್ಕೆ ಭೂಮಿ; ಎಕರೆಗೆ 40 ಲಕ್ಷ ರೂ.!

July 5, 2019

* ಪರಿಷ್ಕೃತ ದರ ನಿಗದಿ ಸಭೆಯಲ್ಲಿ ರೈತರ ಮನವಿ ಪುರಸ್ಕರಿಸಿ ಸರ್ಕಾರಕ್ಕೆ ಶಿಫಾರಸು: ಡಿಸಿ ಘೋಷಣೆ
* ಹೆಚ್‍ಡಿಡಿಯಿಂದ ಭೂಮಿಪೂಜೆ-2007ರಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಜೀವ ಯತ್ನ

ಹಾಸನ: ನಗರದ ಹೊರವಲಯ ದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣಕ್ಕೆ ಈ ಹಿಂದೆಯೇ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದ್ದು, ಆ ಜಮೀನು ಗಳಿಗೆ ಹೊಸದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಭೂಮಾಲೀಕರ ಜತೆ ಸಭೆ ನಡೆಯಿತು.

ಕೆಂಚಟ್ಟಹಳ್ಳಿ, ಭುವನಹಳ್ಳಿ, ಸಮುದ್ರ ವಳ್ಳಿ, ಗೇಕರವಳ್ಳಿಯ ಭೂಮಾಲೀಕರ ಜತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಸುದೀರ್ಘ ಚರ್ಚೆ ನಡೆಸಿದರು.

ಹಾಸನದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಯಾಗುತ್ತಿರುವುದು ಸಂತೋಷದ ವಿಚಾರ ಎಂದ ರೈತರು, ಆದಷ್ಟೂ ಬೇಗ ಈ ಕಾರ್ಯ ಆಗಬೇಕು. ಆದರೆ ನಮ್ಮ ಜಮೀನಿಗೆ ಹೆಚ್ಚಿನ ಪರಿಹಾರ ದೊರಕಿಸಿಕೊಡಬೇಕು. ಎಲ್ಲಾ ಗ್ರಾಮಗಳ ಭೂಮಿಗೂ ಏಕರೂಪದ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

2007ಕ್ಕೂ ಹಿಂದೆ ನಡೆದಿರುವ ಭೂ ಸ್ವಾಧೀನ ಪ್ರಕ್ರಿಯೆ ಇದಾಗಿದೆ. ಕೆಂಚೆಟ್ಟಹಳ್ಳಿ ಮತ್ತು ಭುವನಹಳ್ಳಿಯಲ್ಲಿ ಪ್ರತಿ ಎಕರೆಗೆ 11 ಲಕ್ಷ ರೂ. ಮತ್ತು ಸಮುದ್ರವಳ್ಳಿ, ಗೇಕರ ವಳ್ಳಿಯಲ್ಲಿ 9 ಲಕ್ಷ ರೂ. ನಿಗದಿಪಡಿಸಲಾ ಗಿತ್ತು. ಈಗ ರೈತರ ಮನವಿ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು ವಿಶೇಷ ಆಸಕ್ತಿ ತೋರಿಸಿ ದರ ಪರಿಷ್ಕೃತಗೊಳಿಸಲು, ಪರಿಹಾರ ಧನದ ಪ್ರಮಾಣ ಹೆಚ್ಚಿಸಲು ಅವಕಾಶ ಕಲ್ಪಿಸಿ ದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಸುದೀರ್ಘ ಚರ್ಚೆ, ಬೇಡಿಕೆಗಳನ್ನು ಪರಿಗಣಿಸಿದ ಜಿಲ್ಲಾಧಿಕಾರಿ, ಸ್ಥಳೀಯರ ಭಾವನೆಗಳಿಗೆ ಗೌರವ ನೀಡಲಾಗುವುದು. ನಿಮ್ಮ ಮನವಿಗಳನ್ನು ಪುರಸ್ಕರಿಸಲಾಗು ವುದು. ಎಕರೆಗೆ ತಲಾ 40 ಲಕ್ಷ ರೂ. ಗಳಂತೆ ಪರಿಹಾರ ದರ ನಿಗದಿಪಡಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡ ಲಾಗುವುದು ಎಂದರು. ಸಭೆಯನ್ನು ಕೈಗಾ ರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವಿಶೇಷ ಡಿ.ಸಿ. ಪ್ರಶಾಂತ್, ವಿಶೇಷ ಭೂ ಸ್ವಾಧೀನಾಧಿಕಾರಿ ಸುರೇಶ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಗುಲ್ಬರ್ಗ ವಿಮಾನ ನಿಲ್ದಾಣದ ಮಾದರಿಯಲ್ಲಿಯೇ ಹಾಸನ ವಿಮಾನ ನಿಲ್ದಾಣವನ್ನೂ ನಿರ್ಮಾಣ ಮಾಡುವುದಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆಗಳ ಅಭಿವೃದ್ಧಿಯಾದರೆ ಸುತ್ತಲ ಗ್ರಾಮಗಳಲ್ಲಿ ಜಮೀನಿನ ಬೆಲೆಯೂ ಹೆಚ್ಚಲಿದೆ. ಮೂಲಸೌಕರ್ಯವೂ ಅಭಿವೃದ್ಧಿ ಕಾಣಲಿದೆ.- ಅಕ್ರಂ ಪಾಷ, ಜಿಲ್ಲಾಧಿಕಾರಿ

Translate »